ಬೆಂಗಳೂರು: ಇಲ್ಲೊಂದು ಪ್ರಕರಣ ಪೊಲೀಸರಿಗೆ ತಲೆ ನೋವು ತಂದಿದೆ. ನವಜಾತ ಶಿಶು ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ಹುಡುಕಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಆದ್ರೆ ಘಟನೆ ನಡೆದು 9 ತಿಂಗಳು ಕಳೆದರೂ ಮಕ್ಕಳ ಕಳ್ಳಿಯನ್ನು ಹಿಡಿಯಲು ಆಗುತ್ತಿಲ್ಲ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರಿಗೆ ಇದೊಂದು ಪ್ರಕರಣ ತಲೆ ನೋವಾಗಿದೆ. ಈ ಪ್ರಕರಣ ಸಂಬಂಧ ಎಷ್ಟೇ ಜನರನ್ನು ವಿಚಾರಣೆ ನಡೆಸಿದ್ರೂ ಮಕ್ಕಳ ಕಳ್ಳಿಯ ಸುಳಿವು ಮಾತ್ರ ಸಿಗುತ್ತಿಲ್ಲ.
ಘಟನೆ ಹಿನ್ನೆಲೆ
ಕಳೆದ ವರ್ಷ ಅಂದ್ರೆ 2020 ರ ಮೇನಲ್ಲಿ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಆಗ ತಾನೇ ಜನ್ಮ ನೀಡಿದ್ದ ಮಗುವನ್ನು ಕಳ್ಳತನ ಮಾಡಲಾಗಿತ್ತು. ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಆಟೋದಲ್ಲಿ ಪರಾರಿಯಾಗಿದ್ದಳು. ಈ ಘಟನೆ ನಡೆದು ಸುಮಾರು 9 ತಿಂಗಳುಗಳೇ ಕಳೆಯುತ್ತಿವೆ ಆದ್ರೆ ಮಕ್ಕಳ ಕಳ್ಳಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ.
ಸದ್ಯ ಆರೋಪಿ ಮಹಿಳೆಯ ಸ್ಕೆಚ್ ತಯಾರಿಸಲಾಗಿದೆ. ಇದುವರೆಗೂ 242 ಜನರ ವಿಚಾರಣೆ ನಡೆಸಲಾಗಿದೆ. ನೂರಾರು ಫೋನ್ ನಂಬರ್ ಟ್ರ್ಯಾಕ್ ಮಾಡಲಾಗಿದೆ. ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ಆರೋಪಿಯ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಮಕ್ಕಳ ಕಳ್ಳಿಯ ಸುಳಿವು ಸಿಗುತ್ತಿಲ್ಲ. ಕಳೆದ ಒಂಭತ್ತು ತಿಂಗಳಿಂದ ಪೊಲೀಸರು ತನಿಖೆ ನಡೆಸುತ್ತಲೇ ಇದ್ದಾರೆ.
ಭ್ರೂಣಹತ್ಯೆ ತಡೆಗೆ ಚನ್ನೇಶ್ ರೂಪಿಸಿದ ಮಾಸ್ಟರ್ಪ್ಲಾನ್ ಇದು: ಒಂದೇ ನಂಬರ್ನಲ್ಲಿ ಸಮಗ್ರ ಮಾಹಿತಿ
Published On - 8:28 am, Wed, 10 February 21