ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ 108 ಆ್ಯಂಬುಲೆನ್ಸ್ ಚಾಲಕ ಸೋಂಕಿಗೆ ಬಲಿ -ಕುಟುಂಬಸ್ಥರ ಆರೋಪ
ಚಿತ್ರದುರ್ಗ: ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ 108 ಆ್ಯಂಬುಲೆನ್ಸ್ ಚಾಲಕರೊಬ್ಬರು ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಚಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗಾಗಿ, ಮೃತ ಚಾಲಕನ ಕುಟುಂಬಸ್ಥರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೃತ ಆ್ಯಂಬುಲೆನ್ಸ್ ಚಾಲಕ ಜಗದೀಶ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಕೆಲಸದ ಅಂಗವಾಗಿ ಕೊರೊನಾ ಸೋಂಕಿತರನ್ನು ಪ್ರತಿನಿತ್ಯ ಆಸ್ಪತ್ರೆಗೆ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಅವರ ಸುರಕ್ಷತೆಗಾಗಿ ಆರೋಗ್ಯ ಇಲಾಖೆ ಯಾವುದೇ ಪರಿಕರಗಳನ್ನು ನೀಡಿರಲಿಲ್ಲ ಎಂದು ಹೇಳಲಾಗಿದೆ. ಯಾವುದೇ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಜಗದೀಶ್ಗೆ ಸೋಂಕು […]
ಚಿತ್ರದುರ್ಗ: ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ 108 ಆ್ಯಂಬುಲೆನ್ಸ್ ಚಾಲಕರೊಬ್ಬರು ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಚಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗಾಗಿ, ಮೃತ ಚಾಲಕನ ಕುಟುಂಬಸ್ಥರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೃತ ಆ್ಯಂಬುಲೆನ್ಸ್ ಚಾಲಕ ಜಗದೀಶ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಕೆಲಸದ ಅಂಗವಾಗಿ ಕೊರೊನಾ ಸೋಂಕಿತರನ್ನು ಪ್ರತಿನಿತ್ಯ ಆಸ್ಪತ್ರೆಗೆ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಅವರ ಸುರಕ್ಷತೆಗಾಗಿ ಆರೋಗ್ಯ ಇಲಾಖೆ ಯಾವುದೇ ಪರಿಕರಗಳನ್ನು ನೀಡಿರಲಿಲ್ಲ ಎಂದು ಹೇಳಲಾಗಿದೆ. ಯಾವುದೇ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಜಗದೀಶ್ಗೆ ಸೋಂಕು ತಗುಲಿದೆ ಎಂದು ಆತನ ಕುಟುಂಬದವರು ಹೇಳಿದ್ದಾರೆ.
ಜಗದೀಶ್ ಅಗಲಿಕೆಗೆ ಆತನ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಕೊವಿಡ್ ಸಮಯದಲ್ಲಿ ಚಾಲಕರಿಗೆ ಕೊಡಬೇಕಾದ ಮುನ್ನಚರಿಕಾ ಸಲಕರಣೆಗಳನ್ನ ಕೊಟ್ಟಿಲ್ಲ. ಮಾಸ್ಕ್ ಇಲ್ಲ, ಕಿಟ್ ಇಲ್ಲ. ಕೊನೆಗೆ ನಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ. ಹಾಗಾಗಿ, ಪಾಸಿಟಿವ್ ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡೋ ಸಮಯದಲ್ಲಿ ಜಗದೀಶ್ಗೆ ಸೋಂಕು ತಗುಲಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಜೊತೆಗೆ, ಮೃತ ಜಗದೀಶ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಹ ಆಗ್ರಹಿಸಿದ್ದಾರೆ.