ಕೋಲಾರ: 2.25 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸಂಗ್ರಹಿಸಿದ್ದವರನ್ನು KGF ಪೊಲೀಸರು ಬಂಧಿಸಿದ್ದಾರೆ. ಖಾಕಿ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕುಖ್ಯಾತ ರೌಡಿ ತಂಗಂ ಸಹೋದರ ಪಾಲ್‌ರಾಜ್ ಹಾಗೂ ಆತನ ಸಹಚರ ವಸಂತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಿಲಾಗಿದೆ. ಆರೋಪಿಗಳು KGF ನಗರದ ಕೃಷ್ಣಗಿರಿ ಲೈನ್ನಲ್ಲಿರುವ ತಮ್ಮ ನಿವಾಸದಲ್ಲಿ ಅಡಗಿಸಿಟ್ಟಿದ್ದ 410 ಕೆ.ಜೆ ಗಾಂಜಾವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ವಶ ಪಡಿಸಿಕೊಂಡಿರುವ ಗಾಂಜಾದ ಮೌಲ್ಯ ಬರೋಬ್ಬರಿ 2.25 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಗಾಂಜಾ ಸಂಗ್ರಹಿಸಿರುವ ಮಾಹಿತಿ ಪೊಲೀಸರಿಗೆ ತಲುಪುತ್ತಿದ್ದಂತೆ ಪ್ರಮುಖ ಅರೋಪಿ ಪಾಲ್‌ರಾಜ್ ಮತ್ತು ಆತನ 7 ಜನ ಸಹಚರರು ನಾಪತ್ತೆಯಾಗಿದ್ರು. ಹಾಗಾಗಿ, ವಿಶೇಷ ತಂಡವನ್ನು ರಚಿಸಿದ್ದ KGF SP ಇಲಕ್ಕಿಯಾ ಕರುಣಾಗರನ್ ತಮಿಳುನಾಡಿನಲ್ಲಿ ಅರೋಪಿಗಳನ್ನ ಬಂಧಿಸಿದ್ದಾರೆ. ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.