
ಮೈಸೂರು: ನಂಜನಗೂಡು ಟಿಹೆಚ್ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿ ಜತೆ ಟಿಹೆಚ್ಒ ಮಾತಾಡಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ.
ಮೇಲಧಿಕಾರಿ ಕಿರುಕುಳದಿಂದ ನೇಣಿಗೆ ಶರಣಾಗಿದ್ದ ನಾಗೇಂದ್ರರಿಗೆ ಅಧಿಕಾರಿಗಳು ಕೋವಿಡ್ ಟೆಸ್ಟ್ ವಿಚಾರದಲ್ಲಿ ಟಾರ್ಗೆಟ್ ನೀಡಿದ್ದರು. ಈ ಬಗ್ಗೆ ಡಾ.ನಾಗೇಂದ್ರ ಜತೆ ಮಾತಾಡಿದ್ದಾರೆ ಎನ್ನಲಾದ ಡಿಸಿ ಆಡಿಯೋ ಸಿಕ್ಕಿದೆ. ಆ ಆಡಿಯೋನಲ್ಲಿ ಕೊವಿಡ್ ಟೆಸ್ಟ್ ವಿಚಾರದಲ್ಲಿ ಡಿಸಿ ಅಭಿರಾಂ ಜಿ ಶಂಕರ್ ನಾಗೇಂದ್ರಗೆ ಸ್ಪಷ್ಟನೆ ಕೇಳಿದ್ದಾರೆ.
150 ಜನರ ಕೊವಿಡ್-19 ಟೆಸ್ಟ್ ಮಾಡಲು ಟಾರ್ಗೆಟ್ ನೀಡಲಾಗಿತ್ತು. ಪ್ರತಿ ದಿನ 20 ರಿಂದ 25 ಜನರಿಗೆ ಮಾತ್ರ ಟೆಸ್ಟ್ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.