
ಮೈಸೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಸಮಸ್ಯೆ ಶುರುವಾಗಿದೆ. ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ಬೆಳಗ್ಗೆಯಿಂದ 2 ಕೋತಿಗಳು ನಿಗೂಢವಾಗಿ ಸಾವಿಗೀಡಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮಂಗನಕಾಯಿಲೆ ಆತಂಕ ಶುರುವಾಗಿದೆ.
ಪ್ರತಿದಿನ ಗ್ರಾಮದ ತೋಟದಲ್ಲಿ ಕೋತಿಗಳು ಓಡಾಡಿಕೊಂಡ ಇರುತ್ತಿದ್ದವು. ಸದ್ಯ ಮೂರು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಅನುಮಾನಾಸ್ಪದವಾಗಿ ಮೃತಪಡುತ್ತಿರುವ ಕೋತಿಗಳ ಸಾವಿನಿಂದ ಮಂಗನಕಾಯಿಲೆ ಭೀತಿ ಶುರುವಾಗಿದೆ.
Published On - 1:22 pm, Mon, 20 April 20