
ಬೆಂಗಳೂರು: ಸಿಲಿಕಾನ್ ಸಿಟಿ ಉಗ್ರರ ಅಡಗುದಾಣ ಆಗಿರೋದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಅಡಗಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು NIA ಅಂದರ್ ಮಾಡಿದೆ. ಇಷ್ಟಕ್ಕೂ NIA ಬಂಧಿತ ಈ ಇಬ್ಬರು ಶಂಕಿತರು ಯಾರು? ಇವರ ಖತರ್ನಾಕ್ ಕೆಲಸ ಎಂಥದ್ದು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.
ಹೌದು, ಬೆಂಗಳೂರಿನಲ್ಲಿ ಕೊರೊನಾ ಆತಂಕದ ಮಧ್ಯೆ ಉಗ್ರರು ಸದ್ದಿಲ್ಲದೇ ಸಂಚು ರೂಪಿಸಿದ್ದರು. ಸಿಲಿಕಾನ್ ಸಿಟಿಯನ್ನ ಉಗ್ರರು ಅಡಗುದಾಣವಾಗಿ ಮಾಡಿಕೊಂಡು ವಿಧ್ವಂಸಕ ಕೃತ್ಯವೆಸಗಲು ಖತರ್ನಾಕ್ ಪ್ಲ್ಯಾನ್ ಮಾಡಿಟ್ಟುಕೊಂಡಿದ್ದರು. ಆದ್ರೆ ರಾಷ್ಟ್ರೀಯ ತನಿಖಾ ದಳ ಶಂಕಿತ ಉಗ್ರರ ಹೆಡೆಮುರಿ ಕಟ್ಟಿದೆ.
ಅಕ್ಕಿ ವ್ಯಾಪಾರಿ, ಟೆಕ್ಕಿಯಿಂದ ಜಿಹಾದಿ ಉಗ್ರರ ಸಂಘಟನೆ
ಕೆಲ ತಿಂಗಳ ಹಿಂದೆ ನಗರದ ಬಸವನಗುಡಿಯ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಉಗ್ರ ವೈದ್ಯ ಅಬ್ದುಲ್ ರೆಹಮಾನ್‌ನನ್ನು NIA ಬಂಧಿಸಿತ್ತು. ಈತನಿಗೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬೆಂಡೆತ್ತಿದ್ದಾರೆ. ಆಗ ನಗರದಲ್ಲಿ ಅಡಗಿರುವ ಈ ಇಬ್ಬರ ಬಗ್ಗೆ ಬಾಯ್ಬಿಟ್ಟಿದ್ದ. ಕೂಡಲೇ, ಕಾರ್ಯಾಚರಣೆ ನಡೆಸಿದ NIA, ತಮಿಳುನಾಡು ಮೂಲದ ಆಹ್ಮದ್ ಅಬ್ದುಲ್ ಖಾದರ್ ಹಾಗೂ ಫ್ರೇಜರ್ ಟೌನ್‌ನ ಇರ್ಫಾನ್ ನಾಸೀರ್‌ನನ್ನ ಬಂಧಿಸಿದೆ. ಇವರಿಬ್ಬರ ಹಿಸ್ಟರಿ ಹೀಗಿದೆ.
ಇರ್ಫಾನ್ ಮೂಲತಃ ಅಕ್ಕಿ ವ್ಯಾಪಾರಿಯಾಗಿದ್ರೆ, ಅಹ್ಮದ್ ಅಬ್ದುಲ್ ಖಾದರ್ ಟೆಕ್ಕಿ. ಇಬ್ಬರು ಹಿಜ್ಬುತ್ ಉತ್ ತೆಹ್ರೀರ್ ಸಂಘಟನೆ ಸದಸ್ಯರು. ಬೆಂಗಳೂರಿನಲ್ಲಿ ಐಸಿಸ್‌ಗೆ ಉಗ್ರರರನ್ನ ಸಂಘಟಿಸುವ ಕೆಲಸ ಮಾಡಿಕೊಂಡು ನಗರದಲ್ಲಿ ಬೀಡುಬಿಟ್ಟಿದ್ದರು.
ಸದ್ಯ ರಾಷ್ಟ್ರೀಯ ತನಿಖಾ ದಳ ಬಂಧಿತರ ವಿಚಾರಣೆ ಮಾಡ್ತಾ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರು ರಾಜಧಾನಿಯಲ್ಲಿ ಪತ್ತೆಯಾಗ್ತಾರೋ ಅನ್ನೋ ಆತಂಕ ಇದೀಗ ಶುರುವಾಗಿದೆ.
Published On - 7:32 am, Fri, 9 October 20