ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಪ್ರವಾಸ
ದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕಲ್ ಆರ್. ಪಾಂಪಿಯೋ ಅಕ್ಟೋಬರ್ 25 ರಿಂದ 30 ರವರೆಗೆ ಭಾರತದ ನವದೆಹಲಿ, ಶ್ರೀಲಂಕಾದ ಕೊಲೊಂಬೊ, ಮಾಲ್ಡೀವ್ಸ್‌ನ ಮಾಲೆ ಮತ್ತು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ. ಕಾರ್ಯದರ್ಶಿ ಪಾಂಪಿಯೋ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ನವದೆಹಲಿಯಲ್ಲಿ ನಡೆಯಲಿರುವ ಮೂರನೇ ವಾರ್ಷಿಕ ಅಮೆರಿಕ-ಭಾರತ 2+2 ಸಚಿವರ ಮಟ್ಟದ ಮಾತುಕತೆಯಲ್ಲಿ ಭಾರತದ ಸಹಭಾಗಿಗಳೊಂದಿಗೆ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ- ಭಾರತದ ನಡುವಿನ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ ಮತ್ತು ವಿಶ್ವಾದ್ಯಂತ ಹಾಗೂ […]
ದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕಲ್ ಆರ್. ಪಾಂಪಿಯೋ ಅಕ್ಟೋಬರ್ 25 ರಿಂದ 30 ರವರೆಗೆ ಭಾರತದ ನವದೆಹಲಿ, ಶ್ರೀಲಂಕಾದ ಕೊಲೊಂಬೊ, ಮಾಲ್ಡೀವ್ಸ್‌ನ ಮಾಲೆ ಮತ್ತು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ.
ಕಾರ್ಯದರ್ಶಿ ಪಾಂಪಿಯೋ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ನವದೆಹಲಿಯಲ್ಲಿ ನಡೆಯಲಿರುವ ಮೂರನೇ ವಾರ್ಷಿಕ ಅಮೆರಿಕ-ಭಾರತ 2+2 ಸಚಿವರ ಮಟ್ಟದ ಮಾತುಕತೆಯಲ್ಲಿ ಭಾರತದ ಸಹಭಾಗಿಗಳೊಂದಿಗೆ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ- ಭಾರತದ ನಡುವಿನ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ ಮತ್ತು ವಿಶ್ವಾದ್ಯಂತ ಹಾಗೂ ಇಂಡೋ-ಪೆಸಿಪಿಕ್ ಪ್ರಾಂತ್ಯದಲ್ಲಿ ಸ್ಥಿರತೆ ಸಮೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.
ಮೈಕ್ ಪಾಂಪಿಯೋ ತಮ್ಮ ಕೊಲೊಂಬೊ ಭೇಟಿಯ ಸಂದರ್ಭದಲ್ಲಿ, ಅಮೆರಿಕ ಮತ್ತು ಶ್ರೀಲಂಕಾಗಳ ಸಹಭಾಗಿತ್ವದಲ್ಲಿ ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶ ಹೊಂದುವ ಸಮಾನ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ.
ಅಲ್ಲಿಂದ ಮಾಲೆಗೆ ತೆರಳಲಿರುವ ಪಾಂಪಿಯೋ, ಉಭಯ ದೇಶಗಳ ನಡುವಣ ನಿಕಟ ದ್ವಿಪಕ್ಷೀಯ ಸಂಬಂಧದ ಪುನರ್ ದೃಢೀಕರಣ ಮತ್ತು ಪ್ರಾಂತೀಯ ಸಾಗರೋತ್ತರ ಸುಭದ್ರತೆಯಿಂದ ಹಿಡಿದು ಭಯೋತ್ಪಾದನೆಯ ವಿರುದ್ಧದ ಹೋರಾಟದವರೆಗೆ ಅನೇಕ ವಿಷಯಗಳಲ್ಲಿ ಉಭಯ ದೇಶಗಳ ಸಹಭಾಗಿತ್ವವನ್ನು ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಜಕಾರ್ತಕ್ಕೆ ತೆರಳಲಿರುವ ಪಾಂಪಿಯೋ ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ತಮ್ಮ ಸಹಭಾಗಿಗಳನ್ನು ಭೇಟಿ ಮಾಡಿ ಮುಕ್ತ ಇಂಡೋ ಪೆಸಿಫಿಕ್ ಪ್ರದೇಶದ ಪರಿಕಲ್ಪನೆಗೆ ಬದ್ಧತೆ ಪ್ರದರ್ಶಿಸಲಿದ್ದಾರೆ.