ಹಣ ವಸೂಲಿ ಮಾಡಲು ಈ ಆಸಾಮಿ ಮಚ್ಚು ಬೀಸಿದ್ದ.. ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಬೆಂಗಳೂರು: ಹಾಡು ಹಗಲೇ ಮಚ್ಚು ಹಿಡಿದು ಅಂಗಡಿ ಮುಂದೆ ದಾಂದಲೆ ನಡೆಸಿರುವ ಘಟನೆ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ನಡೆದಿದೆ. ಪುಂಡನೋರ್ವ ಮಚ್ಚು ಹಿಡಿದು ಅಂಗಡಿಯವರನ್ನ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಆ ವ್ಯಕ್ತಿ ಅಂಗಡಿಯವರಷ್ಟೇ ಅಲ್ಲದೆ ಅಂಗಡಿ ಪಕ್ಕ ನಿಂತವರಿಗೂ ಮಚ್ಚು ತೋರಿಸಿ ಓಡಿಸಿದ್ದಾನೆ. ಬೆಂಗಳೂರಿನ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ಮಳೆಗೆ ಅಂಗಡಿಗಳ ಬಳಿ ಆಸರೆ ಪಡೆದಿದ್ದ ಜನರಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ. ಬಳಿಕ ಅಂಗಡಿ ಮೇಲೆ ಮಚ್ಚು […]
ಬೆಂಗಳೂರು: ಹಾಡು ಹಗಲೇ ಮಚ್ಚು ಹಿಡಿದು ಅಂಗಡಿ ಮುಂದೆ ದಾಂದಲೆ ನಡೆಸಿರುವ ಘಟನೆ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ನಡೆದಿದೆ. ಪುಂಡನೋರ್ವ ಮಚ್ಚು ಹಿಡಿದು ಅಂಗಡಿಯವರನ್ನ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಆ ವ್ಯಕ್ತಿ ಅಂಗಡಿಯವರಷ್ಟೇ ಅಲ್ಲದೆ ಅಂಗಡಿ ಪಕ್ಕ ನಿಂತವರಿಗೂ ಮಚ್ಚು ತೋರಿಸಿ ಓಡಿಸಿದ್ದಾನೆ.
ಬೆಂಗಳೂರಿನ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ಮಳೆಗೆ ಅಂಗಡಿಗಳ ಬಳಿ ಆಸರೆ ಪಡೆದಿದ್ದ ಜನರಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ. ಬಳಿಕ ಅಂಗಡಿ ಮೇಲೆ ಮಚ್ಚು ಬೀಸಿ ಹಣ ನೀಡುವಂತೆ ಅಂಗಡಿಯವರಿಗೆ ಬೆದರಿಸಿದ್ದಾನೆ. ನಂತರ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮುನುಷ್ಯ ಹಣಕ್ಕಾಗಿ ಎಂತಹ ಕೃತ್ಯಕ್ಕೂ ಸಿದ್ದ ಎನ್ನುವುದಕ್ಕೇ ಇದು ಬಂದು ಉದಾಹರಣೆ.