ಗರ್ಭಿಣಿಯರಿಗೆ ಕಂಟಕ: ಕೊರೊನಾ ಭಯದಲ್ಲೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಗರ್ಭಿಣಿಯರು!

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯಪಟ್ಟು ಗರ್ಭಿಣಿಯರು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ವೈದ್ಯರು ಹೊರ ಹಾಕಿದ್ದಾರೆ. ಕೊರೊನಾ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸದೆ ಕಳೆದ ಏಳೆಂಟು ತಿಂಗಳಿಂದ ಎಲ್ಲಾ ಕಡೆ ಪಸರಿಸಿದೆ. ಈ ನಡುವೆ ಗರ್ಭಿಣಿಯರು ಕೊರೊನಾಗೆ ಹೆದರಿ ಆಸ್ಪತ್ರೆಗಳಿಗೆ ಹೋಗದೆ ನಿರ್ಲಕ್ಷ್ಯವಹಿಸಿ ತಮ್ಮ ಸಾವಿಗೆ ಕಾರಣರಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮುನ್ನ ಕೊರೊನಾ ಟೆಸ್ಟ್ ಮಾಡಿಸುವುದು ಕಡ್ಡಾಯ. ಹೀಗಾಗಿ ಕೊವಿಡ್ ಟೆಸ್ಟ್ ಮಾಡಿದ್ರೆ ಏನಾಗುತ್ತೋ, ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಏನ್ ಮಾಡೋದು ಅನ್ನೋ […]

ಗರ್ಭಿಣಿಯರಿಗೆ ಕಂಟಕ: ಕೊರೊನಾ ಭಯದಲ್ಲೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಗರ್ಭಿಣಿಯರು!

Updated on: Oct 23, 2020 | 8:29 AM

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯಪಟ್ಟು ಗರ್ಭಿಣಿಯರು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ವೈದ್ಯರು ಹೊರ ಹಾಕಿದ್ದಾರೆ. ಕೊರೊನಾ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸದೆ ಕಳೆದ ಏಳೆಂಟು ತಿಂಗಳಿಂದ ಎಲ್ಲಾ ಕಡೆ ಪಸರಿಸಿದೆ. ಈ ನಡುವೆ ಗರ್ಭಿಣಿಯರು ಕೊರೊನಾಗೆ ಹೆದರಿ ಆಸ್ಪತ್ರೆಗಳಿಗೆ ಹೋಗದೆ ನಿರ್ಲಕ್ಷ್ಯವಹಿಸಿ ತಮ್ಮ ಸಾವಿಗೆ ಕಾರಣರಾಗುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮುನ್ನ ಕೊರೊನಾ ಟೆಸ್ಟ್ ಮಾಡಿಸುವುದು ಕಡ್ಡಾಯ. ಹೀಗಾಗಿ ಕೊವಿಡ್ ಟೆಸ್ಟ್ ಮಾಡಿದ್ರೆ ಏನಾಗುತ್ತೋ, ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಏನ್ ಮಾಡೋದು ಅನ್ನೋ ಭಯದಲ್ಲೇ ಗರ್ಭಿಣಿಯರು ಆಸ್ಪತ್ರೆಗಳ ಕಡೆ ಮುಖ ಮಾಡುತ್ತಿಲ್ಲ. ಪ್ರತಿ ತಿಂಗಳು ಚೆಕಪ್​ಗೆ ಹೋಗದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಅಲ್ಲದೆ ಕೆಲ ಆಸ್ಪತ್ರೆಗಳು ಕೋವಿಡ್ ಕೇರ್ ಸೆಂಟರ್​ಗಳಾಗಿದ್ದು, ಸೋಂಕಿತರೇ ಹೆಚ್ಚಾಗಿ ಓಡಾಡುತ್ತಿರುತ್ತಾರೆ.

ಜೊತೆಗೆ ಭಾಗಶಃ ವೈದ್ಯರು ಕೋವಿಡ್ ಡ್ಯೂಟಿ ಮಾಡುತ್ತಿದ್ದಾರೆ. ಹೀಗಾಗಿ ವೈದ್ಯರಿಂದ ನಮಗೆ ಕೊರೊನಾ ಬಂದ್ರೆ ಎಂಬ ಕಾರಣಕ್ಕೆ ಚೆಕಪ್​ಗೆ ಹೋಗಲು ಗರ್ಭೀಣಿಯರು ಹಿಂದೇಟು ಹಾಕುತ್ತಿದ್ದಾರೆ. ಕೊನೆಗೆ ಅಂತಿಮ ಘಟ್ಟದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಸೂಕ್ತ ಕಾಲಕ್ಕೆ ಚಿಕಿತ್ಸೆ ಪಡೆಯದೇ ಇರುವ ಕಾರಣ ಹುಟ್ಟುವ ಮಗುವಿಗೆ ನಾನಾ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ವೈದ್ಯರಿಗೆ ಚಿಕಿತ್ಸೆ ನೀಡಲಾಗದೆ ಗರ್ಭಿಣಿಯರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಏಪ್ರಿಲ್ ನಿಂದ ಆಗಸ್ಟ್ ತನಕ 32 ಗರ್ಭಿಣಿಯರ ಸಾವು:
ಇನ್ನು ಕೊರೊನಾ ಭಯದಿಂದಲೇ ಆಸ್ಪತ್ರೆಗೆ ಬಾರದೆ, ಸೂಕ್ತ ಕಾಲಕ್ಕೆ ಚಿಕಿತ್ಸೆ ಪಡೆಯದೆ ಏಪ್ರಿಲ್ ನಿಂದ ಆಗಸ್ಟ್ ತನಕ 32 ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಕೊರೊನಾ ಇದೆಯೋ ಇಲ್ವೋ ಎಂಬ ಆತಂಕದಲ್ಲೇ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿದೆ.