AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜೇಂದ್ರ ಮೃಗಾಲಯದಲ್ಲಿ ಮನೆಮಾಡಿದ ಸಂಭ್ರಮ; ಪ್ರಾಚಿ ಜೀಬ್ರಾಗೆ ಹೆಣ್ಣು ಮರಿ ಜನನ

ಮೈಸೂರು: ಅರಮನೆ ನಗರಿಯ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ ಮನೆಮಾಡಿದೆ. ಅದಕ್ಕೆ ಕಾರಣ, ಮೃಗಾಲಯಕ್ಕೆ ಪುಟ್ಟ ಅತಿಥಿಯೊಂದು ಆಗಮಿಸಿದೆ. ಹೌದು, ಮೃಗಾಲಯದ ಪ್ರಾಚಿ ಎಂಬ ಹೆಸರಿನ ಜೀಬ್ರಾಗೆ ಒಂದು ಹೆಣ್ಣು ಮರಿ ಜನಿಸಿದೆ. ಪ್ರಾಚಿ ಮತ್ತು ರಿಷಿ ಜೋಡಿಯ ಜೀಬ್ರಾಗಳಿಗೆ ಅಕ್ಟೋಬರ್ 16ರಂದು ಈ ಹೆಣ್ಣು ಮರಿ ಜನಿಸಿದೆ. ಜೀಬ್ರಾ ಮರಿಯ ಜನನದಿಂದಾಗಿ ಮೃಗಾಲಯದಲ್ಲಿ ಸಂಭ್ರಮ ಮನೆಮಾಡಿದ್ದು ಪುಟ್ಟ ಕಂದಮ್ಮ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಇದೀಗ, ಜನಿಸಿರುವ ಮರಿ ಸೇರಿದಂತೆ ಮೃಗಾಲಯದಲ್ಲಿರುವ ಜೀಬ್ರಾಗಳ ಸಂಖ್ಯೆ 7 […]

ಚಾಮರಾಜೇಂದ್ರ ಮೃಗಾಲಯದಲ್ಲಿ ಮನೆಮಾಡಿದ ಸಂಭ್ರಮ; ಪ್ರಾಚಿ ಜೀಬ್ರಾಗೆ ಹೆಣ್ಣು ಮರಿ ಜನನ
KUSHAL V
|

Updated on: Oct 25, 2020 | 10:45 AM

Share

ಮೈಸೂರು: ಅರಮನೆ ನಗರಿಯ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ ಮನೆಮಾಡಿದೆ. ಅದಕ್ಕೆ ಕಾರಣ, ಮೃಗಾಲಯಕ್ಕೆ ಪುಟ್ಟ ಅತಿಥಿಯೊಂದು ಆಗಮಿಸಿದೆ.

ಹೌದು, ಮೃಗಾಲಯದ ಪ್ರಾಚಿ ಎಂಬ ಹೆಸರಿನ ಜೀಬ್ರಾಗೆ ಒಂದು ಹೆಣ್ಣು ಮರಿ ಜನಿಸಿದೆ. ಪ್ರಾಚಿ ಮತ್ತು ರಿಷಿ ಜೋಡಿಯ ಜೀಬ್ರಾಗಳಿಗೆ ಅಕ್ಟೋಬರ್ 16ರಂದು ಈ ಹೆಣ್ಣು ಮರಿ ಜನಿಸಿದೆ. ಜೀಬ್ರಾ ಮರಿಯ ಜನನದಿಂದಾಗಿ ಮೃಗಾಲಯದಲ್ಲಿ ಸಂಭ್ರಮ ಮನೆಮಾಡಿದ್ದು ಪುಟ್ಟ ಕಂದಮ್ಮ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಇದೀಗ, ಜನಿಸಿರುವ ಮರಿ ಸೇರಿದಂತೆ ಮೃಗಾಲಯದಲ್ಲಿರುವ ಜೀಬ್ರಾಗಳ ಸಂಖ್ಯೆ 7 ಕ್ಕೆ ಏರಿದೆ. ಸದ್ಯ, ಮೃಗಾಲಯದಲ್ಲಿ ಮೂರು ಗಂಡು ಹಾಗೂ ನಾಲ್ಕು ಹೆಣ್ಣು ಜೀಬ್ರಾಗಳಿವೆ.