ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ರನ್​ ವೇ ಲೋಕಾರ್ಪಣೆ; ಇನ್ಮುಂದೆ ಇರಲ್ಲ ಮಂಜಿನ ಕಾಟ

|

Updated on: Dec 31, 2020 | 9:22 PM

ಈ ರನ್ ವೇಯಲ್ಲಿ ದಟ್ಟ ಮಂಜು ಮತ್ತು ಮಳೆ ನಡುವೆಯು ಆಟೋ ಲ್ಯಾಂಡಿಗ್ ಆಗುವ ವ್ಯವಸ್ಥೆಯಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ cat 111 B ( ILS ) ತಂತ್ರಜ್ಞಾನ ಹೊಂದಿದ ರನ್ ವೇ ಎನ್ನುವ ಹೆಗ್ಗಳಿಕೆಗೆ ಕೆಐಎಬಿ ಪಾತ್ರವಾಗಿದೆ. ಈಗಾಗಲೆ ನೂತನ ರನ್ ವೇ ನಲ್ಲಿ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗ್ತಿವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ರನ್​ ವೇ ಲೋಕಾರ್ಪಣೆ; ಇನ್ಮುಂದೆ ಇರಲ್ಲ ಮಂಜಿನ ಕಾಟ
ನೂತನವಾಗಿ ಉದ್ಘಾಟನೆಗೊಂಡ ದಕ್ಷಿಣ ರನ್ ವೇ
Follow us on

ಬೆಂಗಳೂರು: ಹೊಸ ವರ್ಷಕ್ಕೆ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ದಕ್ಷಿಣ ರನ್ ವೇ ಲೋಕಾರ್ಪಣೆಗೊಂಡಿದೆ.

ನೂತನ ರನ್ ವೇ ಲೋಕಾರ್ಪಣೆಯಿಂದ ಪ್ರಯಾಣಿಕರಿಗೆ ರಿಲೀಫ್ ಸಿಕ್ಕಿದ್ದು, ಮಂಜಿನ ಆಟದಿಂದ ಫ್ಲೈಟ್ ಲ್ಯಾಂಡಿಗ್ ಮತ್ತು ಟೇಕ್ ಆಪ್ ಆಗದೆ ಗಂಟೆ ಗಟ್ಟಲೆ ಪರದಾಡ್ತಿದ್ದ ಜನಕ್ಕೆ ಈಗ ಆ ತೊಂದರೆ ಇಲ್ಲದಂತ್ತಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CAT 111B, ILS (Instrument Landing System ) ಅತ್ಯಾಧುನಿಕ ತಂತ್ರಜ್ಞಾನದಿಂದ ಈ ರನ್​ ವೇ ನಿರ್ಮಾಣವಾಗಿದೆ.

ಈ ರನ್ ವೇಯಲ್ಲಿ ದಟ್ಟ ಮಂಜು ಮತ್ತು ಮಳೆ ನಡುವೆಯು ಆಟೋ ಲ್ಯಾಂಡಿಗ್ ಆಗುವ ವ್ಯವಸ್ಥೆಯಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ cat 111 B ( ILS ) ತಂತ್ರಜ್ಞಾನ ಹೊಂದಿದ ರನ್ ವೇ ಎನ್ನುವ ಹೆಗ್ಗಳಿಕೆಗೆ ಕೆಐಎಬಿ ಪಾತ್ರವಾಗಿದೆ. ಈಗಾಗಲೆ ನೂತನ ರನ್ ವೇ ನಲ್ಲಿ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗ್ತಿವೆ.

ಡಿಸೆಂಬರ್ ಮತ್ತು ಜನವರಿಯಲ್ಲಿ ದೇವನಹಳ್ಳಿ ಸುತ್ತಮುತ್ತ ದಟ್ಟ ಮಂಜು ಕವಿಯುತ್ತಿತ್ತು. ಹೀಗಾಗಿ ಸರಿಯಾದ ಸಮಯಕ್ಕೆ ವಿಮಾನ ಪ್ರಯಾಣ ಮಾಡಲಾಗದೆ ಪ್ರಯಾಣಿಕರು ಹೈರಾಣಾಗುತ್ತಿದ್ದರು. ಆದ್ರೆ ಇನ್ಮುಂದೆ ದಟ್ಟ ಮಂಜು ಕವಿದ್ರು ಯಾವುದೆ ಅಡಚಣೆಯಿಲ್ಲದೆ ವಿಮಾನಗಳ ಲ್ಯಾಂಡಿಗ್ ಮತ್ತು ಟೇಕ್ ಆಫ್ ಆಗಲಿವೆ.

ಬೆಂಗಳೂರು-ಬೆಳಗಾವಿ ಇಂಡಿಗೋ ಏರ್​ಲೈನ್ಸ್​​​ಗೆ ಕನ್ನಡವೇಕೆ ಅಪಥ್ಯ? ಹಿರಿಯ ಅಧಿಕಾರಿ ಬೇಸರ

Published On - 9:21 pm, Thu, 31 December 20