ದೇವಸ್ಥಾನ, ಚರ್ಚ್, ಮಸೀದಿ ಓಪನ್, ಪಾಲಿಸಲೇ ಬೇಕು ಫ್ರೀಡೌನ್‌ ಮೊದಲ ಹಂತದ ಕಟ್ಟುನಿಟ್ಟಿನ ರೂಲ್ಸ್!

ದೆಹಲಿ: ಕೊರೊನಾ ಕೂಪದಿಂದ ತಪ್ಪಿಸಿಕೊಳ್ಳೋಕೆ ದೇಶಕ್ಕೆ ಜಡಿದಿದ್ದ ಬೀಗ ಕಂಪ್ಲೀಟ್ ಓಪನ್ ಆಗಿದೆ. ಲಾಕ್​ಡೌನ್​ನಿಂದ ಬೆಂದು ಹೋಗಿದ್ದ ಜೀವಗಳು ತಣ್ಣಗೆ ಬದುಕು ಕಟ್ಟಿಕೊಳ್ತಿವೆ. ಲಾಕ್​ಡೌನ್ 5.O ರಿಲೀಫ್ ನಡುವೆ ಜೂನ್ 8ರಿಂದ ನವ ಜೀವನ ಆರಂಭವಾಗ್ತಿದೆ. ಆದ್ರೆ, ಮೊದಲ ಹಂತದ ನಡುವೆ ಜನರ ಬದುಕು ಹೇಗಿರಬೇಕು ಅನ್ನೋದು ಡಿಸೈಡ್ ಆಗಿದೆ. ದೇವಸ್ಥಾನ, ಶಾಪಿಂಗ್ ಮಾಲ್ ಬಾಗಿಲು ತೆರೆಯೋಕೆ ಗ್ರೀನ್ ಸಿಗ್ನಲ್​ ಸಿಕ್ಕಿದೆ. ಇದರ ಜೊತೆ ಜೊತೆಗೆ ಕೇಂದ್ರ ಸರ್ಕಾರ ಖಡಕ್ ರೂಲ್ಸ್​ಗಳನ್ನ ರಿಲೀಸ್ ಮಾಡಿದೆ. ಫ್ರೀಡೌನ್‌ ಮೊದಲ […]

ದೇವಸ್ಥಾನ, ಚರ್ಚ್, ಮಸೀದಿ ಓಪನ್, ಪಾಲಿಸಲೇ ಬೇಕು ಫ್ರೀಡೌನ್‌ ಮೊದಲ ಹಂತದ ಕಟ್ಟುನಿಟ್ಟಿನ ರೂಲ್ಸ್!
Follow us
ಆಯೇಷಾ ಬಾನು
|

Updated on:Jun 05, 2020 | 3:09 PM

ದೆಹಲಿ: ಕೊರೊನಾ ಕೂಪದಿಂದ ತಪ್ಪಿಸಿಕೊಳ್ಳೋಕೆ ದೇಶಕ್ಕೆ ಜಡಿದಿದ್ದ ಬೀಗ ಕಂಪ್ಲೀಟ್ ಓಪನ್ ಆಗಿದೆ. ಲಾಕ್​ಡೌನ್​ನಿಂದ ಬೆಂದು ಹೋಗಿದ್ದ ಜೀವಗಳು ತಣ್ಣಗೆ ಬದುಕು ಕಟ್ಟಿಕೊಳ್ತಿವೆ. ಲಾಕ್​ಡೌನ್ 5.O ರಿಲೀಫ್ ನಡುವೆ ಜೂನ್ 8ರಿಂದ ನವ ಜೀವನ ಆರಂಭವಾಗ್ತಿದೆ. ಆದ್ರೆ, ಮೊದಲ ಹಂತದ ನಡುವೆ ಜನರ ಬದುಕು ಹೇಗಿರಬೇಕು ಅನ್ನೋದು ಡಿಸೈಡ್ ಆಗಿದೆ. ದೇವಸ್ಥಾನ, ಶಾಪಿಂಗ್ ಮಾಲ್ ಬಾಗಿಲು ತೆರೆಯೋಕೆ ಗ್ರೀನ್ ಸಿಗ್ನಲ್​ ಸಿಕ್ಕಿದೆ. ಇದರ ಜೊತೆ ಜೊತೆಗೆ ಕೇಂದ್ರ ಸರ್ಕಾರ ಖಡಕ್ ರೂಲ್ಸ್​ಗಳನ್ನ ರಿಲೀಸ್ ಮಾಡಿದೆ.

ಫ್ರೀಡೌನ್‌ ಮೊದಲ ಹಂತದ ಗೈಡ್‌ಲೈನ್ಸ್ ರಿಲೀಸ್! ಯೆಸ್.. ಇನ್ನೆರಡು ದಿನ ಕಳೆದ್ರೆ ಭಗವಂತನ ದರ್ಶನ ಪಡೀಬೋದು. ಮಾಲ್​ಗಳಲ್ಲಿ ಹೆಜ್ಜೆಯೂರಿ ಶಾಪಿಂಗ್ ಕೂಡ ಮಾಡ್ಬೋದು. ಲಾಕ್​ಡೌನ್ 5.Oನಲ್ಲಿ ಮಂದಿರ, ಮಸೀದಿ, ಚರ್ಚ್ ಓಪನ್ ಮಾಡೋಕೂ ಮುನ್ನ ಹಲವು ರೂಲ್ಸ್ ಫಾಲೋ ಮಾಡ್ಬೇಕು ಅಂತ ಕೇಂದ್ರ ಆದೇಶಿಸಿದೆ. ಹಾಗಿದ್ರೆ, ಅಲ್ಲಿಗೆ ಹೋಗಬೇಕಾದ್ರೆ ನೀವು ಏನ್ ಮಾಡ್ಬೇಕು? ಶಾಪಿಂಗ್ ಮಾಲ್​​ನಲ್ಲಿ ನೀವು ಪಾಲಿಸಬೇಕಾದ ರೂಲ್ಸ್ ಏನು? ಅನ್ನೋದನ್ನೇ ಡೀಟೇಲಾಗಿ ನೋಡೋದಾದ್ರೆ.

ದೇವರ ದರ್ಶನಕ್ಕೆ ‘ರೂಲ್ಸ್’! ಜೂನ್ 08 ರಿಂದ ಧಾರ್ಮಿಕ ಕ್ಷೇತ್ರಗಳನ್ನು ತೆರೆಯೋಕೆ ಅನುಮತಿ ನೀಡಲಾಗಿದೆ. ಕಂಟೇನ್ಮೆಂಟ್​ ಜೋನ್ ಹೊರತುಪಡಿಸಿ ಎಲ್ಲಾ ಕಡೆ ಓಪನ್ ಮಾಡ್ಬೋದಾಗಿದೆ. ದೇಗುಲಗಳ ಬಾಗಿಲು ಓಪನ್ ಮಾಡೋಕು ಮುನ್ನ ಎಲ್ಲ ದೇವಸ್ಥಾನಗಳಲ್ಲಿ 25ರಿಂದ 30 ಡಿಗ್ರಿ ಎಸಿ ಬಳಸಬೇಕು ಅಂತ ರೂಲ್ಸ್ ಮಾಡಲಾಗಿದೆ. ಅಲ್ಲದೇ, ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಗೋಡೆ, ಮೂರ್ತಿಗಳನ್ನು ಮುಟ್ಟಿ ನಮಸ್ಕರಿಸುವುದು ಸಂಪೂರ್ಣ ನಿಷೇಧ ಹೇರಲಾಗಿದೆ.

ಪ್ರಾರ್ಥನೆ, ಭಜನೆಗೆ ಸಾಮಾನ್ಯ ಮ್ಯಾಟ್ ಬಳಸೆದಂತೆಯೂ ನಿಯಮ ಜಾರಿಗೆ ತರಲಾಗಿದೆ. ಭಕ್ತರು ತಮ್ಮ ಮನೆಗಳಿಂದಲೇ ಮ್ಯಾಟ್​ಗಳನ್ನು ತರಬೇಕು ಹಾಗೂ ಪಾದರಕ್ಷೆಗಳನ್ನು ತಮ್ಮ ವಾಹನಗಳಲ್ಲಿಯೇ ಬಿಟ್ಟು ಹೋಗಬೇಕು ಅಂತಲೂ ಕೇಂದ್ರದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಲ್ಲದೇ, ಅಡುಗೆ ಕೋಣೆಗಳು, ಊಟದ ಹಾಲ್​ನಲ್ಲಿ ಎಲ್ಲರೂ ಅಂತರ ಕಾಪಾಡಿಕೊಳ್ಳಬೇಕು ಅಂತ ನಿಯಮವಿದೆ. ಭಕ್ತರಿಗೆ ಕೈ ತೊಳೆಯಲು ಸ್ಯಾನಿಟೈಸರ್, ಸೋಪ್ ವ್ಯವಸ್ಥೆ ಕೂಡ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡ್ಬೇಕು ಅಂತ ಆದೇಶ ಹೊರಡಿಸಿಲಾಗಿದೆ. ಅದ್ರಲ್ಲೂ, ಕೊರೊನಾ ರೋಗದ ಲಕ್ಷಣಗಳು ಇಲ್ಲದಿದ್ರೆ ಮಾತ್ರ ಭಕ್ತರಿಗೆ ಪ್ರವೇಶ ನೀಡ್ಬೇಕು ಅಂತ ಖಡಕ್ ಆದೇಶ ಹೊರಬಿದ್ದಿದೆ.

ಶಾಪಿಂಗ್ ಮಾಲ್‌ ಪ್ರವೇಶಕ್ಕೂ ಮಾರ್ಗಸೂಚಿ! ಇನ್ನು, ಶಾಪಿಂಗ್ ಮಾಲ್​ಗಳನ್ನು ಓಪನ್ ಮಾಡೋಕೆ, ಅಲ್ಲಿಗೆ ಬರೋರು ಕೂಡ ಹತ್ತು ಹಲವು ರೂಲ್ಸ್ ಪಾಲಿಸಲೇಬೇಕು. ಹಾಗಿದ್ರೆ ಶಾಪಿಂಗ್ ಜೊತೆ ಜೊತೆಗೆ ಏನ್ ರೂಲ್ಸ್ ಫಾಲೋ ಮಾಡ್ಬೇಕು ಅನ್ನೋದನ್ನ ನೋಡೋದಾದ್ರೆ.

ಶಾಪಿಂಗ್ ಮಾಲ್​​ಗೂ ರೂಲ್ಸ್: ಇನ್ನು, ಜೂನ್ 8ರಿಂದಲೇ ಶಾಪಿಂಗ್ ಮಾಲ್​ಗಳ ಬಾಗಿಲು ತೆರೆಯೋಕೆ ಅಣಿಯಾಗಿದೆ. ಆದ್ರೆ, ಶಾಪಿಂಗ್ ಮಾಲ್​ಗಳಿಗೆ 65 ವರ್ಷ ಮೇಲ್ಪಟ್ಟವರು ಬರುವಂತಿಲ್ಲ ಅಂತ ರೂಲ್ಸ್ ಹೊರಬಿದ್ದಿದೆ. ಅದ್ರಲ್ಲೂ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಭೇಟಿ ನೀಡಂಗೇ ಇಲ್ಲ. ಇನ್ನು ಕೊರೊನಾ ಸೋಂಕಿನ ಲಕ್ಷಣ ಇಲ್ಲದವರು ಮಾತ್ರ ಮಾಲ್​ಗಳಿಗೆ ಎಂಟ್ರಿ. ಮಾಲ್​ನ ಅಂಗಡಿಗಳಲ್ಲಿ ಕನಿಷ್ಠ ಸಂಖ್ಯೆ ಗ್ರಾಹಕರು ಮಾತ್ರ ಇರಬೇಕು ಹಾಗೂ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು, ಅಂತರ ಕಾಪಾಡಿಕೊಳ್ಳಬೇಕು ಅಂತ ಆದೇಶಿಸಲಾಗಿದೆ. ಅಲ್ದೇ, ಮಾಲ್​​ಗಳಲ್ಲಿರೋ ಫುಡ್ ಕೋರ್ಟ್​ನಲ್ಲಿ ಶೇಕಡ 50 ಕ್ಕಿಂತ ಹೆಚ್ಚಿನ ಗ್ರಾಹಕರು ಇರೊಂಗಿಲ್ಲ ಅಂತ ನಿಯಮ ಜಾರಿಗೆ ತರಲಾಗಿದೆ. ಜೊತೆಗೆ ಫುಡ್ ಕೋರ್ಟ್ ಸಿಬ್ಬಂದಿ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ.

ಇಷ್ಟೇ ಅಲ್ಲ, ಮಾಲ್​ನಲ್ಲಿ ರೆಸ್ಟೋರೆಂಟ್​ನಲ್ಲಿ ಶೇಕಡ 50 ರಷ್ಟು ಮಾತ್ರ ಆಸನ ವ್ಯವಸ್ಥೆ ಅಂತಲೂ ರೂಲ್ಸ್ ಜಾರಿಗೆ ತರಲಾಗಿದೆ. ಪ್ರತಿ ಗ್ರಾಹಕರು ಬದಲಾದ ಮೇಲೆ ಟೇಬಲ್ ಸ್ಯಾನಿಟೈಸ್ ಮಾಡಬೇಕು, ಬಳಕೆಯಾದ ಎಲ್ಲ ವಸ್ತುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡೋಡು ಕಡ್ಡಾಯವಾಗಿದೆ. ಮಾಲ್​​ಗಳಲ್ಲಿರೋ ಫುಡ್ ಕೋರ್ಟ್​ನಲ್ಲಿ ಸಾಮಾಜಿಕ ಅಂತರ ಕಾಪಾಡುವ ರೀತಿ ಆಸನದ ವ್ಯವಸ್ಥೆ ಇರಬೇಕು ಅಂತ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ.

ಗೇಮಿಂಗ್ ಹಾಗೂ ಮಕ್ಕಳ ಆಟದ ಪ್ರದೇಶ ಕೂಡ ಕ್ಲೋಸ್! ಶಾಪಿಂಗ್ ಮಾಲ್ ಓಪನ್ ಆಯ್ತಲ್ಲ ಅಂತ ಎಲ್ರೂ ಖುಷಿಯಾಗಿದ್ರೆ, ಸಿನಿಪ್ರಿಯರಿಗೆ ನಿರಾಸೆಯಾಗಿದೆ. ಶಾಪಿಂಗ್ ಮಾಲ್​ಗಳಲ್ಲಿ ಸಿನಿಮಾ ಹಾಲ್ ಬಂದ್ ಆಗಿರಲಿದ್ದು ಚಿತ್ರಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೇ, ಮಾಲ್​ಗಳಲ್ಲಿ ಗೇಮಿಂಗ್, ಮಕ್ಕಳ ಆಟದ ಪ್ರದೇಶ ಕೂಡ ಬಂದ್ ಆಗಿರಲಿವೆ. ಸೋಂಕು ಶಂಕಿತ ವ್ಯಕ್ತಿಗಳಿದ್ರೆ ತಕ್ಷಣವೇ ಪ್ರತ್ಯೇಕ ಕೋಣೆಯಲ್ಲಿ ಕೂರಿಸಬೇಕು ಹಾಗೂ ಕೂಡಲೇ ಹತ್ತಿರದ ಆಸ್ಪತ್ರೆಗೆ ಮಾಹಿತಿ ನೀಡಬೇಕು ಅಂತಲೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಖಡಕ್ ಆದೇಶ ಹೊರಬಿದ್ದಿದೆ.

ಒಟ್ನಲ್ಲಿ ಇನ್ನೊಂದು ದಿನ ಕಳೆದರೆ, ದೇಗುಲದ ಬಾಗಿಲು ಓಪನ್ ಆಗ್ತಿದೆ. ಶಾಪಿಂಗ್ ಯಾವಾಗಪ್ಪ ಮಾಡೋದು ಅನ್ನೋ ಮಹಿಳಾ ಮಣಿಗಳ ಕನಸು ಕೊನೆಗೂ ನನಸಾಗೋ ಕಾಲ ಬಂದಿದೆ. ಆದ್ರೆ ಧಾರ್ಮಿಕ ಕ್ಷೇತ್ರಗಳು, ಶಾಪಿಂಗ್ ಮಾಲ್​ಗಳನ್ನ ಓಪನ್ ಮಾಡೋಕೆ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ರೂಲ್ಸ್ ಫಾಲೋ ಮಾಡಲೇ ಬೇಕು. ಗೈಡ್​​ಲೈನ್ಸ್ ಏನಾದ್ರೂ ಉಲ್ಲಂಘನೆಯಾದ್ರೆ ಬೀಗ ಬೀಳೋದು ಪಕ್ಕಾ. ಫ್ರೀಡೌನ್ ಬಿಟ್ಟಿದ್ದಾರೆ ಅಂತ ಯಾಮಾರಿದ್ರೋ, ರೂಲ್ಸ್ ಬ್ರೇಕ್ ಮಾಡಿದ್ರೋ ಸಂಕಷ್ಟ ಕಟ್ಟಿಟ್ಟ ಬುತ್ತಿ.

Published On - 6:47 am, Fri, 5 June 20