ಪಾದರಾಯನಪುರ ಗೂಂಡಾಗಿರಿ: ಜಮೀರ್ ಪೊಲೀಸರಿಗೆ ಕೇಳಿದ ಬಾಲಿಶ ಪ್ರಶ್ನೆ ಏನು?
ಬೆಂಗಳೂರು: ದೇಶದಲ್ಲಿ ಅಷ್ಟೇ ಏಕೆ ಇಡೀ ಜಗತ್ತಿನಲ್ಲಿ ಲಾಕ್ಡೌನ್ ಚಾಲ್ತಿಯಲ್ಲಿದೆ. ಹೇಳ ಕೇಳಿ ಇದು ಜನತಾ ಕರ್ಫ್ಯೂ ಕಾಲ ಪೊಲೀಸರಿಗೂ 24/7 ಡ್ಯೂಟಿ ಇರುತ್ತದೆ. ಆದ್ರೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಪಾದರಾಯನಪುರ ಗೂಂಡಾಗಳ ಬೆಂಬಲಕ್ಕೆ ನಿಂತಿರುವ ದಾಟಿಯಲ್ಲಿ ಪೊಲೀಸರು ಆ ಹೊತ್ತಿನಲ್ಲಿ ಅಲ್ಲಿಗೆ ಯಾಕೆ ಹೋಗಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. ಆದ್ರೆ, ಜನತಾ ಕರ್ಫ್ಯೂ ಕಾಲದಲ್ಲಿ ಪೊಲೀಸರು 24/7 ಡ್ಯೂಟಿಯಲ್ಲಿ ಇರುತ್ತಾರೆ ಎಂಬುದು ಜಮೀರ್ಗೆ ಹೇಗೆ ಅರ್ಥವಾಗ ಬೇಕು ಅಲ್ವಾ? ನಿನ್ನೆ ಕ್ವಾರಂಟೈನ್‌ಗೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದರು. […]
ಬೆಂಗಳೂರು: ದೇಶದಲ್ಲಿ ಅಷ್ಟೇ ಏಕೆ ಇಡೀ ಜಗತ್ತಿನಲ್ಲಿ ಲಾಕ್ಡೌನ್ ಚಾಲ್ತಿಯಲ್ಲಿದೆ. ಹೇಳ ಕೇಳಿ ಇದು ಜನತಾ ಕರ್ಫ್ಯೂ ಕಾಲ ಪೊಲೀಸರಿಗೂ 24/7 ಡ್ಯೂಟಿ ಇರುತ್ತದೆ. ಆದ್ರೆ ಸ್ಥಳೀಯ ಶಾಸಕ ಜಮೀರ್ ಅಹಮದ್ ಪಾದರಾಯನಪುರ ಗೂಂಡಾಗಳ ಬೆಂಬಲಕ್ಕೆ ನಿಂತಿರುವ ದಾಟಿಯಲ್ಲಿ ಪೊಲೀಸರು ಆ ಹೊತ್ತಿನಲ್ಲಿ ಅಲ್ಲಿಗೆ ಯಾಕೆ ಹೋಗಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. ಆದ್ರೆ, ಜನತಾ ಕರ್ಫ್ಯೂ ಕಾಲದಲ್ಲಿ ಪೊಲೀಸರು 24/7 ಡ್ಯೂಟಿಯಲ್ಲಿ ಇರುತ್ತಾರೆ ಎಂಬುದು ಜಮೀರ್ಗೆ ಹೇಗೆ ಅರ್ಥವಾಗ ಬೇಕು ಅಲ್ವಾ?
ನಿನ್ನೆ ಕ್ವಾರಂಟೈನ್‌ಗೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದರು. ರಾತ್ರಿ ವೇಳೆ ಕ್ವಾರಂಟೈನ್ ಮಾಡುವುದು ಬೇಡ ಅಂದಿದ್ದ ಬಿಬಿಎಂಪಿ ಆಯುಕ್ತರ ಜತೆ ನಾನು ಈ ಬಗ್ಗೆ ಮಾತಾಡಿದ್ದೇನೆ. ಬೆಳಗ್ಗೆ ನಾನೇ ಬರುವುದಾಗಿ ಅವರಿಗೆ ತಿಳಿಸಿದ್ದೆ. ಹಗಲಿನ ವೇಳೆ ಹೋಗಬೇಕಿತ್ತು ಎಂದು ನಾನು ಹೇಳಿದ್ದೇನೆ. ಕೊರೊನಾ ಸೋಂಕಿತರಿದ್ದರೆ ಒದ್ದು ಕರೆದುಕೊಂಡು ಹೋಗಿ. ಶಂಕಿತರು ಇದ್ದಾಗ ಹಗಲು ವೇಳೆ ಹೋಗಬೇಕಾಗಿತ್ತು. ಒಬ್ರೂ ಇಬ್ಬರಲ್ಲ ಅಲ್ಲಿ ಸುಮಾರು 58 ಜನರಿದ್ದಾರೆ. ಹೀಗಾಗಿ ಹಗಲು ವೇಳೆ ಹೋಗಬೇಕಿತ್ತು ಎಂದಿದ್ದಾರೆ.
Published On - 11:25 am, Mon, 20 April 20