ನಿಷೇಧಾಜ್ಞೆ ನಡುವೆ ರಿಗಾನ್ ರೆಸ್ಟೋರೆಂಟ್ನಲ್ಲಿ ಪಾರ್ಟಿ ಆಯೋಜನೆ; ಕ್ರಮ ಕೈಗೊಳ್ಳದ ಪೊಲೀಸರು
ದೇವನಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲಿರೂ ರಿಗಾನ್ ರೆಸ್ಟೋರೆಂಟ್ನಲ್ಲಿ ಮಾಲೀಕರು ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆ ಮಾಡಿದ್ದಾರೆ. 10 ಸಾವಿರ ರೂಪಾಯಿ ಬುಕ್ಕಿಂಗ್ಗೆ ಮ್ಯೂಸಿಕ್ ಜೊತೆಗೆ ಮದ್ಯ ಮತ್ತು ಊಟದ ಪಾರ್ಟಿ ನೀಡಲಾಗುತ್ತಿದೆ.
ದೇವನಹಳ್ಳಿ: ನಿಷೇದದ ನಡುವೆ ಲೌಡ್ ಸೌಂಡ್ನಲ್ಲಿ ಮ್ಯೂಸಿಕ್ ಪಾರ್ಟಿಯನ್ನ ದೇವನಹಳ್ಳಿ ಹೊರವಲಯದ ಖಾಸಗಿ ರೆಸ್ಟೋರೆಂಟ್ನಲ್ಲಿ ಆಯೋಜನೆ ಮಾಡಲಾಗಿದೆ.
ದೇವನಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲಿರುವ ರಿಗಾನ್ ರೆಸ್ಟೋರೆಂಟ್ನ ಮಾಲೀಕರು ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆ ಮಾಡಿದ್ದಾರೆ. 10 ಸಾವಿರ ರೂಪಾಯಿ ಬುಕ್ಕಿಂಗ್ಗೆ ಮ್ಯೂಸಿಕ್ ಜೊತೆಗೆ ಮದ್ಯ ಮತ್ತು ಊಟದ ಪಾರ್ಟಿ ನೀಡಲಾಗುತ್ತಿದೆ. ರೆಸ್ಟೋರೆಂಟ್ ಪಕ್ಕದ ಖಾಲಿ ಜಾಗದಲ್ಲಿ ಈ ಪಾರ್ಟಿ ಆಯೋಜನೆ ಮಾಡಿದ್ದಾರೆ. ದೇವನಹಳ್ಳಿ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ಗೆ ಬ್ರೇಕ್.. ಗೋವಾದತ್ತ ಮುಖಮಾಡಿದ ಪಾರ್ಟಿ ಪ್ರಿಯರು!
Published On - 9:18 pm, Thu, 31 December 20