ಅಮಿತಾಭ್ ನನ್ನ ಆತ್ಮೀಯ, ಆತನನ್ನು Sir ಜೀ ಎಂದು ಹೇಗೆ ಕರೆಯಲಿ? ಅಷ್ಟಕ್ಕೇ..

ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಹಠಾತ್ ಅಗಲಿಕೆಯ ಬಳಿಕ ಬಾಲಿವುಡ್​ ಚಿತ್ರರಂಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಮಧ್ಯೆ ಒಂದು ಹಳೇ ಪ್ರಸಂಗ ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಅದು ಯಾವುದೆಂದರೆ ಬಾಲಿವುಡ್​ ದಂತಕಥೆ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹಾಗೂ ಖ್ಯಾತ ಹಾಸ್ಯ ನಟ-ಸಂಭಾಷಣೆಕಾರ ಖಾದರ್​ ಖಾನ್​ರ ಸ್ನೇಹ ಮತ್ತು ವಿರಸ. 80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚುತ್ತಿದ್ದ ಅಮಿತಾಭ್​ ಮತ್ತು ತಮ್ಮ ಹರಿತವಾದ ಬರವಣಿಗೆಯಿಂದ ಫೇಮಸ್​ ಆಗಿದ್ದ ಸಂಭಾಷಣೆಕಾರ ಖಾದರ್​ ಖಾನ್ ನಡುವೆ […]

ಅಮಿತಾಭ್ ನನ್ನ ಆತ್ಮೀಯ, ಆತನನ್ನು Sir ಜೀ ಎಂದು ಹೇಗೆ ಕರೆಯಲಿ? ಅಷ್ಟಕ್ಕೇ..
Follow us
KUSHAL V
| Updated By:

Updated on:Jul 23, 2020 | 1:48 PM

ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಹಠಾತ್ ಅಗಲಿಕೆಯ ಬಳಿಕ ಬಾಲಿವುಡ್​ ಚಿತ್ರರಂಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಮಧ್ಯೆ ಒಂದು ಹಳೇ ಪ್ರಸಂಗ ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಅದು ಯಾವುದೆಂದರೆ ಬಾಲಿವುಡ್​ ದಂತಕಥೆ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹಾಗೂ ಖ್ಯಾತ ಹಾಸ್ಯ ನಟ-ಸಂಭಾಷಣೆಕಾರ ಖಾದರ್​ ಖಾನ್​ರ ಸ್ನೇಹ ಮತ್ತು ವಿರಸ.

80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚುತ್ತಿದ್ದ ಅಮಿತಾಭ್​ ಮತ್ತು ತಮ್ಮ ಹರಿತವಾದ ಬರವಣಿಗೆಯಿಂದ ಫೇಮಸ್​ ಆಗಿದ್ದ ಸಂಭಾಷಣೆಕಾರ ಖಾದರ್​ ಖಾನ್ ನಡುವೆ ಅಗಾಧವಾದ ಸ್ನೇಹವಿತ್ತು. ಅದೆಷ್ಟೋ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ದೋಸ್ತಿಗಳು ಸಾಕಷ್ಟು ಯಶಸ್ಸನ್ನೂ ಕಂಡಿದ್ದರು.

ಈ ಮಧ್ಯೆ ಒಂದು ಸಣ್ಣ ಘಟನೆ, ಒಂದು ಸಣ್ಣ ಅಪಾರ್ಥ ದೋಸ್ತಿಗಳ ನಡುವೆ ವಿರಸ ತಂದುಬಿಟ್ಟಿತು. ಈ ಬಗ್ಗೆ ಖುದ್ದು ಖಾದರ್​ ಖಾನ್​ರವರೇ ಟಿ.ವಿ. ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು. ಆ ಸಂದರ್ಶನದ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

‘ಅಮಿತ್ ಯಾವಾಗಿನಿಂದ Sir ಜೀ ಆದ?’ ನಾನು ಅಮಿತಾಭ್​ರನ್ನ ಯಾವಾಗಲೂ ಅಮಿತ್​ ಎಂದು ಅಕ್ಕರೆಯಿಂದ ಕರೆಯುತ್ತಿದ್ದೆ. ಅದೊಂದು ದಿನ ಚಿತ್ರವೊಂದರ ಶೂಟಿಂಗ್​ ವೇಳೆ ಸಿನಿಮಾದ ನಿರ್ಮಾಪಕರೊಬ್ಬರು.. ನನಗೆ ನೀವು Sir ಜೀ ರನ್ನ ಭೇಟಿಯಾದ್ರಾ ಅಂತಾ ಕೇಳಿದ್ರು. ನಾನು ಯಾವ Sir ಜೀ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ನಿಮಗೆ Sir ಜೀ ಯಾರೆಂದು ಗೊತ್ತಿಲ್ಲವೇ? ಎಂದು ಹೇಳಿ ಅನತಿ ದೂರದಲ್ಲಿದ್ದ ಅಮಿತಾಭ್​ ಕಡೆ ಸನ್ನೆ ಮಾಡಿದ್ದರು. ಆಗ ನಾನು ಅದು ಅಮಿತ್​. ಆತ ಯಾವಾಗಿನಿಂದ Sir ಜೀ ಎಂದು ಕರೆಸಿಕೊಳ್ಳಲು ಶುರುಮಾಡಿದ ಎಂದು ಹೇಳಿಬಿಟ್ಟೆ. ಅಷ್ಟೇ..

ಅಮಿತಾಭ್ ನನ್ನ ಆತ್ಮೀಯ. ಹೀಗಾಗಿ, ನನ್ನ ಮನಸ್ಸು ಅವರನ್ನ Sir ಜೀ ಎಂದು ಸಂಬೋಧಿಸಲು ಒಪ್ಪಲಿಲ್ಲ. ಆದರೆ, ಆ ಒಂದು ಮಾತೇ ನಮ್ಮಿಬ್ಬರ ಸ್ನೇಹ ಮುರಿಯಲು ಕಾರಣವಾಯ್ತು ಎಂದು ಖಾದರ್​ ಇದೀಗ ವಿಡಿಯೋದಲ್ಲಿ  ಹೇಳಿದ್ದಾರೆ.

ಇದೊಂದೇ ಮಾತಿಗೋ ಏನೋ ಗೊತ್ತಿಲ್ಲ.. ಚಿತ್ರರಂಗದಲ್ಲಿ ಖಾದರ್​ ಖಾನ್​ಗೆ ಇದ್ದ ಬಹುಬೇಡಿಕೆ ಕಾಲಕ್ರಮೇಣ ಕಡಿಮೆಯಾಗ್ತಾ ಹೋಯ್ತಂತೆ. ಸಾಕಷ್ಟು ಒಳ್ಳೇ ಅವಕಾಶಗಳನ್ನು ಸಹ ಕಳೆದುಕೊಂಡರಂತೆ. ಬಳಿಕ, ಇಬ್ಬರಿಗೂ ಮತ್ತೆ ಒಂದಾಗುವ ಸಂದರ್ಭವೇ ಒದಗಿಬರಲಿಲ್ಲವಂತೆ. ಒಟ್ನಲ್ಲಿ, ಒಂದು ಸಣ್ಣ ಅಪಾರ್ಥ ಅಥವಾ ಅಹಂ ಭಾವನೆಯಿಂದ ಬಾಲಿವುಡ್​ ಅತ್ಯುತ್ತಮ ಕೊಡುಗೆಯಿಂದ ವಂಚಿತವಾಗಿಬಿಡ್ತು.

ಖಾದರ್​ ಖಾನ್​ ಸಂದರ್ಶನದ ತುಣುಕು: https://www.facebook.com/watch/?v=2605881069652116

Published On - 11:39 am, Wed, 22 July 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ