ವೇತನ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಹಾವೇರಿ ಚಾಲಕ ಆತ್ಮಹತ್ಯೆಗೆ ಶರಣು

|

Updated on: Mar 26, 2021 | 1:26 PM

ಸರಿಯಾಗಿ ಸಂಬಳ ಬಾರದ್ದಕ್ಕೆ ಬೇಸತ್ತು ಚಾಲಕ‌ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಸಂಬಳವಿಲ್ಲದೆ ಇರೋದ್ರಿಂದ ಕುಟುಂಬ ನಿರ್ವಹಣೆಗೆ ಗೋಪಾಲರೆಡ್ಡಿ ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದ. ಆದ್ರೆ ವೇತನ ಸಿಗುವ ಭರವಸೆ ಕೈಬಿಟ್ಟಿದೆ.

ವೇತನ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಹಾವೇರಿ ಚಾಲಕ ಆತ್ಮಹತ್ಯೆಗೆ ಶರಣು
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು
Follow us on

ಹಾವೇರಿ: ಕಳೆದ ಕೆಲ ತಿಂಗಳಿಂದ ವೇತನ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ಸರ್ಕಾರಿ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಾಲಕ ಗೋಪಾಲರೆಡ್ಡಿ ಜಕ್ಕರೆಡ್ಡಿ(48) ನೇಣಿಗೆ ಶರಣಾದ ವ್ಯಕ್ತಿ. ಗೋಪಾಲರೆಡ್ಡಿ ರಾಣೆಬೆನ್ನೂರು ಡಿಪೋದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕನಾಗಿದ್ದ. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸರಿಯಾಗಿ ಸಂಬಳ ಬಾರದ್ದಕ್ಕೆ ಬೇಸತ್ತು ಚಾಲಕ‌ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಸಂಬಳವಿಲ್ಲದೆ ಇರೋದ್ರಿಂದ ಕುಟುಂಬ ನಿರ್ವಹಣೆಗೆ ಗೋಪಾಲರೆಡ್ಡಿ ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದ. ಆದ್ರೆ ವೇತನ ಸಿಗುವ ಭರವಸೆ ಕೈಬಿಟ್ಟಿದೆ. ಮಾಡಿದ್ದ ಸಾಲ, ಮನೆಯ ಖರ್ಚು ಇವೆಲ್ಲವೂ ಚಾಲಕನ ಮನಸ್ಸಿಗೆ ಘಾಸಿ ಮಾಡಿವೆ. ಈಗಾಗಿ ತನ್ನ ಕುಟುಂಬವನ್ನು ಪೋಷಿಸಲು ನನ್ನಿಂದ ಸಾಧ್ಯವಿಲ್ಲ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ವಾಯವ್ಯ ಸಾರಿಗೆಯಿಂದ ಬಾರದ ಹಣ: ಬೇಸತ್ತ ನಿವೃತ್ತ ಚಾಲಕ ಆತ್ಮಹತ್ಯೆ