
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಮಹೋತ್ಸವವನ್ನು ಖ್ಯಾತ ವೈದ್ಯ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಡಾ.ಮಂಜುನಾಥ್ರ ಹೆಸರನ್ನು ಸಿಎಂ ಯಡಿಯೂರಪ್ಪ ಅಂತಿಮಗೊಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಜೊತೆಗೆ, ಮಹೋತ್ಸವದ ಅಂಗವಾಗಿ ಈ ಬಾರಿ 6 ಕೊರೊನಾ ವಾರಿಯರ್ಸ್ಗೆ ಸನ್ಮಾನ ಸಹ ಮಾಡಲಾಗುವುದು ಎಂಬ ಮಾಹಿತಿ ಸಿಕ್ಕಿದೆ. ಅವರ ವಿವರ ಹೀಗಿದೆ.
1. ಮರಗಮ್ಮ: ಪೌರಕಾರ್ಮಿಕರು.
2. ಡಾ. ನವೀನ್: ಆರೋಗ್ಯ ಇಲಾಖೆ ಮೆಡಿಕಲ್ ಆಫೀಸರ್
3. ರುಕ್ಮಿಣಿ: ಸ್ಟಾಫ್ ನರ್ಸ್
4. ನೂರ್ ಜಾನ್: ಆಶಾ ಕಾರ್ಯಕರ್ತೆ
5. ಕುಮಾರ್: ಮೈಸೂರು ನಗರ ಪೊಲೀಸ್ ಪೇದೆ
6. ಅಯೂಬ್ ಅಹಮದ್: ಸಾಮಾಜಿಕ ಕಾರ್ಯಕರ್ತ
Published On - 1:00 pm, Sat, 10 October 20