ಮೈಸೂರು: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಆದ್ರೂ ಸಹ ಕೆಲವೊಂದು ಕಡೆ ನಿರ್ಲಕ್ಷ ಎದ್ದು ಕಾಣುತ್ತಿದೆ. ಉಸಿರಾಟದ ತೊಂದರೆ ಇರುವವರ ಮಾಹಿತಿ ನೀಡದ ಆಸ್ಪತ್ರೆಗೆ ಜಿಲ್ಲಾಧಿಕಾರಿ ಅಭಿರಾಮ್ ಶೋಕಾಸ್ ನೋಟಿಸ್ ನೀಡಿದ್ದಾರೆ.
ಮೈಸೂರಿನಲ್ಲಿ ಎರಡು ಸ್ಯಾರಿ ಕೇಸ್ ಪತ್ತೆಯಾಗಿದೆ. ನಜರ್‌ಬಾದ್, ಮೊಸಂಬಾಯನಹಳ್ಳಿಯಲ್ಲಿ ಪ್ರಕರಣ ವರಿಯಾಗಿದೆ. ಹಿಂದಿನಿಂದ ದಂಪತಿ ನರ್ಸಿಂಗ್ ಹೋಂಗೆ ಹೋಗಿದ್ದಾರೆ. ಆದರೆ ನರ್ಸಿಂಗ್ ಹೋಂನವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ ಎಂದರು.
ಉಸಿರಾಟದ ತೊಂದರೆ ಇರುವವರು ಆಸ್ಪತ್ರೆಗೆ ಬಂದರೆ ಮಾಹಿತಿ ನೀಡಿ. ಇಲ್ಲದಿದ್ದರೆ ಮುಂದೆ ಪರಿಸ್ಥಿತಿ ಗಂಭೀರವಾಗುತ್ತದೆ. ಹಾಗಾಗಿ ನರ್ಸಿಂಗ್ ಹೋಂಗಳು ಜಿಲ್ಲಾಡಳಿತ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.