ಕೊರೊನಾ ನಡುವೆಯೂ ಜನ ಜಾತ್ರೆಯಲ್ಲಿ ಭಾಗಿ, ಅಧಿಕಾರಿಗಳೋ.. ಗಪ್ ಚುಪ್!
ವಿಜಯಪುರ: ಕೊರೊನಾ ಉಪಟಳವಿದ್ದರೂ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಜನ ಕಾನೂನು ಉಲ್ಲಂಘಿಸಿ ಯಾವುದೇ ಸುರಕ್ಷತಾ ಕ್ರಮವಿಲ್ಲದೆ ದುರ್ಗಾದೇವಿ ಹಾಗೂ ಸೇವಾಲಾಲ್ ಜಾತ್ರೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನೆಡೆದಿದೆ. ನಿನ್ನೆಯಷ್ಟೇ ಕೂಡಗಿ ಗ್ರಾಮದಲ್ಲಿ ಏಳು ದಿನಗಳವರೆಗೆ ಗ್ರಾಮದ ಹಿರಿಯರ ನಿರ್ಧಾರದಂತೆ ಲಾಕ್ ಡೌನ್ ಜಾರಿ ಮಾಡಿದ್ದರು. ಆದರೆ ಇಂದು ಅದೇ ಗ್ರಾಮದ ಮತ್ತೊಂದು ಗುಂಪಿನಿಂದ ಜಾತ್ರೆ ಆಯೋಜನೆ ಮಾಡಲಾಗಿದೆ. ಮಕ್ಕಳು, ಮಹಿಳೆಯರು, ಪುರುಷರು ಎಂಬ ಬೇಧವಿಲ್ಲದೇ.. ಯಾವುದೇ ಸುರಕ್ಷತಾ ಕ್ರಮಗಳನ್ನ ತೆಗೆದುಕ್ಕೊಳ್ಳದೆ ಜಾತ್ರೆ ನೆಡೆಸಲಾಗಿದೆ. […]
Follow us on
ವಿಜಯಪುರ: ಕೊರೊನಾ ಉಪಟಳವಿದ್ದರೂ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಜನ ಕಾನೂನು ಉಲ್ಲಂಘಿಸಿ ಯಾವುದೇ ಸುರಕ್ಷತಾ ಕ್ರಮವಿಲ್ಲದೆ ದುರ್ಗಾದೇವಿ ಹಾಗೂ ಸೇವಾಲಾಲ್ ಜಾತ್ರೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನೆಡೆದಿದೆ.
ನಿನ್ನೆಯಷ್ಟೇ ಕೂಡಗಿ ಗ್ರಾಮದಲ್ಲಿ ಏಳು ದಿನಗಳವರೆಗೆ ಗ್ರಾಮದ ಹಿರಿಯರ ನಿರ್ಧಾರದಂತೆ ಲಾಕ್ ಡೌನ್ ಜಾರಿ ಮಾಡಿದ್ದರು. ಆದರೆ ಇಂದು ಅದೇ ಗ್ರಾಮದ ಮತ್ತೊಂದು ಗುಂಪಿನಿಂದ ಜಾತ್ರೆ ಆಯೋಜನೆ ಮಾಡಲಾಗಿದೆ. ಮಕ್ಕಳು, ಮಹಿಳೆಯರು, ಪುರುಷರು ಎಂಬ ಬೇಧವಿಲ್ಲದೇ.. ಯಾವುದೇ ಸುರಕ್ಷತಾ ಕ್ರಮಗಳನ್ನ ತೆಗೆದುಕ್ಕೊಳ್ಳದೆ ಜಾತ್ರೆ ನೆಡೆಸಲಾಗಿದೆ.
ಜಾತ್ರೆಗಾಗಿ ವಿಶೇಷ ಮಟನ್ ಊಟದ ವ್ಯವಸ್ಥೆಯೂ ಮಾಡಲಾಗಿದ್ದು ಗ್ರಾಮಸ್ಥರೆಲ್ಲ ಗುಂಪು ಗುಂಪಾಗಿ ಕುಳಿತು ಭೋಜನ ಮಾಡಿದ್ದಾರೆ. ಈ ಕಾನೂನುಬಾಹಿರ ಚಟುವಟಿಕೆಗಳೆಲ್ಲ ಸಂಬಂಧಿಸಿದ ಅಧಿಕಾರಿಗಳ ಕಣ್ಣಿಗೆ ಕಂಡರೂ ಸಹ ಕಂಡೂ ಕಾಣದಂತಿದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸುವಂತಿತ್ತು.