ಕೊರೊನಾದಿಂದ ರೈಲುಗಳೇ ಓಡಾಡ್ತಿಲ್ಲ.. ಕೂಲಿಗಳ ಗತಿಯೇನು?

ಬೆಂಗಳೂರು: ಕೆಲಸ ಅರಸಿ ಬಂದ ಎಷ್ಟೋ ಬಡವರಿಗೆ ಬೆಂಗಳೂರು ಆಶ್ರಯ ನೀಡಿದೆ. ಆದರೆ ಕೊರೊನಾ ಸಂಕಷ್ಟದಿಂದ ದಿನ ಕೂಲಿ ಮಾಡುತ್ತಿದ್ದ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಕೆಲಸವಿಲ್ಲದೆ ರೈಲ್ವೆ ಕೂಲಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ತಾತ್ಕಾಲಿಕವಾಗಿ ರೈಲು ಸಂಚಾರ ನಿರ್ಬಂಧಿಸಲಾಗಿದೆ. ಆದರೆ ಒಂದೊ ಎರಡೊ ರೈಲುಗಳು ಮಾತ್ರ ಸಂಚರಿಸುತ್ತಿವೆ. ರೈಲು ಸಂಚಾರ ನಿರ್ಬಂಧ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರೈಲು ಪ್ರಯಾಣಿಕರನ್ನೇ ನಂಬಿದ್ದ ಕೂಲಿಗಳೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಲಿಗಳ ಸಂಪಾದನೆ ಶೂನ್ಯವಾಗಿದೆ. […]

ಕೊರೊನಾದಿಂದ ರೈಲುಗಳೇ ಓಡಾಡ್ತಿಲ್ಲ.. ಕೂಲಿಗಳ ಗತಿಯೇನು?
Updated By:

Updated on: Jul 25, 2020 | 8:00 PM

ಬೆಂಗಳೂರು: ಕೆಲಸ ಅರಸಿ ಬಂದ ಎಷ್ಟೋ ಬಡವರಿಗೆ ಬೆಂಗಳೂರು ಆಶ್ರಯ ನೀಡಿದೆ. ಆದರೆ ಕೊರೊನಾ ಸಂಕಷ್ಟದಿಂದ ದಿನ ಕೂಲಿ ಮಾಡುತ್ತಿದ್ದ ಮಂದಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಕೆಲಸವಿಲ್ಲದೆ ರೈಲ್ವೆ ಕೂಲಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ತಾತ್ಕಾಲಿಕವಾಗಿ ರೈಲು ಸಂಚಾರ ನಿರ್ಬಂಧಿಸಲಾಗಿದೆ. ಆದರೆ ಒಂದೊ ಎರಡೊ ರೈಲುಗಳು ಮಾತ್ರ ಸಂಚರಿಸುತ್ತಿವೆ. ರೈಲು ಸಂಚಾರ ನಿರ್ಬಂಧ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರೈಲು ಪ್ರಯಾಣಿಕರನ್ನೇ ನಂಬಿದ್ದ ಕೂಲಿಗಳೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಲಿಗಳ ಸಂಪಾದನೆ ಶೂನ್ಯವಾಗಿದೆ.

ನಿತ್ಯವೂ 40 ರೈಲು ಸಂಚರಿಸ್ತಿತ್ತು.. 3 ಲಕ್ಷ ಪ್ರಯಾಣಿಕರೂ ಬರುತ್ತಿದ್ದರು!
ಈ ಹಿಂದೆ ಬೆಂಗಳೂರಿಗೆ ನಿತ್ಯ 35ರಿಂದ 40 ರೈಲುಗಳು ಸಂಚರಿಸುತ್ತಿದ್ದವು. ನಿತ್ಯವೂ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕೂಲಿಗಳು ದಿನಕ್ಕೆ 800ರಿಂದ 1000 ರೂಪಾಯಿವರೆಗೆ ಸಂಪಾದಿಸುತ್ತಿದ್ದರು. ಆದ್ರೆ ಈಗ 100 ರೂಪಾಯಿ ಸಂಪಾದನೆಯೂ ಇಲ್ಲದಂತಾಗಿದೆ. ದಿನಕ್ಕೆ ಹತ್ತು ಜನಕ್ಕೆ ಕೆಲಸ ಸಿಕ್ಕರೆ ಉಳಿದ ಕೂಲಿಗಳಿಗೆ ಕೆಲಸವೇ ಇಲ್ಲಾ. ಮನೆ ಬಾಡಿಗೆ ಸೇರಿದಂತೆ ಜೀವನ ನಡೆಸೋದೆ ಕಷ್ಟವಾಗಿದೆ. ಕೊರೊನಾದಿಂದ ನೂರಾರು ಕೂಲಿಗಳು ಬೀದಿಗೆ ಬಿದ್ದಿದ್ದಾರೆ ಎನ್ನುತ್ತಾರೆ ರೈಲ್ವೆ ನಿಲ್ದಾಣದಲ್ಲಿನ ಕೂಲಿಗಳು.

Published On - 1:53 pm, Fri, 24 July 20