ತುಮಕೂರು: ಕೊರೊನಾ ಸಂಕಷ್ಟದ ಮಧ್ಯೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗುತ್ತಿಲ್ಲ ಎಂಬುವುದು ಒಂದು ವಾರದಿಂದ ನಿರಂತರವಾಗಿ ವರದಿಯಾಗುತ್ತಲೇ ಇದೆ. ಆದ್ರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ. ಇಂದು ಬೆಳಗಿನ ವರದಿ ಪ್ರಕಾರ ಇಬ್ಬರು ಆಂಬ್ಯುಲೆನ್ಸ್ ಸಿಗದೆ ಕೊರೊನಾಗೆ ಪ್ರಾಣ ತೆತ್ತಿದ್ದಾರೆ. ಮೂರನೇ ಪ್ರಕರಣ ತುಮಕೂರು ರಸ್ತೆಯ ಫ್ಲೈಓವರ್ ಮೇಲೆ ನಡೆದಿದೆ.
ಗಂಟೆಗಳು ಉರುಳಿದ್ರು ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಬಾರದೆ ಜ್ವರದಿಂದ ಬಳಲುತ್ತಿರುವ ವ್ಯಕ್ತಿ ಫ್ಲೈಓವರ್ ಮೇಲೆ ಬಿದ್ದಿದ್ದಾರೆ. ಮುಂಜಾನೆಯಿಂದಲೇ ಕಳೆದ ಮೂರು ಗಂಟೆಗಳಿಂದ ಪೊಲೀಸರು ಎಷ್ಟೇ ಕರೆ ಮಾಡಿದರೂ ಇನ್ನೂ ಌಂಬುಲೆನ್ಸ್ ಬಂದಿಲ್ಲ. ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರ ಕೂಡ ಹೋಗುತ್ತಿಲ್ಲ. ಹೀಗಾಗಿ ತುಮಕೂರು ರಸ್ತೆ ಫ್ಲೈಓವರ್ ಮೇಲೆ ಬಿದ್ದಿರುವ ವ್ಯಕ್ತಿ ಬಳಿ ಹೊಯ್ಸಳ ವಾಹನ ಅಡ್ಡಲಾಗಿ ನಿಲ್ಲಿಸಿ ಮುಂಜಾನೆಯಿಂದಲೂ ಪೀಣ್ಯ ಠಾಣಾ ವ್ಯಾಪ್ತಿಯ ಪೊಲೀಸರು ಕಾವಲು ಕಾಯುತ್ತಿದ್ದಾರೆ.
ಇದು ಕುಡುಕನ ಅವಾಂತರ
ತುಮಕೂರು ರಸ್ತೆಯ ಫ್ಲೈಓವರ್ ಮೇಲೆ ಬಿದ್ದಿದ್ದ ವ್ಯಕ್ತಿಯ ಅವಾಂತರಕ್ಕೆ ತೆರೆ ಬಿದ್ದಿದೆ. ಆತ ಮದ್ಯದ ಅಮಲು ಜಾಸ್ತಿಯಾಗಿ ಫ್ಲೈಓವರ್ ಮೇಲೆ ಬಿದ್ದಿದ್ದಾನೆ. ಮಾದನಾಯಕನಹಳ್ಳಿ ನಿವಾಸಿ ವೆಂಕಟೇಶ ಕುಡಿದ ಅಮಲಿನಲ್ಲಿ ರಸ್ತೆಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ಪೀಣ್ಯ ಹೊಯ್ಸಳ ವಾಹನ ಅಡ್ಡ ನಿಲ್ಲಿಸಿ ಕುಡುಕನ ಪ್ರಾಣ ರಕ್ಷಣೆ ಮಾಡಲಾಗಿದೆ. ಸದ್ಯ ಪೊಲೀಸರು ಆತನ ಮುಖಕ್ಕೆ ನೀರಾಕಿ ಎಚ್ಚರ ಮಾಡಿ ಮನೆ ಕಡೆ ಕಳಿಸಿದ್ದಾರೆ.
Published On - 11:15 am, Mon, 29 June 20