ಪೊಲೀಸ್ ಠಾಣೆ ಅಭಿವೃದ್ಧಿಗಾಗಿ ಎಂದು ಸಾಹೇಬರ ಹೆಸರು ಬಳಸಿ, ಮುಖ್ಯಪೇದೆ ಹಣ ವಸೂಲಿ
ವಿಜಯಪುರ: ಬೈಕ್ ಸವಾರರಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ವಸೂಲಿ ಮಾಡತ್ತಿರುವ ಘಟನೆ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ಠಾಣೆ ಹೆಡ್ ಕಾನ್ಸ್‌ಟೇಬಲ್ H.S.ಹೊಸಮನಿ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ. ಬೈಕ್ಗಳಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ಪೀಕುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ್ರೆ ಪೊಲೀಸ್ ಠಾಣೆಗೆ ಉಪಕರಣ ಖರೀದಿ ಮಾಡಲು ಮತ್ತು ಸಿಸಿಕ್ಯಾಮರಾಗಾಗಿ PSI ಸೂಚನೆ ಮೇರೆಗೆ ಹಣ ಸಂಗ್ರಹಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಹೇಳುತ್ತಿದ್ದಾರಂತೆ. ಪ್ರತಿ ಬೈಕ್ ಸವಾರರ ಬಳಿ 500 ರೂಪಾಯಿಯಂತೆ ಹಣ […]
ವಿಜಯಪುರ: ಬೈಕ್ ಸವಾರರಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ವಸೂಲಿ ಮಾಡತ್ತಿರುವ ಘಟನೆ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ಠಾಣೆ ಹೆಡ್ ಕಾನ್ಸ್‌ಟೇಬಲ್ H.S.ಹೊಸಮನಿ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ.
ಬೈಕ್ಗಳಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ಪೀಕುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ್ರೆ ಪೊಲೀಸ್ ಠಾಣೆಗೆ ಉಪಕರಣ ಖರೀದಿ ಮಾಡಲು ಮತ್ತು ಸಿಸಿಕ್ಯಾಮರಾಗಾಗಿ PSI ಸೂಚನೆ ಮೇರೆಗೆ ಹಣ ಸಂಗ್ರಹಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಹೇಳುತ್ತಿದ್ದಾರಂತೆ.
ಪ್ರತಿ ಬೈಕ್ ಸವಾರರ ಬಳಿ 500 ರೂಪಾಯಿಯಂತೆ ಹಣ ಸಂಗ್ರಹ ಮಾಡುತ್ತಿದ್ದಾರಂತೆ. ಹೆಡ್ ಕಾನ್ಸ್‌ಟೇಬಲ್ H.S.ಹೊಸಮನಿಯ ಈ ಕೃತ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಪೊಲೀಸಪ್ಪನ ವಸೂಲಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ.