ಈಜಲು ಹೋದವ ಬಾರದ ಲೋಕಕ್ಕೆ ಜಾರಿದ.. ಆದ್ರೆ ಬೆಂಗಳೂರಿನ ಸ್ನೇಹಿತರು ಮಾಡಿದ್ದೇನು?
[lazy-load-videos-and-sticky-control id=”KQ7S2xJMzCA”] ಚಿಕ್ಕಮಗಳೂರು: ಬೆಂಗಳೂರಿನಿಂದ ಬಂದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದು, ಸ್ನೇಹಿತರು ಮೃತ ಯುವಕನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರೋ ಘಟನೆ ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ. ಗೆಳೆಯರು ಬಂದದ್ದು ಸ್ನೇಹಿತನ ನೋಡಲಿಕ್ಕೋ, ಜೀವ ತೆಗೆಯಲಿಕ್ಕೋ: ಆಲ್ದೂರಿನ 18 ವರ್ಷದ ಯುವಕ ಅನ್ವಿತ್ ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು. ಕೊರೊನಾ ಲಾಕ್‍ಡೌನ್‍ನಿಂದ ಊರಿಗೆ ಬಂದವನು ಮತ್ತೆ ಬೆಂಗಳೂರಿಗೆ ಹೋಗಿರಲಿಲ್ಲ. ಊರಿನಲ್ಲೇ ಕುಡಿಯುವ ನೀರಿನ ಬ್ಯುಸಿನೆಸ್ ಜೊತೆಗೆ ಓಮ್ನಿ ಇಟ್ಟುಕೊಂಡು ಬಾಡಿಗೆ […]

[lazy-load-videos-and-sticky-control id=”KQ7S2xJMzCA”]
ಚಿಕ್ಕಮಗಳೂರು: ಬೆಂಗಳೂರಿನಿಂದ ಬಂದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದು, ಸ್ನೇಹಿತರು ಮೃತ ಯುವಕನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರೋ ಘಟನೆ ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.
ಗೆಳೆಯರು ಬಂದದ್ದು ಸ್ನೇಹಿತನ ನೋಡಲಿಕ್ಕೋ, ಜೀವ ತೆಗೆಯಲಿಕ್ಕೋ: ಆಲ್ದೂರಿನ 18 ವರ್ಷದ ಯುವಕ ಅನ್ವಿತ್ ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು. ಕೊರೊನಾ ಲಾಕ್‍ಡೌನ್‍ನಿಂದ ಊರಿಗೆ ಬಂದವನು ಮತ್ತೆ ಬೆಂಗಳೂರಿಗೆ ಹೋಗಿರಲಿಲ್ಲ. ಊರಿನಲ್ಲೇ ಕುಡಿಯುವ ನೀರಿನ ಬ್ಯುಸಿನೆಸ್ ಜೊತೆಗೆ ಓಮ್ನಿ ಇಟ್ಟುಕೊಂಡು ಬಾಡಿಗೆ ಪಡೆಯುತ್ತಿದ್ದ. ಆದರೆ, ನಾಲ್ಕು ದಿನದ ಹಿಂದೆ ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ನಾಲ್ವರು ಸ್ನೇಹಿತರು ಬಂದಿದ್ದರು.
ಅವರ ಜೊತೆ ಆಲ್ದೂರು ಸಮೀಪದ ಹಳ್ಳದಲ್ಲಿ ಈಜಲು ಹೋಗಿದ್ದಾಗ ಅನ್ವಿತ್ ನೀರು ಪಾಲಾಗಿದ್ದಾನೆ. ಆದ್ರೆ ಇದು ಆಕಸ್ಮಿಕ ಘಟನೆ ಅಂತ ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ, ಈ ಸಾವಿನ ಹಿಂದೆ ಬೆಂಗಳೂರಿನಿಂದ ಬಂದ ಹುಡುಗರ ಕೈವಾಡವಿದೆ. ಇದು ಕೊಲೆ ಎಂದು ಮೃತ ಅನ್ವಿತ್ ತಾಯಿ ಸೇರಿದಂತೆ ಸಂಬಂಧಿಕರು ಆರೋಪವನ್ನ ಮಾಡುತ್ತಿದ್ದಾರೆ. ಯಾಕೆಂದರೆ ಮೃತ ಅನ್ವಿತ್‍ಗೆ ಈಜು ಬರುತ್ತಿರಲಿಲ್ಲ.
ಗೆಳೆಯನ ಪ್ರಾಣ ಹೋಗ್ತಿದ್ರು ಮೊಬೈಲ್ ಸಮೇತ ಸ್ನೇಹಿತರು ಎಸ್ಕೇಪ್:
ಆತ ನೀರಿಗೆ ಇಳಿದಿಲ್ಲ ಬೆಂಗಳೂರಿನಿಂದ ಬಂದವರು ಕೊಲೆ ಮಾಡಿದ್ದಾರೆ ಅನ್ನೋದು ಮೃತ ಅನ್ವಿತ್ ಪೋಷಕರ ಆರೋಪ. ಅಷ್ಟೆ ಅಲ್ಲದೇ, ಅನ್ವಿತ್ನ ಸ್ನೇಹಿತರು ಅನ್ವಿತ್ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮಗನನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ರೂ ಇಲ್ಲಿವರೆಗೂ ಮೃತ ಅನ್ವಿತ್ ಪೋಷಕರ ಸಂಪರ್ಕಕ್ಕೆ ಅವರ್ಯಾರು ಸಿಕ್ಕಿಲ್ಲ.
ಅಷ್ಟೇ ಅಲ್ಲದೇ ಅನ್ವಿತ್ ಮೊಬೈಲ್ ಇಂದಿಗೂ ಆನ್ ಆಗಿದ್ದು, ಫೋನ್ ಮಾಡಿದರೆ ರಿಸೀವ್ ಮಾಡುತ್ತಾರೆ ಆದರೆ ಯಾರು ಮಾತನಾಡುವುದಿಲ್ಲ ಅಂತ ಅನ್ವಿತ್ ಮನೆಯವರು ತಿಳಿಸಿದ್ದಾರೆ. ಇನ್ನು ಮೃತ ಅನ್ವಿತ್ ಕುತ್ತಿಗೆ, ಸೊಂಟದ ಬಳಿ ಗಾಯದ ಗುರುತುಗಳು ಇದೆ. ಬಾಯಲ್ಲಿ ನೊರೆ ಬಂದಿದೆ. ಆತ ನೀರು ಕುಡಿದಿರಲಿಲ್ಲ. ಇದು ಕೊಲೆ ಎಂದು ಮೃತನ ಪೋಷಕರು ಹೇಳುತ್ತಿದ್ದಾರೆ. ಅವರು ಬಂದು ಹೋಗಿರೋ ಎಲ್ಲಾ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎಲ್ಲಾ ದಾಖಲೆಗಳನ್ನ ಪೊಲೀಸರಿಗೆ ನೀಡಿದ್ದೇವೆ. ಆದ್ರೂ ಆಲ್ದೂರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಾಲದ್ದಕ್ಕೆ ಅಂದು ಈಜಲು ಆಲ್ದೂರಿನ ಇಬ್ಬರು ಯುವಕರು ಅನ್ವಿತ್ ಹಾಗೂ ಬೆಂಗಳೂರಿನವರ ಜೊತೆ ಹೋಗಿದ್ದರು. ಈಗ ಇಬ್ಬರು ಹುಡುಗರು ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆಂದು ಮೃತ ಅನ್ವಿತ್ ತಾಯಿ ಸುಧಾ ಕಣ್ಣೀರಿಡುತ್ತಿದ್ದಾರೆ.
ಪೊಲೀಸರಿಗೆ ಎಲ್ಲಾ ದಾಖಲೆ ಕೊಟ್ಟ ಮೇಲೆ ಬೆಂಗಳೂರು ತುಂಬಾ ದೊಡ್ಡ ಊರು ಹೇಗೆ ಹುಡುಕೋದು. ಸ್ವಲ್ಪ ಸಮಯ ಬೇಕಾಗುತ್ತೆ. ಅವರು ಸಿಕ್ಕ ಮೇಲೆ ಹೇಳ್ತೀವಿ ಬನ್ನಿ ಎಂದು ಹೇಳಿದ್ದಾರಂತೆ.
ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ಆ ತಾಯಿ, ಇದೀಗ ಎದೆ ಮಟ್ಟಕ್ಕೆ ಬೆಳೆದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಮಗನನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.
Published On - 1:37 pm, Wed, 2 September 20




