ಗಂಟೆಗಳೇ ಉರುಳಿದವು, ಫ್ಲೈಓವರ್ ಮೇಲೆ ಜ್ವರದಿಂದ ಉರುಳುತ್ತಿರುವ ವ್ಯಕ್ತಿ

ತುಮಕೂರು: ಕೊರೊನಾ ಸಂಕಷ್ಟದ ಮಧ್ಯೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗುತ್ತಿಲ್ಲ ಎಂಬುವುದು ಒಂದು ವಾರದಿಂದ ನಿರಂತರವಾಗಿ ವರದಿಯಾಗುತ್ತಲೇ ಇದೆ. ಆದ್ರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ. ಇಂದು ಬೆಳಗಿನ ವರದಿ ಪ್ರಕಾರ ಇಬ್ಬರು ಆಂಬ್ಯುಲೆನ್ಸ್ ಸಿಗದೆ ಕೊರೊನಾಗೆ ಪ್ರಾಣ ತೆತ್ತಿದ್ದಾರೆ. ಮೂರನೇ ಪ್ರಕರಣ ತುಮಕೂರು ರಸ್ತೆಯ ಫ್ಲೈಓವರ್ ಮೇಲೆ ನಡೆದಿದೆ. ಗಂಟೆಗಳು ಉರುಳಿದ್ರು ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಬಾರದೆ ಜ್ವರದಿಂದ ಬಳಲುತ್ತಿರುವ ವ್ಯಕ್ತಿ ಫ್ಲೈಓವರ್ ಮೇಲೆ ಬಿದ್ದಿದ್ದಾರೆ. ಮುಂಜಾನೆಯಿಂದಲೇ ಕಳೆದ ಮೂರು ಗಂಟೆಗಳಿಂದ ಪೊಲೀಸರು ಎಷ್ಟೇ ಕರೆ […]

ಗಂಟೆಗಳೇ ಉರುಳಿದವು, ಫ್ಲೈಓವರ್ ಮೇಲೆ ಜ್ವರದಿಂದ ಉರುಳುತ್ತಿರುವ ವ್ಯಕ್ತಿ
Follow us
ಆಯೇಷಾ ಬಾನು
|

Updated on:Jun 29, 2020 | 11:33 AM

ತುಮಕೂರು: ಕೊರೊನಾ ಸಂಕಷ್ಟದ ಮಧ್ಯೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗುತ್ತಿಲ್ಲ ಎಂಬುವುದು ಒಂದು ವಾರದಿಂದ ನಿರಂತರವಾಗಿ ವರದಿಯಾಗುತ್ತಲೇ ಇದೆ. ಆದ್ರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ. ಇಂದು ಬೆಳಗಿನ ವರದಿ ಪ್ರಕಾರ ಇಬ್ಬರು ಆಂಬ್ಯುಲೆನ್ಸ್ ಸಿಗದೆ ಕೊರೊನಾಗೆ ಪ್ರಾಣ ತೆತ್ತಿದ್ದಾರೆ. ಮೂರನೇ ಪ್ರಕರಣ ತುಮಕೂರು ರಸ್ತೆಯ ಫ್ಲೈಓವರ್ ಮೇಲೆ ನಡೆದಿದೆ.

ಗಂಟೆಗಳು ಉರುಳಿದ್ರು ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಬಾರದೆ ಜ್ವರದಿಂದ ಬಳಲುತ್ತಿರುವ ವ್ಯಕ್ತಿ ಫ್ಲೈಓವರ್ ಮೇಲೆ ಬಿದ್ದಿದ್ದಾರೆ. ಮುಂಜಾನೆಯಿಂದಲೇ ಕಳೆದ ಮೂರು ಗಂಟೆಗಳಿಂದ ಪೊಲೀಸರು ಎಷ್ಟೇ ಕರೆ ಮಾಡಿದರೂ ಇನ್ನೂ ಌಂಬುಲೆನ್ಸ್ ಬಂದಿಲ್ಲ. ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರ ಕೂಡ ಹೋಗುತ್ತಿಲ್ಲ. ಹೀಗಾಗಿ ತುಮಕೂರು ರಸ್ತೆ ಫ್ಲೈಓವರ್ ಮೇಲೆ ಬಿದ್ದಿರುವ ವ್ಯಕ್ತಿ ಬಳಿ ಹೊಯ್ಸಳ ವಾಹನ ಅಡ್ಡಲಾಗಿ ನಿಲ್ಲಿಸಿ ಮುಂಜಾನೆಯಿಂದಲೂ ಪೀಣ್ಯ ಠಾಣಾ ವ್ಯಾಪ್ತಿಯ ಪೊಲೀಸರು ಕಾವಲು ಕಾಯುತ್ತಿದ್ದಾರೆ.

ಇದು ಕುಡುಕನ ಅವಾಂತರ ತುಮಕೂರು ರಸ್ತೆಯ ಫ್ಲೈಓವರ್ ಮೇಲೆ ಬಿದ್ದಿದ್ದ ವ್ಯಕ್ತಿಯ ಅವಾಂತರಕ್ಕೆ ತೆರೆ ಬಿದ್ದಿದೆ. ಆತ ಮದ್ಯದ ಅಮಲು ಜಾಸ್ತಿಯಾಗಿ ಫ್ಲೈಓವರ್ ಮೇಲೆ ಬಿದ್ದಿದ್ದಾನೆ. ಮಾದನಾಯಕನಹಳ್ಳಿ ನಿವಾಸಿ ವೆಂಕಟೇಶ ಕುಡಿದ ಅಮಲಿನಲ್ಲಿ ರಸ್ತೆಯ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ಪೀಣ್ಯ ಹೊಯ್ಸಳ ವಾಹನ ಅಡ್ಡ ನಿಲ್ಲಿಸಿ ಕುಡುಕನ ಪ್ರಾಣ ರಕ್ಷಣೆ ಮಾಡಲಾಗಿದೆ. ಸದ್ಯ ಪೊಲೀಸರು ಆತನ ಮುಖಕ್ಕೆ ನೀರಾಕಿ ಎಚ್ಚರ ಮಾಡಿ ಮನೆ ಕಡೆ ಕಳಿಸಿದ್ದಾರೆ.

Published On - 11:15 am, Mon, 29 June 20

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ