ಕೊರೊನಾ ಕಲಿಸಿದ ಪಾಠ, ದುಬೈನಿಂದ ವಾಪಸಾಗಿ ಕೃಷಿಯತ್ತ ಮುಖ ಮಾಡಿದರು!
ಉಡುಪಿ: ಮಹಾಮಾರಿ ಕೊರೊನಾ ಕೋಟ್ಯಂತರ ಜನರ ದೈನಂದಿನ ಜೀವನವನ್ನ ಅಸ್ತವ್ಯಸ್ತ ಮಾಡಿದ್ದೇನೋ ನಿಜ, ಆದ್ರೆ ಹಾಗೇನೆ ಉದ್ಯೋಗ ಅರಸಿ ಊರು ತೊರೆದು ಹೋದವರನ್ನ ಮತ್ತೆ ತಮ್ಮ ಮೂಲ ಗ್ರಾಮಗಳಿಗೆ ಮರಳುವಂತೆ ಮಾಡಿದೆ. ಹೀಗೆ ಮರಳಿ ತಮ್ಮೂರಿಗೆ ಬಂದ ಯುವಕರ ತಂಡವೊಂದು ಸುಮ್ಮನೆ ಸಮಯ ವ್ಯರ್ಥಮಾಡದೆ ಕೃಷಿಯಲ್ಲಿ ತೊಡಗಿರೋದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೌದು, ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದದ ಪೆರಂಪಳ್ಳಿ ಎಂಬ ಪುಟ್ಟ ಗ್ರಾಮದ ಜನರಿಗೆ ಪ್ರಮುಖ ಉದ್ಯೋಗ ಅಂದ್ರೆ ಕೃಷಿ ಕಾರ್ಯ. ಈ ಗ್ರಾಮದ ಸುತ್ತಲೂ […]
ಉಡುಪಿ: ಮಹಾಮಾರಿ ಕೊರೊನಾ ಕೋಟ್ಯಂತರ ಜನರ ದೈನಂದಿನ ಜೀವನವನ್ನ ಅಸ್ತವ್ಯಸ್ತ ಮಾಡಿದ್ದೇನೋ ನಿಜ, ಆದ್ರೆ ಹಾಗೇನೆ ಉದ್ಯೋಗ ಅರಸಿ ಊರು ತೊರೆದು ಹೋದವರನ್ನ ಮತ್ತೆ ತಮ್ಮ ಮೂಲ ಗ್ರಾಮಗಳಿಗೆ ಮರಳುವಂತೆ ಮಾಡಿದೆ. ಹೀಗೆ ಮರಳಿ ತಮ್ಮೂರಿಗೆ ಬಂದ ಯುವಕರ ತಂಡವೊಂದು ಸುಮ್ಮನೆ ಸಮಯ ವ್ಯರ್ಥಮಾಡದೆ ಕೃಷಿಯಲ್ಲಿ ತೊಡಗಿರೋದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದದ ಪೆರಂಪಳ್ಳಿ ಎಂಬ ಪುಟ್ಟ ಗ್ರಾಮದ ಜನರಿಗೆ ಪ್ರಮುಖ ಉದ್ಯೋಗ ಅಂದ್ರೆ ಕೃಷಿ ಕಾರ್ಯ. ಈ ಗ್ರಾಮದ ಸುತ್ತಲೂ ಅರಣ್ಯ ಪ್ರದೇಶವಿದೆ. ಈ ಭಾಗದ ಯುವಕರು ಕೃಷಿಯಿಂದ ವಿಮುಖರಾಗಿ ಬೇರೆ ಬೇರೆ ಊರಿಗೆ ಉದ್ಯೋಗ ಅರಸಿಕೊಂಡು ಹೋಗಿದ್ದರು. ಕೈ ತುಂಬಾ ಸಿಗುವ ಸಂಬಳ ಜೊತೆಗೆ ಸಿಟಿ ಜೀವನಕ್ಕೆ ಹೊಂದಿಕೊಂಡಿದ್ದರು.
ಮೆಟ್ರೋಗಳಿಂದ ಮತ್ತೆ ಹಳ್ಳಿಯತ್ತ ಯುವಕರ ಚಿತ್ತ ಆದರೆ ಧುತ್ತೆಂದು ಬಂದಪ್ಪಳಿಸಿದ ಕೊರೊನಾ ಇವರನ್ನು ಮರಳಿ ಊರಿಗೆ ಬಂದು ಕೃಷಿಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ದೂರದ ದುಬೈ, ಮುಂಬೈ, ಬೆಂಗಳೂರು ಪರಿಸರದಲ್ಲಿದ್ದ ಯುವಕರು ಈಗ ಊರಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಮನೆಯ ಹಿರಿಯರೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ತಮ್ಮ ಸ್ನೇಹಿತರ ಗದ್ದೆಯಲ್ಲೂ ಕೃಷಿ ಕಾರ್ಯ ಮಾಡಿ ಅವರಿಗೂ ನೆರವಾಗುತ್ತಿದ್ದಾರೆ.
ಗದ್ದೆಯಲ್ಲಿ ನಾಟಿ ಬಲು ಜೋರು ಕೃಷಿಯ ಜೊತೆಗೆ ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಯುವಕರು, ಹಳ್ಳಿಯಲ್ಲಿ ಸಿಗುವ ಖುಷಿ ನೆಮ್ಮದಿ ಸಿಟಿಯಲ್ಲಿ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಪಟ್ಟಣದಿಂದ ವಾಪಸು ತಮ್ಮ ಗ್ರಾಮಕ್ಕೆ ಬಂದಿರುವ ಈ ಯುವಕರು ಒಂದು ವಾರದಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗದ್ದೆಯಲ್ಲಿ ದಿನವೂ ನಾಟಿ ಮಾಡುತ್ತಿದ್ದಾರೆ. ಹಸಿರ ಪರಿಸರದ ನಡುವೆ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡು ಮಣ್ಣಿನೊಂದಿಗೆ ಕಳೆದುಹೋಗಿದ್ದ ಸಂಬಂಧವನ್ನ ಮತ್ತೆ ಬೆಳೆಸಿಕೊಳ್ಳುತ್ತಿದ್ದಾರೆ.
ಹೀಗೆ ಎಲ್ಲಾ ಯುವಕರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಬಹುದು ಮತ್ತು ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಆಸಕ್ತಿಯನ್ನೂ ಬೆಳೆಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಉಡುಪಿಯ ಪೆರಂಪಳ್ಳಿ ಗ್ರಾಮದ ಯುವಕರು ಕೃಷಿ ಕಾರ್ಯದಲ್ಲಿ ತೊಡಗುವ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ. ಹೀಗೆ ಎಲ್ಲ ಯುವಕರು ಇತರ ಉದ್ಯೋಗಗಳಂತೆ ಕೃಷಿಯಲ್ಲೂ ಆಸಕ್ತಿ ತೋರಿದರೆ ಕೃಷಿಯಲ್ಲಿ ಕ್ರಾಂತಿ ಕಷ್ಟಸಾಧ್ಯವೇನಲ್ಲ. -ಹರೀಶ್ ಪಾಲೆಚ್ಚಾರ್
Published On - 4:52 pm, Fri, 17 July 20