ಬೆಂಗಳೂರಿನಲ್ಲಿ ಒಂದೇ ದಿನ ಕೊರೊನಾಗೆ 75 ಮಂದಿ ಬಲಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ರುದ್ರತಾಂಡವ ಭೀಕರವಾಗುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದಲ್ಲಿಂದು ಹೊಸದಾಗಿ 3693 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಲ್ಲಿ ಬೆಂಗಳೂರಿನಲ್ಲೇ ಒಂದೇ ದಿನಕ್ಕೆ 2,208 ಜನರಿಗೆ ಸೋಂಕು ತಗುಲಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55,115ಕ್ಕೆ ಏರಿಕೆಯಾಗಿದ್ದು,ಇಂದು ಒಂದೇ ದಿನ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 115 ಜನ ಸಾವನ್ನಪ್ಪಿದರೆ, ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1147 ಜನ ಕೊನೆಯುಸಿರೆಳೆದಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿಗೆ 75 ಜನ ಬಲಿಯಾಗಿದ್ದು, ಒಟ್ಟಾರೆಯಾಗಿ […]
ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ರುದ್ರತಾಂಡವ ಭೀಕರವಾಗುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ರಾಜ್ಯದಲ್ಲಿಂದು ಹೊಸದಾಗಿ 3693 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಲ್ಲಿ ಬೆಂಗಳೂರಿನಲ್ಲೇ ಒಂದೇ ದಿನಕ್ಕೆ 2,208 ಜನರಿಗೆ ಸೋಂಕು ತಗುಲಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55,115ಕ್ಕೆ ಏರಿಕೆಯಾಗಿದ್ದು,ಇಂದು ಒಂದೇ ದಿನ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 115 ಜನ ಸಾವನ್ನಪ್ಪಿದರೆ, ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1147 ಜನ ಕೊನೆಯುಸಿರೆಳೆದಿದ್ದಾರೆ.
ಜೊತೆಗೆ ಬೆಂಗಳೂರಿನಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿಗೆ 75 ಜನ ಬಲಿಯಾಗಿದ್ದು, ಒಟ್ಟಾರೆಯಾಗಿ ಬೆಂಗಳೂರು ಒಂದರಲ್ಲೆ 582 ಜನ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.