ಟಿಬೆಟ್ ಯುವಕನ ಹತ್ಯೆ ಯತ್ನ, 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಮೈಸೂರು:ಎಂಟು ವರ್ಷದ ಹಿಂದೆ ಡ್ರ್ಯಾಗರ್​ನಿಂದ ಚುಚ್ಚಿ ಟಿಬೆಟ್ ಯುವಕನ ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ದುಬೈ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು ಮೈಸೂರಿನಲ್ಲಿ ಎಂಟು ವರ್ಷದ ಹಿಂದೆ ಟಿಬೆಟ್​ ಯುವಕ ತನ್ ಜಿನ್ ದರ್ ಗ್ಯಾಲ್​ನನ್ನು ಡ್ರ್ಯಾಗರ್​ನಿಂದ ಚುಚ್ಚಿ, ಸಲೀಂ ಪಾಷಾ,ಸಲ್ಮಾನ್ ಪಾಷಾ, ಇಸ್ಮಾಯಿಲ್ ಖಾನ್ ಎಂಬ ಆರೋಪಿಗಳು ಕೊಲ್ಲುವ ಯತ್ನ ನಡೆಸಿದ್ದರು. ಪ್ರಕರಣದ ನಂತರ ಈ ಆರೋಪಿಗಳು ದುಬೈ ಹಾಗೂ ಕೆಲ ಕಾಲ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು. ಎಂಟು ವರ್ಷಗಳ ಕಾಲ […]

ಟಿಬೆಟ್ ಯುವಕನ ಹತ್ಯೆ ಯತ್ನ, 8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ

Updated on: Sep 02, 2020 | 12:45 PM

ಮೈಸೂರು:ಎಂಟು ವರ್ಷದ ಹಿಂದೆ ಡ್ರ್ಯಾಗರ್​ನಿಂದ ಚುಚ್ಚಿ ಟಿಬೆಟ್ ಯುವಕನ ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ದುಬೈ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು
ಮೈಸೂರಿನಲ್ಲಿ ಎಂಟು ವರ್ಷದ ಹಿಂದೆ ಟಿಬೆಟ್​ ಯುವಕ ತನ್ ಜಿನ್ ದರ್ ಗ್ಯಾಲ್​ನನ್ನು ಡ್ರ್ಯಾಗರ್​ನಿಂದ ಚುಚ್ಚಿ, ಸಲೀಂ ಪಾಷಾ,ಸಲ್ಮಾನ್ ಪಾಷಾ, ಇಸ್ಮಾಯಿಲ್ ಖಾನ್ ಎಂಬ ಆರೋಪಿಗಳು ಕೊಲ್ಲುವ ಯತ್ನ ನಡೆಸಿದ್ದರು. ಪ್ರಕರಣದ ನಂತರ ಈ ಆರೋಪಿಗಳು ದುಬೈ ಹಾಗೂ ಕೆಲ ಕಾಲ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದರು.

ಎಂಟು ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಈಗ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಯ ನಂತರ ನ್ಯಾಯಲಯಕ್ಕೆ ಹಾಜರು ಪಡಿಸಲಿದ್ದಾರೆ.

Published On - 12:45 pm, Wed, 2 September 20