ಕೊರೊನಾ ಅಬ್ಬರದ ನಡುವೆಯೂ ಜೂಜಾಟ ಜೋರು! ಎಲ್ಲಿ?

ತುಮಕೂರು: ಜಗತ್ತು ಕೊರೊನಾದಿಂದ ನಲುಗಿ ಹೋಗಿದ್ದರು ಇಲ್ಲೊಂದಿಷ್ಟು ಜನ ಅವರ ಪ್ರಪಂಚದಲ್ಲೇ ಮುಳುಗಿಹೋಗಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೂದಿಬೆಟ್ಟ ಹಾಗೂ ಹೊಸದುರ್ಗ ಸಮೀಪ ನೂರಕ್ಕೂ ಹೆಚ್ಚು ಜನ ಕೈಯಲ್ಲಿ ಇಸ್ಪೀಟ್ ಹಿಡಿದು ಜೂಜು ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ಪಕ್ಕದ ಆಂಧ್ರದಿಂದ ನೂರಾರು ಜನ ಜೂಜುಕೋರರು ಇಲ್ಲಿಗೆ ಆಗಮಿಸುತ್ತಿದ್ದು, ಪ್ರತಿದಿನ ಇಲ್ಲಿ ನಿರಂತರವಾಗಿ ಜೂಜು ದಂಧೆ ನಡೆಯುತ್ತಿದೆ. ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದ್ದು, ಕೂಡಲೇ ಪೊಲೀಸರು ಈ ದಂಧೆಗೆ ಬ್ರೇಕ್ ಹಾಕಬೇಕೆಂದು […]

ಕೊರೊನಾ ಅಬ್ಬರದ ನಡುವೆಯೂ ಜೂಜಾಟ ಜೋರು! ಎಲ್ಲಿ?
Edited By:

Updated on: Jul 23, 2020 | 1:54 PM

ತುಮಕೂರು: ಜಗತ್ತು ಕೊರೊನಾದಿಂದ ನಲುಗಿ ಹೋಗಿದ್ದರು ಇಲ್ಲೊಂದಿಷ್ಟು ಜನ ಅವರ ಪ್ರಪಂಚದಲ್ಲೇ ಮುಳುಗಿಹೋಗಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೂದಿಬೆಟ್ಟ ಹಾಗೂ ಹೊಸದುರ್ಗ ಸಮೀಪ ನೂರಕ್ಕೂ ಹೆಚ್ಚು ಜನ ಕೈಯಲ್ಲಿ ಇಸ್ಪೀಟ್ ಹಿಡಿದು ಜೂಜು ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ಪಕ್ಕದ ಆಂಧ್ರದಿಂದ ನೂರಾರು ಜನ ಜೂಜುಕೋರರು ಇಲ್ಲಿಗೆ ಆಗಮಿಸುತ್ತಿದ್ದು, ಪ್ರತಿದಿನ ಇಲ್ಲಿ ನಿರಂತರವಾಗಿ ಜೂಜು ದಂಧೆ ನಡೆಯುತ್ತಿದೆ.

ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದ್ದು, ಕೂಡಲೇ ಪೊಲೀಸರು ಈ ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Published On - 12:01 pm, Wed, 22 July 20