ಹಬ್ಬದ ಸಂಭ್ರಮದಲ್ಲಿ ಅಪಾಯವನ್ನೇ ಮರೆತ ಜನ, ಕೆ.ಆರ್​.ಮಾರ್ಕೆಟ್​ನಲ್ಲಿ ಜನ ಸಂದಣಿ

ಬೆಂಗಳೂರು: ರಾಜ್ಯದಲ್ಲಿಂದು ಆಯುಧ ಪೂಜೆ ಸಂಭ್ರಮ ಜೋರಾಗಿದೆ. ದಸರಾ ಹಬ್ಬದ ಹಿನ್ನೆಲೆ K.R.ಮಾರ್ಕೆಟ್​ನಲ್ಲಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹಬ್ಬದ ವಸ್ತುಗಳ ಖರೀದಿ ನೆಪದಲ್ಲಿ ಮಾರುಕಟ್ಟೆಗಳಲ್ಲಿ ಜನಜಾತ್ರೆಯೇ ಕಂಡು ಬರುತ್ತಿದೆ. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮಹಾಮಾರಿ ಕೊರೊನಾಗೆ ಹೆದರದೆ ಸಿಲಿಕಾನ್ ಸಿಟಿ ಮಂದಿ ಮಾರುಕಟ್ಟೆಯಲ್ಲಿ ಗಿಜುಗುಡುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಸಾವಿರಾರು ಜನ ಜಮಾಯಿಸಿದ್ದಾರೆ. ಫೈನ್ ಹಾಕೋಕೆ, ಜನ ಸಂದಣಿ ನಿಯಂತ್ರಿಸಲು ಫೀಲ್ಡಿಗಿಳಿದ ಮಾರ್ಷಲ್​​ಗಳು ನಿಯಂತ್ರಿಸಲಾಗದೆ ಕೈ ಚೆಲ್ಲಿ ಸುಮ್ಮನಾಗಿದ್ದಾರೆ. ಕೊಯಂಬೇಡು ಮಾರ್ಕೆಟ್ ಆಗುತ್ತಾ ಕೆ.ಆರ್​.ಮಾರ್ಕೆಟ್? ಒಂದೇ […]

ಹಬ್ಬದ ಸಂಭ್ರಮದಲ್ಲಿ ಅಪಾಯವನ್ನೇ ಮರೆತ ಜನ, ಕೆ.ಆರ್​.ಮಾರ್ಕೆಟ್​ನಲ್ಲಿ ಜನ ಸಂದಣಿ

Updated on: Oct 25, 2020 | 9:20 AM

ಬೆಂಗಳೂರು: ರಾಜ್ಯದಲ್ಲಿಂದು ಆಯುಧ ಪೂಜೆ ಸಂಭ್ರಮ ಜೋರಾಗಿದೆ. ದಸರಾ ಹಬ್ಬದ ಹಿನ್ನೆಲೆ K.R.ಮಾರ್ಕೆಟ್​ನಲ್ಲಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹಬ್ಬದ ವಸ್ತುಗಳ ಖರೀದಿ ನೆಪದಲ್ಲಿ ಮಾರುಕಟ್ಟೆಗಳಲ್ಲಿ ಜನಜಾತ್ರೆಯೇ ಕಂಡು ಬರುತ್ತಿದೆ.

ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮಹಾಮಾರಿ ಕೊರೊನಾಗೆ ಹೆದರದೆ ಸಿಲಿಕಾನ್ ಸಿಟಿ ಮಂದಿ ಮಾರುಕಟ್ಟೆಯಲ್ಲಿ ಗಿಜುಗುಡುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಸಾವಿರಾರು ಜನ ಜಮಾಯಿಸಿದ್ದಾರೆ. ಫೈನ್ ಹಾಕೋಕೆ, ಜನ ಸಂದಣಿ ನಿಯಂತ್ರಿಸಲು ಫೀಲ್ಡಿಗಿಳಿದ ಮಾರ್ಷಲ್​​ಗಳು ನಿಯಂತ್ರಿಸಲಾಗದೆ ಕೈ ಚೆಲ್ಲಿ ಸುಮ್ಮನಾಗಿದ್ದಾರೆ.

ಕೊಯಂಬೇಡು ಮಾರ್ಕೆಟ್ ಆಗುತ್ತಾ ಕೆ.ಆರ್​.ಮಾರ್ಕೆಟ್?
ಒಂದೇ ದಿನ ತೆರೆದಿದ್ದ ತಮಿಳುನಾಡಿನ ಕೊಯಂಬೇಡು ಮಾರ್ಕೆಟ್​ನಲ್ಲಿ ಸಾವಿರಾರು ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಅದೇ ರೀತಿ ಕೆ.ಆರ್​.ಮಾರುಕಟ್ಟೆ ಸಹ ಆಗುವ ಆತಂಕ ಶುರುವಾಗಿದೆ. ಕೊರೊನಾ ಭೀತಿಯಿಲ್ಲದೆ ನಿಯಮ ಪಾಲಿಸದೆ ಬೆಂಗಳೂರಿನ ಕೆ.ಆರ್​.ಮಾರುಕಟ್ಟೆಯಲ್ಲಿ ಜನಜಂಗುಳಿಯೇ ಕಂಡು ಬಂದಿದೆ. ಒಬ್ಬರಿಗೆ ಕೊರೊನಾ ಇದ್ದರೂ ಎಷ್ಟು ಜನರಿಗೆ ಹರಡಬಹುದು ಎಂಬ ಯೋಚನೆಯೂ ಇಲ್ಲದೆ ಜನ ಹಬ್ಬದ ಸಂಭ್ರಮದಲ್ಲಿದ್ದಾರೆ.