
ದಾವಣಗೆರೆ: ರೈತಾಪಿ ಜನರು ಆತಂಕ ಪಡದಂತೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಈಗಾಗಲೇ ಮಲೆನಾಡಿನಲ್ಲಿ ಮಳೆ ಆಗುತ್ತಿದೆ. ಶಿವಮೊಗ್ಗ ಭದ್ರಾ ಡ್ಯಾಂನಲ್ಲಿ 164.5 ಅಡಿಯಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ, ಭದ್ರಾ ಕಾಲುವೆ ನೀರು ಬಿಡಲಾಗುವುದು. ರೈತರು ಆತಂಕ ಪಡದೆ ಭತ್ತ ನಾಟಿ ಮಾಡಲಿ ಎಂದು ರೇಣುಕಾಚಾರ್ಯ ರೈತರಿಗೆ ಅಭಯ ನೀಡಿದ್ದಾರೆ. ಈ ವರ್ಷ ನೀರಿನ ಸಮಸ್ಯೆ ಆಗುವ ಸಾಧ್ಯತೆ ಇಲ್ಲ ಎಂದು ರೇಣುಕಾಚಾರ್ಯ ಆಶ್ವಾಸನೆ ಸಹ ನೀಡಿದ್ದಾರೆ.
Published On - 12:01 pm, Sat, 8 August 20