NIAಗೆ ಸಿಕ್ತು ಕೋರ್ಟ್‌ ಅನುಮತಿ: ಶುರುವಾಯ್ತು ಸಂಪತ್ ರಾಜ್​ಗೆ ಹೊಸ ಆತಂಕ

| Updated By: ಸಾಧು ಶ್ರೀನಾಥ್​

Updated on: Nov 20, 2020 | 2:43 PM

ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ಗೆ ಸಂಬಂಧಿಸಿ ಮಾಜಿ ಮೇಯರ್​ ಸಂಪತ್​ ರಾಜ್​ಗೆ ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. 67ನೇ ಸಿಸಿಹೆಚ್ ಜಡ್ಜ್‌ ಕಾತ್ಯಾಯಿನಿ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಜೈಲಿನಲ್ಲಿಯೇ ಮಾಜಿ ಮೇಯರ್ ಸಂಪತ್ ರಾಜ್​ರ ವಿಚಾರಣೆ ನಡೆಸಲು NIA ಸಂಸ್ಥೆಗೆ ಅನುಮತಿ ನೀಡಲಾಗಿದೆ. ಜೈಲಿನಲ್ಲಿ ವಿಚಾರಣೆ ನಡೆಸಲು ಕೋರ್ಟ್‌ ಅನುಮತಿ ನೀಡಿರುವ ಬೆನ್ನಲ್ಲೇ ನವೆಂಬರ್ 23, 24ರಂದು NIA ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಜಾಮೀನು ಅರ್ಜಿ […]

NIAಗೆ ಸಿಕ್ತು ಕೋರ್ಟ್‌ ಅನುಮತಿ: ಶುರುವಾಯ್ತು ಸಂಪತ್ ರಾಜ್​ಗೆ ಹೊಸ ಆತಂಕ
Follow us on

ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ಗೆ ಸಂಬಂಧಿಸಿ ಮಾಜಿ ಮೇಯರ್​ ಸಂಪತ್​ ರಾಜ್​ಗೆ ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. 67ನೇ ಸಿಸಿಹೆಚ್ ಜಡ್ಜ್‌ ಕಾತ್ಯಾಯಿನಿ ಆದೇಶ ಹೊರಡಿಸಿದ್ದಾರೆ.

ಜೊತೆಗೆ, ಜೈಲಿನಲ್ಲಿಯೇ ಮಾಜಿ ಮೇಯರ್ ಸಂಪತ್ ರಾಜ್​ರ ವಿಚಾರಣೆ ನಡೆಸಲು NIA ಸಂಸ್ಥೆಗೆ ಅನುಮತಿ ನೀಡಲಾಗಿದೆ. ಜೈಲಿನಲ್ಲಿ ವಿಚಾರಣೆ ನಡೆಸಲು ಕೋರ್ಟ್‌ ಅನುಮತಿ ನೀಡಿರುವ ಬೆನ್ನಲ್ಲೇ ನವೆಂಬರ್ 23, 24ರಂದು NIA ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಸಂಪತ್​ ರಾಜ್ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ನವೆಂಬರ್​ 24ಕ್ಕೆ ಮುಂದೂಡಿದೆ. ಜೊತೆಗೆ, ಆಕ್ಷೇಪಣೆ ಸಲ್ಲಿಸಲು ಸಿಸಿಬಿ ಅಭಿಯೋಜಕರಿಗೆ ಕೋರ್ಟ್​ ಸೂಚನೆ ನೀಡಿದೆ.

Published On - 2:30 pm, Fri, 20 November 20