AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೇ ದ್ವೇಷ: 6ವರ್ಷದ ದೊಡ್ಡಪ್ಪನ ಮಗನನ್ನೇ ಕೊಂದು, ಕಿರಾತಕ ಪರಾರಿ

ನೆಲಮಂಗಲ: ಹಳೇ ದ್ವೇಷ ಹಿನ್ನೆಲೆಯಲ್ಲಿ ಅಣ್ಣನಿಂದಲೇ 6ವರ್ಷದ ತಮ್ಮನ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ದಾನೋಜಿಪಾಳ್ಯದಲ್ಲಿ ನಡೆದಿದೆ. ಮೊಹಮ್ಮದ್ ರಿಯಾನ್(6) ಮೃತ ಬಾಲಕ. ಮೃತ ಬಾಲಕ ರಿಯಾನ್ ಚಮನ್ ಹಾಗೂ ಅಯಿಷಾ ದಂಪತಿಯ ಮಗ. ಹಳೇ ದ್ವೇಷಕ್ಕೆ ಆರೋಪಿ ದಾದಾಪೀರ್(22) ತನ್ನ ದೊಡ್ಡಪ್ಪನ ಮಗ ರಿಯಾನ್ ಹತ್ಯೆಗೈದಿದ್ದಾನೆ. ರಾಡ್‌ನಿಂದ ಬಾಲಕ ಮೊಹಮ್ಮದ್ ರಿಯಾನ್‌ಗೆ ಹೊಡೆದು ಮನೆಯ ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಬರ್ಬರವಾಗಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ. ಚಮನ್ ಹಾಗೂ ಅಯಿಷಾ ದಂಪತಿ […]

ಹಳೇ ದ್ವೇಷ: 6ವರ್ಷದ ದೊಡ್ಡಪ್ಪನ ಮಗನನ್ನೇ ಕೊಂದು, ಕಿರಾತಕ ಪರಾರಿ
ಆಯೇಷಾ ಬಾನು
|

Updated on:Oct 23, 2020 | 10:17 AM

Share

ನೆಲಮಂಗಲ: ಹಳೇ ದ್ವೇಷ ಹಿನ್ನೆಲೆಯಲ್ಲಿ ಅಣ್ಣನಿಂದಲೇ 6ವರ್ಷದ ತಮ್ಮನ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ದಾನೋಜಿಪಾಳ್ಯದಲ್ಲಿ ನಡೆದಿದೆ. ಮೊಹಮ್ಮದ್ ರಿಯಾನ್(6) ಮೃತ ಬಾಲಕ.

ಮೃತ ಬಾಲಕ ರಿಯಾನ್ ಚಮನ್ ಹಾಗೂ ಅಯಿಷಾ ದಂಪತಿಯ ಮಗ. ಹಳೇ ದ್ವೇಷಕ್ಕೆ ಆರೋಪಿ ದಾದಾಪೀರ್(22) ತನ್ನ ದೊಡ್ಡಪ್ಪನ ಮಗ ರಿಯಾನ್ ಹತ್ಯೆಗೈದಿದ್ದಾನೆ. ರಾಡ್‌ನಿಂದ ಬಾಲಕ ಮೊಹಮ್ಮದ್ ರಿಯಾನ್‌ಗೆ ಹೊಡೆದು ಮನೆಯ ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಬರ್ಬರವಾಗಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ.

ಚಮನ್ ಹಾಗೂ ಅಯಿಷಾ ದಂಪತಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಮೂಲದವರು. ಜೀವನ ಸಾಗಿಸಲು ನೆಲಮಂಗಲದ ದಾನೋಜಿಪಾಳ್ಯದಲ್ಲಿ ಗಾರೆ ಕೆಲಸ ಮಾಡಿಕೊಂಡು ವಾಸವಿದ್ರು. ಸದ್ಯ ಸ್ಥಳಕ್ಕೆ ನೆಲಮಂಗಲ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನೆಲಮಂಗಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಪ್ರೀತಿಗೆ ಸಹಾಯ ಮಾಡಲಿಲ್ಲ ಎಂದು ಮಗುವನ್ನೇ ಕೊಂದ: ಆರೋಪಿ ದಾದಾಪೀರ್ ಮೃತ ರಿಯಾನ್ ತಂದೆ ಬಳಿ ಗಾರೆ ಕೆಲಸ ಮಾಡುತ್ತಿದ್ದ. ಆತನಿಗೆ ಕಳೆದ ಒಂದು ವರ್ಷದ ಹಿಂದೆ ಅನ್ಯಕೋಮಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಯುವತಿ ಹಾಗೂ ದಾದಾಪೀರ್ ದಾವಣಗೆರೆಯ ಹರಪನಹಳ್ಳಿ ಮೂಲದವರಾಗಿದ್ದರು. ಕೆಲಸಕ್ಕಾಗಿ ದಾದಾಪೀರ್ ನೆಲಮಂಗಲಕ್ಕೆ ಬಂದಿದ್ದ. ಮರಳಿ ದಾವಣಗೆರೆಗೆ ವಾಪಸ್ ಹೋದಾಗ ಅಲ್ಲಿ ಗಲಾಟೆಯಾಗಿತ್ತು. ಯುವತಿಯ ಪೋಷಕರು ಹರಪನಹಳ್ಳಿಯಲ್ಲಿ ಹತ್ಯಾಚಾರ ಯತ್ನ ಪ್ರಕರಣ ದಾಖಲಿಸಿ ದಾದಾಪೀರ್​ನನ್ನು ಜೈಲಿಗಟ್ಟಿದ್ದರು. ಈ ಪ್ರಕರಣದಲ್ಲಿ ಚಮನ್ ಸಹಾಯ ಮಾಡಲಿಲ್ಲ ಎಂದು ಬಾಲಕನನ್ನು ಹತ್ಯೆ ಮಾಡಿದ್ದಾನೆ.

Published On - 7:53 am, Fri, 23 October 20