ಸರ್ಕಾರದ ಆದೇಶ ಉಲ್ಲಂಘಿಸಿ ಶುಲ್ಕ ಹೆಚ್ಚಳ: ಖಾಸಗಿ ಶಾಲೆ ವಿರುದ್ಧ ಪೋಷಕರ ಆಕ್ರೋಶ
ಬೆಂಗಳೂರು: ಕೊರೊನಾ ಸಂಕಷ್ಟದಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲಾ, ಆದ್ರೆ ಲಕ್ಷ ಲಕ್ಷ ಫೀಸ್ ಮಾತ್ರ ಕಟ್ಟಲೇಬೇಕಂತೆ. ಶಾಲೆಯ ಫೀಸ್ ಹೆಚ್ಚಳ ಮಾಡುವಂತಿಲ್ಲಾ ಎಂದು ಸರ್ಕಾರವೇ ಆದೇಶ ನೀಡಿದೆ. ಆದ್ರೆ ಬೆಂಗಳೂರಿನ ಕೆಲ ಶಾಲೆಗಳಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ನ್ಯೂ ಹೊರೈಝನ್ ಗುರುಕುಲ ಶಾಲೆ ಸರ್ಕಾರದ ಆದೇಶ ಉಲ್ಲಂಘಿಸಿ ಶುಲ್ಕ ಹೆಚ್ಚಿಸಿದೆ. ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿರುವ ಈ ಖಾಸಗಿ ಶಾಲೆ ಶುಲ್ಕ ಹೆಚ್ಚಳ ಮಾಡಿದೆ. 2ನೇ ಹಂತದ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಾಯ ಮಾಡಲಾಗುತ್ತಿದೆ. ಯುಕೆಜಿ ವಿದ್ಯಾರ್ಥಿಗಳು ₹83 […]
ಬೆಂಗಳೂರು: ಕೊರೊನಾ ಸಂಕಷ್ಟದಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲಾ, ಆದ್ರೆ ಲಕ್ಷ ಲಕ್ಷ ಫೀಸ್ ಮಾತ್ರ ಕಟ್ಟಲೇಬೇಕಂತೆ. ಶಾಲೆಯ ಫೀಸ್ ಹೆಚ್ಚಳ ಮಾಡುವಂತಿಲ್ಲಾ ಎಂದು ಸರ್ಕಾರವೇ ಆದೇಶ ನೀಡಿದೆ. ಆದ್ರೆ ಬೆಂಗಳೂರಿನ ಕೆಲ ಶಾಲೆಗಳಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ.
ನ್ಯೂ ಹೊರೈಝನ್ ಗುರುಕುಲ ಶಾಲೆ ಸರ್ಕಾರದ ಆದೇಶ ಉಲ್ಲಂಘಿಸಿ ಶುಲ್ಕ ಹೆಚ್ಚಿಸಿದೆ. ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿರುವ ಈ ಖಾಸಗಿ ಶಾಲೆ ಶುಲ್ಕ ಹೆಚ್ಚಳ ಮಾಡಿದೆ. 2ನೇ ಹಂತದ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಾಯ ಮಾಡಲಾಗುತ್ತಿದೆ. ಯುಕೆಜಿ ವಿದ್ಯಾರ್ಥಿಗಳು ₹83 ಸಾವಿರ ಶುಲ್ಕ ಪಾವತಿಸಬೇಕು. 1ರಿಂದ 5ನೇ ತರಗತಿ ಮಕ್ಕಳಿಗೆ 53,800 ರೂಪಾಯಿ ಶುಲ್ಕ. 6ರಿಂದ 10ನೇ ತರಗತಿ ಮಕ್ಕಳಿಗೆ 55,400 ರೂಪಾಯಿ ಶುಲ್ಕ ಹಾಗೂ ವಿಜ್ಞಾನ ವಿಭಾಗದ PUC ವಿದ್ಯಾರ್ಥಿಗಳಿಗೆ ₹60 ಸಾವಿರ ಶುಲ್ಕ.
ವಾಣಿಜ್ಯ ವಿಭಾಗದ PUC ವಿದ್ಯಾರ್ಥಿಗಳಿಗೆ ₹55 ಸಾವಿರ ಶುಲ್ಕ. ಟ್ಯೂಷನ್ ಫೀಸ್, ಪುಸ್ತಕ, ನೋಟ್ ಬುಕ್, ಕಂಪ್ಯೂಟರ್ ಲ್ಯಾಬ್, ಪರೀಕ್ಷಾ ಶುಲ್ಕ, ಲೈಬ್ರರಿ ಆ್ಯಕ್ಟಿವಿಟಿ ಫೀಸ್, ವ್ಯಾಲ್ಯೂ ಪ್ಲಸ್ ಕ್ಲಾಸ್, ನ್ಯೂ ಹೊರೈಝನ್ ಟೈಮ್ಸ್, ಡಿಜಿಟಲ್ ಬೋರ್ಡ್ ಶುಲ್ಕ, ಲ್ಯಾಬೋರೇಟರಿ ವೆಚ್ಚ, ಕೋ-ಕರಿಕ್ಯುಲರ್ ಆ್ಯಕ್ಟಿವಿಟಿ ಪಿಕ್‌ನಿಕ್, ಮೆಡಿಕಲ್ ಚೆಕ್‌ಅಪ್, ಯೋಗ, ವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ ಸೇರಿದಂತೆ ಹಲವು ಫೀಸ್ ಸೇರಿಸಿ ಶಾಲಾ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ವಿಧಿಸಿದೆ. ಹೀಗಾಗಿ ಇಂತಹ ಸಮಯದಲ್ಲಿ ಶುಲ್ಕ ಹೆಚ್ಚಿಸಿದರೆ ನಾವು ಎಲ್ಲಿಗೆ ಹೋಗುವುದು ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಿಎಂ ಕೇರ್‌ಗೆ 5 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ. ಹೀಗಾಗಿ ಶಿಕ್ಷಕರಿಗೆ ವೇತನವನ್ನು ನೀಡುವುದಕ್ಕೆ ಕಷ್ಟವಾಗಿದೆ. ಅದಕ್ಕಾಗಿ ಸ್ವಲ್ಪ ಶುಲ್ಕವನ್ನು ಹೆಚ್ಚಳ ಮಾಡಿರುವುದಾಗಿ ಶಾಲೆ ಮಾಹಿತಿ ನೀಡಿದೆ.