ದಂಪತಿ ಐಸೋಲೇಷನ್ ವಾರ್ಡ್ಗೆ ಶಿಫ್ಟ್, ಐದಾರು ವರ್ಷದ ಮಕ್ಕಳಿಬ್ಬರನ್ನ ಕೇಳೋರಿಲ್ಲ
ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಂಪತಿಯನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು ಇದರಿಂದ ಅವರ ಪುಟ್ಟ ಮಕ್ಕಳು ಸಂಕಷ್ಟ ಎದುರಿಸುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ದಂಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೊವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ದಂಪತಿಯ ಇಬ್ಬರು ಮಕ್ಕಳಿಗೆ ನೆಗೆಟಿವ್ ರಿಪೋರ್ಟ್ ಬಂದ ಕಾರಣ ಅವರನ್ನು ಅಧಿಕಾರಿಗಳು ಕರೆದೊಯ್ಯಲಿಲ್ಲ. ಇದೀಗ, ಸೋಂಕಿತರ ಮಕ್ಕಳನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ಹತ್ತಿರ ಸೇರಿಸಿಕೊಳ್ತಿಲ್ಲ. ಹೀಗಾಗಿ 5 ರಿಂದ 6ವರ್ಷದ ಪುಟ್ಟ ಮಕ್ಕಳನ್ನು […]
ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಂಪತಿಯನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು ಇದರಿಂದ ಅವರ ಪುಟ್ಟ ಮಕ್ಕಳು ಸಂಕಷ್ಟ ಎದುರಿಸುತ್ತಿರುವ ಘಟನೆ ನಗರದಲ್ಲಿ ನಡೆದಿದೆ.
ದಂಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೊವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ದಂಪತಿಯ ಇಬ್ಬರು ಮಕ್ಕಳಿಗೆ ನೆಗೆಟಿವ್ ರಿಪೋರ್ಟ್ ಬಂದ ಕಾರಣ ಅವರನ್ನು ಅಧಿಕಾರಿಗಳು ಕರೆದೊಯ್ಯಲಿಲ್ಲ.
ಇದೀಗ, ಸೋಂಕಿತರ ಮಕ್ಕಳನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ಹತ್ತಿರ ಸೇರಿಸಿಕೊಳ್ತಿಲ್ಲ. ಹೀಗಾಗಿ 5 ರಿಂದ 6ವರ್ಷದ ಪುಟ್ಟ ಮಕ್ಕಳನ್ನು ಯಾರು ನೋಡಿಕೊಳ್ಳಲು ಇಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಮಕ್ಕಳ ಗೋಳು ಬಗ್ಗೆ ತಿಳಿದ ಸೋಂಕಿತ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನೂ ಸಹ ಪ್ರಶ್ನಿಸಿದರು. ಆದರೆ, ನಿಮ್ಮ ನೆಂಟರು ಮಕ್ಕಳನ್ನು ಇರಿಸಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ. ನಮ್ಮನ್ನು ಬೈದು ಕಾಲ್ ಕಟ್ ಮಾಡ್ತಿದ್ದಾರೆ ಎಂದು ಬಿಬಿಎಂಪಿ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Published On - 11:57 am, Mon, 29 June 20