ಕೊರೊನಾ ಟೆಸ್ಟ್ ಸ್ಯಾಂಪಲ್‌ಗೆ 102 ಬಸ್‌ಗಳನ್ನು ನಿಯೋಜಿಸಿದ ಆಂಧ್ರ ಪ್ರದೇಶ
ಹೈದರಾಬಾದ್: ಕೊರೊನಾ ಮಹಾಮಾರಿಯ ವಿರುದ್ಧ ಆಂಧ್ರ ಪ್ರದೇಶ ತನ್ನ ಹೋರಾಟವನ್ನ ತೀವ್ರಗೊಳಿಸಿದೆ. ಕೊರೊನಾ ಸೋಂಕಿತರಿಗೆ ತಕ್ಷಣವೇ ಚಿಕಿತ್ಸೆ ನೀಡಲು ಪರಿಣಾಮಕಾರಿ ಪ್ರಯೋಗಳನ್ನ ಮಾಡುತ್ತಿದೆ. ಈ ಸಂಬಂಧ ಅದು ರಾಜ್ಯದಲ್ಲಿ ಹೆಚ್ಚು ಕೊರೊನಾ ಸೋಂಕುಗಳಿರುವ ಪ್ರದೇಶಗಳಲ್ಲಿ ಬಸ್‌ಗಳನ್ನು ನಿಯೋಜಿಸುತ್ತಿದ್ದು, ಸೋಂಕು ಪರೀಕ್ಷೆಯ ನಂತರ ಸ್ಯಾಂಪಲ್‌ಗಳನ್ನು ತಕ್ಷಣವೇ ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಈ ಸಂಬಂಧ ಅದು ಮತ್ತೇ 52 ಹೊಸ ಬಸ್‌ಗಳನ್ನು ಕೋವಿಡ್ ಕಾರ್ಯಕ್ಕೆ ನಿಯೋಜಿಸಿದೆ. ಇದರೊಂದಿಗೆ ಇದುವರೆಗೆ ರಾಜ್ಯದಲ್ಲಿ ಒಟ್ಟು 102 ಬಸ್‌ಗಳನ್ನು ಕೋವಿಡ್ ಟೆಸ್ಟ್ ಮತ್ತು ಸ್ಯಾಂಪಲ್ ಸಂಗಹಿಸಲು […]

ಹೈದರಾಬಾದ್: ಕೊರೊನಾ ಮಹಾಮಾರಿಯ ವಿರುದ್ಧ ಆಂಧ್ರ ಪ್ರದೇಶ ತನ್ನ ಹೋರಾಟವನ್ನ ತೀವ್ರಗೊಳಿಸಿದೆ. ಕೊರೊನಾ ಸೋಂಕಿತರಿಗೆ ತಕ್ಷಣವೇ ಚಿಕಿತ್ಸೆ ನೀಡಲು ಪರಿಣಾಮಕಾರಿ ಪ್ರಯೋಗಳನ್ನ ಮಾಡುತ್ತಿದೆ. ಈ ಸಂಬಂಧ ಅದು ರಾಜ್ಯದಲ್ಲಿ ಹೆಚ್ಚು ಕೊರೊನಾ ಸೋಂಕುಗಳಿರುವ ಪ್ರದೇಶಗಳಲ್ಲಿ ಬಸ್‌ಗಳನ್ನು ನಿಯೋಜಿಸುತ್ತಿದ್ದು, ಸೋಂಕು ಪರೀಕ್ಷೆಯ ನಂತರ ಸ್ಯಾಂಪಲ್‌ಗಳನ್ನು ತಕ್ಷಣವೇ ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಈ ಸಂಬಂಧ ಅದು ಮತ್ತೇ 52 ಹೊಸ ಬಸ್‌ಗಳನ್ನು ಕೋವಿಡ್ ಕಾರ್ಯಕ್ಕೆ ನಿಯೋಜಿಸಿದೆ. ಇದರೊಂದಿಗೆ ಇದುವರೆಗೆ ರಾಜ್ಯದಲ್ಲಿ ಒಟ್ಟು 102 ಬಸ್‌ಗಳನ್ನು ಕೋವಿಡ್ ಟೆಸ್ಟ್ ಮತ್ತು ಸ್ಯಾಂಪಲ್ ಸಂಗಹಿಸಲು ನಿಯೋಜಿಸಿದಂತಾಗಿದೆ. ಈ ಬಸ್‌ಗಳು ರಾಜ್ಯದ 95 ಅತಿ ಹೆಚ್ಚು ಸೋಂಕಿತರಿರುವ ಪ್ರದೇಶಗಳಿಂದ ಟೆಸ್ಟ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ.