ಕೊರೊನಾಘಾತದ ನಡುವೆ ಜನರಿಗೆ ‘ಕಣ್ಣೀರುಳ್ಳಿ’, 100ರ ಗಡಿ ದಾಟಿದ ಈರುಳ್ಳಿ ರೇಟ್

ಕೊರೊನಾಘಾತದ ನಡುವೆ ಜನರಿಗೆ ‘ಕಣ್ಣೀರುಳ್ಳಿ’, 100ರ ಗಡಿ ದಾಟಿದ ಈರುಳ್ಳಿ ರೇಟ್
ಈರುಳ್ಳಿ ದರದಲ್ಲಿ ಏರಿಕೆ

ದೆಹಲಿ: ಕೊರೊನಾದಿಂದಾ ಗಾಯ ಇನ್ನೂ ಮಾಸಿಲ್ಲ.. ಕೈಯಲ್ಲಿ ಕೆಲಸವಿಲ್ಲ.. ಜೀವನ ನಡೆಸೋಕೆ ಕಾಸಿಲ್ಲ.. ಸಾಲು ಸಾಲು ಹಬ್ಬಗಳ ಸರದಿ ಬೇರೆ.. ಹೇಗೋ ಹಬ್ಬ ಆಚರಿಸೋಣ ಅಂಥಾ ಜನ ಪ್ಲ್ಯಾನ್ ಮಾಡಿದ್ರು. ಆದ್ರೀಗ ಜನರಿಗೆ ಬಿಗ್ ಶಾಕ್ ಎದುರಾಗಿದೆ. ಈರುಳ್ಳಿ ಬೆಲೆ ಗಗನ ಕುಸುಮವಾಗಿದೆ. ಅಡುಗೆ ಕೋಣೆಗೆ ಎಂಟ್ರಿ ಕೊಟ್ಮೇಲೆ ಮೊದಲು ನೋಡೋದೆ ಈರುಳ್ಳಿ ಇದ್ಯಾ ಅಂಥಾ.. ಬ್ರೇಕ್​​ಫಾಸ್ಟ್​.. ಮಧ್ಯಾಹ್ನದ ಊಟ.. ಡಿನ್ನರ್​ಗೂ ಈರುಳ್ಳಿ ಇರ್ಲೇಬೇಕು. ಸೈಡ್ಸ್​ಗೂ ಈರುಳ್ಳೀ ಬೇಕೆ ಬೇಕು. ಆದ್ರೀಗ ಈರುಳ್ಳಿ ಅಂದ್ರೆ ಕಣ್ಣೀರು ತರಿಸ್ತಿದೆ. […]

Ayesha Banu

|

Oct 23, 2020 | 6:42 AM

ದೆಹಲಿ: ಕೊರೊನಾದಿಂದಾ ಗಾಯ ಇನ್ನೂ ಮಾಸಿಲ್ಲ.. ಕೈಯಲ್ಲಿ ಕೆಲಸವಿಲ್ಲ.. ಜೀವನ ನಡೆಸೋಕೆ ಕಾಸಿಲ್ಲ.. ಸಾಲು ಸಾಲು ಹಬ್ಬಗಳ ಸರದಿ ಬೇರೆ.. ಹೇಗೋ ಹಬ್ಬ ಆಚರಿಸೋಣ ಅಂಥಾ ಜನ ಪ್ಲ್ಯಾನ್ ಮಾಡಿದ್ರು. ಆದ್ರೀಗ ಜನರಿಗೆ ಬಿಗ್ ಶಾಕ್ ಎದುರಾಗಿದೆ. ಈರುಳ್ಳಿ ಬೆಲೆ ಗಗನ ಕುಸುಮವಾಗಿದೆ.

ಅಡುಗೆ ಕೋಣೆಗೆ ಎಂಟ್ರಿ ಕೊಟ್ಮೇಲೆ ಮೊದಲು ನೋಡೋದೆ ಈರುಳ್ಳಿ ಇದ್ಯಾ ಅಂಥಾ.. ಬ್ರೇಕ್​​ಫಾಸ್ಟ್​.. ಮಧ್ಯಾಹ್ನದ ಊಟ.. ಡಿನ್ನರ್​ಗೂ ಈರುಳ್ಳಿ ಇರ್ಲೇಬೇಕು. ಸೈಡ್ಸ್​ಗೂ ಈರುಳ್ಳೀ ಬೇಕೆ ಬೇಕು. ಆದ್ರೀಗ ಈರುಳ್ಳಿ ಅಂದ್ರೆ ಕಣ್ಣೀರು ತರಿಸ್ತಿದೆ. ದಸರಾ ಹಬ್ಬದ ಹೊತ್ತಲ್ಲೇ ಈರುಳ್ಳಿ ಬೆಲೆ ದಿಢೀರ್ ಗಗನಕ್ಕೇರಿದೆ. ಉಳ್ಳಾಗಡ್ಡಿ ರೇಟ್ ಏಕಾಏಕಿ ನೂರರ ಗಡಿ ದಾಟಿದೆ. ಕೊರೊನಾದಿಂದ ಕಂಗೆಟ್ಟಿದ್ದ ಜನರಿಗೆ ಗಾಯದ ಮೇಲೆ ಬೆಲೆ ಏರಿಕೆ ಬರೆಬಿದ್ದಿದೆ. ಜನರ ಪಾಲಿಗೆ ಕಣ್ಣೀರುಳ್ಳಿಯಾಗಿದೆ.

ನೂರರ ಗಡಿ ದಾಟಿದ ಈರುಳ್ಳಿ ರೇಟ್​​ಗೆ ಕಂಗಾಲು! ಹಾಗಿದ್ರೆ, ಪ್ರತಿ ಕೆ.ಜಿ ಈರುಳ್ಳಿ ರೇಟ್ ನೂರರ ಗಡಿ ದಾಟೋಕೆ ಕಾರಣವೇನು. ಜನರಿಗೆ ಹಬ್ಬದ ಹೊತ್ತಲ್ಲೇ ಕಣ್ಣೀರು ತರಿಸ್ತಿರೋದ್ಯಾಕೆ ಅನ್ನೋದನ್ನ ನೋಡೋದಾದ್ರೆ.

ಬಡವರ ಪಾಲಿಗೆ ‘ಕಣ್ಣೀರು’ಳ್ಳಿ! ಇನ್ನು ರಾಜ್ಯದಲ್ಲಿ ಈರುಳ್ಳಿ ಬೆಳೆ ಏರಿಕೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಮಹಾಮಳೆ. ಯಾಕಂದ್ರೆ ಈ ಭಾಗದಲ್ಲಿ ಹೆಚ್ಚಾಗಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ಮಳೆ ಪಾಲಾಗಿದೆ. ಅದ್ರಲ್ಲೂ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ರಾಯಚೂರು, ವಿಜಯಪುರ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಲ್ಲಿ ಭಾರಿ ಹಾನಿಯಾಗಿದೆ. ಇನ್ನು ಮಾರುಕಟ್ಟೆಗೆ ದಾಸ್ತಾನು ಆಗ್ತಿದ್ದ ಆನಿಯನ್ ದಿಢೀರ್ ನಿಂತಿರೋದ್ರಿಂದ ಬೆಲೆ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲೂ ಸುರಿದ ಮಳೆಯಿಂದ ರೈತರು ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ರಾಜ್ಯಕ್ಕೆ ದಾಸ್ತಾನು ಆಗುತ್ತಿದ್ದ ಈರುಳ್ಳಿ ಬೆಳೆಗೆ ಬ್ರೇಕ್ ಬಿದ್ದಿದ್ದು ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ.

ಮುಂಬೈ, ಪೂನಾ, ಚೆನ್ನೈನಲ್ಲೂ ಶತಕ ಬಾರಿಸಿದ ಈರುಳ್ಳಿ! ಕರ್ನಾಟಕದಲ್ಲಿ ಪ್ರತಿ ಕೆ.ಜಿ ಈರುಳ್ಳಿ ಬೆಲೆ 100ರ ಗಡಿ ದಾಟಿರೋದು ಜನರ ನಿದ್ದೆಗೆಡಿಸಿದ್ರೆ ಇನ್ನೆರಡು ದಿನದಲ್ಲಿ 150 ರ ಬಾರ್ಡರ್ ಮುಟ್ಟೋದು ಫಿಕ್ಸ್ ಆಗಿದೆ. ಮಹಾಮಳೆಯಿಂದಾಗಿ ಮುಂಬೈ, ಪೂನಾ, ಚೆನ್ನೈಗೆ ಪೂರೈಕೆಯಾಗ್ತಿದ್ದ ಈರುಳ್ಳಿ ಏಕಾಏಕಿ ಸ್ಟಾಪ್ ಆಗಿದೆ. ಒಳ್ಳೆ ಗುಣಮಟ್ಟದ ಈರುಳ್ಳಿ ದರ ಪ್ರತಿ ಕೆ.ಜಿಗೆ 100 ರಿಂದ 130 ರೂಪಾಯಿ ಇದೆ. ಸಾಮಾನ್ಯ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿಗೆ 80ರಿಂದ 90ಕ್ಕೆ ಮಾರಾಟವಾಗ್ತಿದೆ. ಇದ್ರಿಂದ ಹೇಗಪ್ಪ ಈರುಳ್ಳಿ ಇಲ್ಲದೇ ಅಡುಗೆ ಮಾಡೋದು ಅಂಥಾ ಜನ ಚಿಂತೆಗೀಡಾಗಿದ್ದಾರೆ.

ಒಟ್ನಲ್ಲಿ, ಕೊರೊನಾದಿಂದ ಪತರುಗುಟ್ಟಿರೋ ಜನರಿಗೆ ಬೆಲೆ ಏರಿಕೆ ಬಿಸಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಹಬ್ಬದ ಟೈಮ್​ನಲ್ಲೇ ಈರುಳ್ಳಿ ಬೆಲೆ ಗಗನಕ್ಕೇರ್ತಿರೋದು ಜನಸಾಮಾನ್ಯರು ಕಂಗಾಲಾಗಿದ್ದಾರೆ. ನೂರರ ಗಡಿ ಮುಟ್ಟಿರೋ ಈರುಳ್ಳೆ ಬೆಲೆ ಇನ್ನಷ್ಟು ದಿನದಲ್ಲಿ 200 ದಡ ಮುಟ್ಟಿದ್ರು ಅಚ್ಚರಿಯಿಲ್ಲ. ಯಾವುದಕ್ಕೂ ಮಾರುಕಟ್ಟೆಗೆ ಹೋಗೋ ಮುನ್ನ ಜೇಬು ಗಟ್ಟಿಯಾಗೇ ಇಟ್ಕೊಂಡು ಹೋಗಿ.

Follow us on

Related Stories

Most Read Stories

Click on your DTH Provider to Add TV9 Kannada