ಭಾರಿ ಅಲೆಗೆ ಮುಳುಗಿದ ಯಾಂತ್ರಿಕ ದೋಣಿ, ಸಹ ಮೀನುಗಾರರಿಂದ 8 ಮಂದಿ ರಕ್ಷಣೆ
ಕಾರವಾರ: ನಿಸರ್ಗ ಚಂಡಮಾರುತದ ಅಬ್ಬರದ ಎಫೆಕ್ಟ್ಗೆ ಸಮುದ್ರದಲ್ಲಿ ಭಾರಿ ಅಲೆಗಳೇಳಿವೆ. ಈ ಪರಿಣಾಮ ಗೋವಾದ ಆಳಸಮುದ್ರದಲ್ಲಿ ಯಾಂತ್ರಿಕ ದೋಣಿಯೊಂದು ಮುಳುಗಿದೆ. ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದುರ್ಗಾ ಹನುಮ ಹೆಸರಿನ ಬೋಟ್ ಸಮುದ್ರಲ್ಲಿ ಮುಳುಗಡೆಯಾಗಿದೆ. ಮುಳುಗಿದ ಬೋಟ್‌ನಲ್ಲಿದ್ದ 8 ಜನರನ್ನು ಮುರಾರಿ, ಬ್ರಾಹ್ಮಿ ಹೆಸರಿನ ಬೋಟ್‌ನಲ್ಲಿದ್ದ ಸಹ ಮೀನುಗಾರರು ರಕ್ಷಿಸಿದ್ದಾರೆ. ಸದ್ಯ ಗೋವಾ ಬಂದರುಗಳತ್ತ ನೂರಾರು ಬೋಟುಗಳು ರಕ್ಷಣೆ ಪಡೆದಿವೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾರವಾರ ಪಟ್ಟಣದಲ್ಲಿ ಮತ್ತೆ ಭಾರೀ ಮಳೆ ಆರಂಭವಾಗಿದೆ.
ಕಾರವಾರ: ನಿಸರ್ಗ ಚಂಡಮಾರುತದ ಅಬ್ಬರದ ಎಫೆಕ್ಟ್ಗೆ ಸಮುದ್ರದಲ್ಲಿ ಭಾರಿ ಅಲೆಗಳೇಳಿವೆ. ಈ ಪರಿಣಾಮ ಗೋವಾದ ಆಳಸಮುದ್ರದಲ್ಲಿ ಯಾಂತ್ರಿಕ ದೋಣಿಯೊಂದು ಮುಳುಗಿದೆ. ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದುರ್ಗಾ ಹನುಮ ಹೆಸರಿನ ಬೋಟ್ ಸಮುದ್ರಲ್ಲಿ ಮುಳುಗಡೆಯಾಗಿದೆ.
ಮುಳುಗಿದ ಬೋಟ್‌ನಲ್ಲಿದ್ದ 8 ಜನರನ್ನು ಮುರಾರಿ, ಬ್ರಾಹ್ಮಿ ಹೆಸರಿನ ಬೋಟ್‌ನಲ್ಲಿದ್ದ ಸಹ ಮೀನುಗಾರರು ರಕ್ಷಿಸಿದ್ದಾರೆ. ಸದ್ಯ ಗೋವಾ ಬಂದರುಗಳತ್ತ ನೂರಾರು ಬೋಟುಗಳು ರಕ್ಷಣೆ ಪಡೆದಿವೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾರವಾರ ಪಟ್ಟಣದಲ್ಲಿ ಮತ್ತೆ ಭಾರೀ ಮಳೆ ಆರಂಭವಾಗಿದೆ.
Published On - 9:33 am, Wed, 3 June 20