‘ಱಪಿಡ್ ಟೆಸ್ಟಿಂಗ್ ಕಿಟ್ ಮೈಸೂರಿಗೆ ಇನ್ನೂ ಬಂದಿಲ್ಲ, ಆದ್ರೆ ಬೇರೆ ಜಿಲ್ಲೆಗಳಿಗೆ ಕೊಟ್ಟಿದ್ದಾರೆ’
ಮೈಸೂರು: ಇಂದು ಬೆಳಗ್ಗೆ ಬಂದ ಕೊರೊನಾ ವರದಿಯಲ್ಲಿ ಮೈಸೂರಿನಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ. ಈ ಹಿಂದೆ ವಾರದಲ್ಲಿ 20 ಕೊರೊನಾ ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ ಅಂತಹ ಪರಿಸ್ಥಿತಿಯಿಂದ ಹೊರ ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜ್ಯುಬಿಲಿಯೆಂಟ್ ಕಾರ್ಖಾನೆಗೆ ಸಂಬಂಧಿಸಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ಮುಕ್ತಾಯವಾಗಿದೆ. ನಿತ್ಯವೂ ಮೂರು ಶಿಫ್ಟ್‌ಗಳಲ್ಲಿ ಮಾದರಿ ಸಂಗ್ರಹಣೆ ನಡೆಯುತ್ತಿದೆ. ಸ್ಯಾಂಪಲ್ ಕಲೆಕ್ಷನ್, ವರದಿ ತರಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸದ್ಯ ಪಾಸಿಟಿವ್ ಕೇಸ್‌ಗಳ ಪ್ರಮಾಣ ಇಳಿಕೆಯಾಗಿದೆ […]
ಮೈಸೂರು: ಇಂದು ಬೆಳಗ್ಗೆ ಬಂದ ಕೊರೊನಾ ವರದಿಯಲ್ಲಿ ಮೈಸೂರಿನಲ್ಲಿ ಯಾವುದೇ ಕೇಸ್ ಪತ್ತೆಯಾಗಿಲ್ಲ. ಈ ಹಿಂದೆ ವಾರದಲ್ಲಿ 20 ಕೊರೊನಾ ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ ಅಂತಹ ಪರಿಸ್ಥಿತಿಯಿಂದ ಹೊರ ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಜ್ಯುಬಿಲಿಯೆಂಟ್ ಕಾರ್ಖಾನೆಗೆ ಸಂಬಂಧಿಸಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ಮುಕ್ತಾಯವಾಗಿದೆ. ನಿತ್ಯವೂ ಮೂರು ಶಿಫ್ಟ್‌ಗಳಲ್ಲಿ ಮಾದರಿ ಸಂಗ್ರಹಣೆ ನಡೆಯುತ್ತಿದೆ. ಸ್ಯಾಂಪಲ್ ಕಲೆಕ್ಷನ್, ವರದಿ ತರಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸದ್ಯ ಪಾಸಿಟಿವ್ ಕೇಸ್‌ಗಳ ಪ್ರಮಾಣ ಇಳಿಕೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪಿಪಿಇ, ಮಾಸ್ಕ್‌ಗಳ ಕೊರತೆ ಇಲ್ಲ. ಱಪಿಡ್ ಟೆಸ್ಟಿಂಗ್ ಕಿಟ್ ಮೈಸೂರಿಗೆ ಇನ್ನೂ ಬಂದಿಲ್ಲ. ಬೇರೆ ಬೇರೆ ಜಿಲ್ಲೆಗಳಿಗೆ ಕೊಟ್ಟಿದ್ದಾರೆ. ನಮ್ಮಲ್ಲಿ ಇನ್ನಷ್ಟೆ ಸ್ವೀಕೃತಿ ಆಗಬೇಕಿದೆ ಎಂದರು.
ಐಸೋಲೇಷನ್ ಆಸ್ಪತ್ರೆ ಜತೆಗೆ ಇಎಸ್‌ಐ ಆಸ್ಪತ್ರೆಯಲ್ಲಿ 100 ಬೆಡ್ ರೆಡಿ ಇಟ್ಟುಕೊಂಡಿದ್ದೇವೆ. ಅಲ್ಲಿ 25 ವೆಂಟಿಲೇಟರ್ ಸಹ ಇವೆ. ಬಿ.ಎಂ.ಆಸ್ಪತ್ರೆಯನ್ನ ಕ್ವಾರಂಟೈನ್ ಮಾಡಲು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಡಿಸಿ ಅಭಿರಾಮ್ ಜಿ.ಶಂಕರ್ ಹೇಳಿದರು.