ಮಂಗಳೂರು: ಮೀನು ಸಾಗಾಟ ಮಾಡುವ ಟೆಂಪೊದಲ್ಲಿ ಭಾರೀ ಪ್ರಮಾಣದ ಗೋಮಾಂಸ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲು ಬಳಿ ನಡೆದಿದೆ. ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ.
ಸಂದೇಹ ಬಂದ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಅಡ್ಯಾರ್ ಕಣ್ಣೂರಿನಿಂದ ಟೆಂಪೋ ಬೆನ್ನಟ್ಟಿ ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ಮಾಹಿತಿ ನೀಡಿದ್ರು. ಈ ವೇಳೆ ಮಾಹಿತಿ ಆಧರಿಸಿ ಪೊಲೀಸರು ಟೆಂಪೋ ಅಡ್ಡಕಟ್ಟಿ ಟೆಂಪೋದಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಹಾಗೂ ಎರಡು ಸಾವಿರ ಕೆ.ಜಿಗೂ ಅಧಿಕ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಮಾಂಸ ತರುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.