AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​ ನಶಾಚರರು: ಕಳಕಪ್ಪ ಬಂಡಿ, ಹ್ಯಾರಿಸ್ ಮಕ್ಕಳ ಉದಾಹರಣೆ ಕೊಟ್ಟ H ವಿಶ್ವನಾಥ್

ಮೈಸೂರು: ಇಡೀ ರಾಜ್ಯದಲ್ಲಿ ಸ್ಯಾಂಡಲ್ ವುಡ್​ನಲ್ಲಿ ಹಲ್ ಚಲ್ ಎಬ್ಬಿಸಿರುವ ಡ್ರಗ್ಸ್ ಪ್ರಕರಣ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಇದರ ಜೊತೆಗೆ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಇಷ್ಟು ದಿನ ನಟ-ನಟಿಯರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬರುತ್ತಿದ್ದವು. ಈಗ ರಾಜಕಾರಣಿಗಳ ಹೆಸರೂ ದಾಖಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಮೇಲ್ಮನೆ ಸದಸ್ಯ H ವಿಶ್ವನಾಥ್ ಕೆಲ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೆಲವು ಶಾಸಕರ ಮಕ್ಕಳು ಕಳಕಪ್ಪ ಬಂಡಿ, ಹ್ಯಾರಿಸ್ ಮಕ್ಕಳ ಉದಾಹರಣೆಯನ್ನು ವಿಶ್ವನಾಥ್ ಕೊಟ್ಟಿದ್ದಾರೆ. ಕೆಲ ಪ್ರಭಾವಿ ಕುಟುಂಬಗಳು […]

ಡ್ರಗ್ಸ್​ ನಶಾಚರರು: ಕಳಕಪ್ಪ ಬಂಡಿ, ಹ್ಯಾರಿಸ್ ಮಕ್ಕಳ ಉದಾಹರಣೆ ಕೊಟ್ಟ H ವಿಶ್ವನಾಥ್
ಎಂಎಲ್‌ಸಿ ಹೆಚ್.ವಿಶ್ವನಾಥ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 02, 2020 | 1:48 PM

ಮೈಸೂರು: ಇಡೀ ರಾಜ್ಯದಲ್ಲಿ ಸ್ಯಾಂಡಲ್ ವುಡ್​ನಲ್ಲಿ ಹಲ್ ಚಲ್ ಎಬ್ಬಿಸಿರುವ ಡ್ರಗ್ಸ್ ಪ್ರಕರಣ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಇದರ ಜೊತೆಗೆ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಇಷ್ಟು ದಿನ ನಟ-ನಟಿಯರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬರುತ್ತಿದ್ದವು. ಈಗ ರಾಜಕಾರಣಿಗಳ ಹೆಸರೂ ದಾಖಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಮೇಲ್ಮನೆ ಸದಸ್ಯ H ವಿಶ್ವನಾಥ್ ಕೆಲ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೆಲವು ಶಾಸಕರ ಮಕ್ಕಳು ಕಳಕಪ್ಪ ಬಂಡಿ, ಹ್ಯಾರಿಸ್ ಮಕ್ಕಳ ಉದಾಹರಣೆಯನ್ನು ವಿಶ್ವನಾಥ್ ಕೊಟ್ಟಿದ್ದಾರೆ.

ಕೆಲ ಪ್ರಭಾವಿ ಕುಟುಂಬಗಳು ಈ ದಂಧೆಯ ಒಳಗೆ ಹೋಗಿದ್ದಾರೆ. ಈ ವಿಚಾರದಲ್ಲಿ ಮಡಿವಂತಿಕೆ ಬೇಡ. ನಮ್ಮ ಮನೆಯಲ್ಲೇ ಯಾರೋ ಮಾಡುತ್ತಿರಬಹುದು ನಮಗೆ ಗೊತ್ತಿಲ್ಲ. ಇಡೀ ಸಮಾಜ ಜಾಗೃತವಾಗಬೇಕು. ರೇವ್ ಪಾರ್ಟಿ ಮಾಡ್ತಾ ಇರುವವರು ಯಾರು ? ರೇವ್ ಗರ್ಲ್ ಅನ್ನೋದು ಹೊಸದಾಗಿ ಆರಂಭವಾಗಿದೆ. ಸಿನಿಮಾ‌ ಏನಾಗಿದೆ? ಲಾಂಗ್ ಡ್ರಿಂಕ್ಸ್ ನಶೆ ವೈಭವೀಕರಣವಾಗುತ್ತಿದೆ ಎಂದರು.