ಪಾದರಾಯನಪುರ ಗೂಂಡಾಗಿರಿ: ಜಮೀರ್ ವಿರುದ್ಧ ಯಡಿಯೂರಪ್ಪ ಕೆಂಡಾಮಂಡಲ
ಬೆಂಗಳೂರು: ಪಾದರಾಯನಪುರದಲ್ಲಿ ಗೂಂಡಾಗಿರಿ ಪ್ರಕರಣ ಸಂಬಂಧ ಶಾಸಕ ಜಮೀರ್ ಕೇಳಿರುವ ಪ್ರಶ್ನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಅವರ್ಯಾರು ಕೇಳೋದಕ್ಕೆ? ಅವರಿಗೇನು ಸಂಬಂಧ? ಎಲ್ಲಿ ಹೋಗಬೇಕು ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾಡುವ ಕೆಲಸಕ್ಕೆ ಅವರ ಅಪ್ಪಣೆ ಪಡೆದುಕೊಂಡು ಹೋಗಬೇಕಾ? ಎಂದು ಕೆಂಡಕಾರಿದ್ದಾರೆ. ಈ ತರಹ ಹೇಳಿಕೆ ಕೊಡೋದಕ್ಕೆ ಅವರಿಗೂ ಇದಕ್ಕೂ ಏನು ಸಂಬಂಧ? ಒಂದು ರೀತಿ ಇಂತಹ ಘಟನೆಗಳಿಗೆ ಅವರು ಪ್ರಚೋದನೆ ಕೊಡ್ತಿದ್ದಾರೆ ಎಂದು ಅನ್ಕೋಬೇಕಾ? ಅವರೇ ಈ ಘಟನೆ ಹಿಂದೆ ಇದಾರೆ ಅಂತ […]
ಬೆಂಗಳೂರು: ಪಾದರಾಯನಪುರದಲ್ಲಿ ಗೂಂಡಾಗಿರಿ ಪ್ರಕರಣ ಸಂಬಂಧ ಶಾಸಕ ಜಮೀರ್ ಕೇಳಿರುವ ಪ್ರಶ್ನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಅವರ್ಯಾರು ಕೇಳೋದಕ್ಕೆ? ಅವರಿಗೇನು ಸಂಬಂಧ? ಎಲ್ಲಿ ಹೋಗಬೇಕು ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾಡುವ ಕೆಲಸಕ್ಕೆ ಅವರ ಅಪ್ಪಣೆ ಪಡೆದುಕೊಂಡು ಹೋಗಬೇಕಾ? ಎಂದು ಕೆಂಡಕಾರಿದ್ದಾರೆ.
ಈ ತರಹ ಹೇಳಿಕೆ ಕೊಡೋದಕ್ಕೆ ಅವರಿಗೂ ಇದಕ್ಕೂ ಏನು ಸಂಬಂಧ? ಒಂದು ರೀತಿ ಇಂತಹ ಘಟನೆಗಳಿಗೆ ಅವರು ಪ್ರಚೋದನೆ ಕೊಡ್ತಿದ್ದಾರೆ ಎಂದು ಅನ್ಕೋಬೇಕಾ? ಅವರೇ ಈ ಘಟನೆ ಹಿಂದೆ ಇದಾರೆ ಅಂತ ಭಾವಿಸ್ಕೋಬೇಕಾ? ಶಾಸಕರಾಗಿ ಮೊದಲು ಜನರಿಗೆ ತಿಳುವಳಿಕೆ ಹೇಳಲಿ. ಅದರ ಬದಲು ಸಮರ್ಥನೆ ಮಾಡಿಕೊಳ್ಳೋದು ಸರಿಯಲ್ಲ. ತಪ್ಪು ಮಾಡಿದವರು ಯಾರೇ ಇದ್ರೂ ಕಠಿಣ ಕ್ರಮ
ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಬೇಕಾದವರು ಈ ರೀತಿ ಹೇಳಿಕೆ ಕೊಡ್ತಾರೆ. ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಶಾಸಕ ಜಮೀರ್ ಅಹಮದ್ ವಿರುದ್ಧ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 11:48 am, Mon, 20 April 20