ಬಡವರ ಅನ್ನಭಾಗ್ಯಕ್ಕೆ ಕನ್ನ ಹಾಕಿದ ಖದೀಮರು ಲಾರಿ ಸಮೇತ ಅಂದರ್

| Updated By: ಆಯೇಷಾ ಬಾನು

Updated on: Jun 17, 2020 | 3:51 PM

ಧಾರವಾಡ: ಜಗತ್ತೇಲ್ಲಾ ಕೊರೊನಾ ಮಹಾಮಾರಿಗೆ ನಲುಗಿ ಬದುಕೋದಕ್ಕಾಗಿ ಹೋರಾಡ್ತಿದೆ. ಆದ್ರೆ ಧಾರವಾಡ ಜಿಲ್ಲೆಯ ಕೆಲ ಖದಿಮರು ಮಾತ್ರ ಇಂಥ ಸಮಯದಲ್ಲೂ ಬಡವರ ಹೊಟ್ಟೆ ಹೊಡೆದು ಲೂಟಿ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ. ಆದ್ರೆ ಅವರ ಅದೃಷ್ಟ ಕೈಕೊಟ್ಟಿತ್ತು ಅಂತಾ ಕಾಣುತ್ತೆ. ಯಾಕಂದ್ರೆ ಬಡವರಿಗೆ ಸೇರಬೇಕಾಗಿದ್ದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕು ಬಿದ್ದಿದ್ದಾರೆ. ಅನ್ನಭಾಗ್ಯದ ಅಕ್ಕಿಯ ಮೇಲೆ ಮಾಫಿಯಾ ಕಣ್ಣು   ಹೌದು, ಬಡವರು ಉಪವಾಸದಿಂದ ಸಾಯಬಾರದು ಅಂತಾನೇ ಹಿಂದಿನ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿತ್ತು. […]

ಬಡವರ ಅನ್ನಭಾಗ್ಯಕ್ಕೆ ಕನ್ನ ಹಾಕಿದ ಖದೀಮರು ಲಾರಿ ಸಮೇತ ಅಂದರ್
Follow us on

ಧಾರವಾಡ: ಜಗತ್ತೇಲ್ಲಾ ಕೊರೊನಾ ಮಹಾಮಾರಿಗೆ ನಲುಗಿ ಬದುಕೋದಕ್ಕಾಗಿ ಹೋರಾಡ್ತಿದೆ. ಆದ್ರೆ ಧಾರವಾಡ ಜಿಲ್ಲೆಯ ಕೆಲ ಖದಿಮರು ಮಾತ್ರ ಇಂಥ ಸಮಯದಲ್ಲೂ ಬಡವರ ಹೊಟ್ಟೆ ಹೊಡೆದು ಲೂಟಿ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ. ಆದ್ರೆ ಅವರ ಅದೃಷ್ಟ ಕೈಕೊಟ್ಟಿತ್ತು ಅಂತಾ ಕಾಣುತ್ತೆ. ಯಾಕಂದ್ರೆ ಬಡವರಿಗೆ ಸೇರಬೇಕಾಗಿದ್ದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕು ಬಿದ್ದಿದ್ದಾರೆ.

ಅನ್ನಭಾಗ್ಯದ ಅಕ್ಕಿಯ ಮೇಲೆ ಮಾಫಿಯಾ ಕಣ್ಣು 
 ಹೌದು, ಬಡವರು ಉಪವಾಸದಿಂದ ಸಾಯಬಾರದು ಅಂತಾನೇ ಹಿಂದಿನ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಬಡವರಿಗೆ ಒಂದು ರೂಪಾಯಿಗೆ ಒಂದು ಕೇಜಿಯಂತೆ ತಲಾ ಏಳು ಕೆ ಜಿ ಅಕ್ಕಿ ನೀಡಲಾರಂಭಿಸಿತ್ತು. ಇದರಿಂದಾಗಿ ಬಡವರ ಹಸಿದ ಹೊಟ್ಟೆ ಅನ್ನವನ್ನು ಕಾಣುವಂತಾಗಿತ್ತು.

ಆದರೆ ಬಡವರ ಅಕ್ಕಿಯ ಮೇಲೂ ಕೆಲವರ ಕಣ್ಣು ಬಿದ್ದು, ಅದೇ ಈಗ ಅಕ್ಕಿಯ ದೊಡ್ಡ ಮಾಫಿಯಾ ಆಗಿ ಬೆಳೆದು ನಿಂತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಧಾರವಾಡದಲ್ಲಿ ಸೋಮವಾರ ಬಯಲಿಗೆ ಬಂದ ಪ್ರಕರಣ.

ನಿತ್ಯವೂ ಧಾರವಾಡ ಜಿಲ್ಲೆಯೊಂದರಿಂದಲೇ ಅನ್ನಭಾಗ್ಯದ ನೂರಾರು ಕ್ವಿಂಟಾಲ್ ಅಕ್ಕಿ ಮುಂಬೈಗೆ ಹೋಗುತ್ತಿದೆ ಅನ್ನೊ ಆರೋಪವಿತ್ತು. ಜಿಲ್ಲೆಯ ವಿವಿಧ ನ್ಯಾಯ ಬೆಲೆ ಅಂಗಡಿಗಳಿಂದ ನಿತ್ಯವೂ ಹುಬ್ಬಳ್ಳಿಗೆ ಬರುವ ಅನ್ನಭಾಗ್ಯದ ಅಕ್ಕಿ, ಅಲ್ಲಿ ಒಂದು ಬಾರಿ ಪಾಲಿಶ್ ಆಗುತ್ತದೆ. ಹೀಗೆ ಪಾಲಿಶ್ ಆದ ಅಕ್ಕಿಯನ್ನು ಚೀಲಗಳಲ್ಲಿ ಪ್ಯಾಕ್ ಮಾಡಿ ಮುಂಬೈಗೆ ರವಾನಿಸಲಾಗುತ್ತೆ. ಅಲ್ಲಿಂದ ಮುಂದೆ ಬೇರೆ ದೇಶಗಳಿಗೂ ಕೂಡಾ ರಫ್ತಾಗುತ್ತೆ ಅನ್ನೋ ಅನುಮಾನವೂ ಇದೆ.

ಮಾಫಿಯಾಕ್ಕೆ ಅಧಿಕಾರಿಗಳ ಸಾಥ್‌ ?
ಅಚ್ಚರಿ ಅಂದ್ರೆ ಬಡವರ ಅಕ್ಕಿಯನ್ನು ಲೂಟಿ ಮಾಡಿ ಲಕ್ಷ ಲಕ್ಷ ರೂಪಾಯಿ ಕಮಾಯಿಸುತ್ತಿರೋ ಮಾಫಿಯಾಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಕೂಡಾ ಸಾಥ್ ನೀಡುತ್ತಿದ್ದಾರೆ ಎನ್ನೋ ಆರೋಪವಿದೆ. ಇದಕ್ಕೆ ಪೂರಕವೆಂಬಂತೆ ಸೋಮವಾರ ನಡೆದ ಘಟನೆ ಸಾಕ್ಷಿಯಾಗಿದೆ.

ಹುಬ್ಬಳ್ಳಿಯ ಎಪಿಎಂಸಿ ಯಿಂದ  ಮುಂಬಯಿಗೆ..
 ಖಚಿತ ಮಾಹಿತಿ ಮೇರೆಗೆ ಧಾರವಾಡ ಉಪವಿಭಾಗಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 220 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ. ಧಾರವಾಡ ನಗರದ ಹೊರಭಾಗದ ರಾಷ್ಟ್ರೀಯ ಹೆದ್ದಾರಿ 4ರ ನರೇಂದ್ರ ಕ್ರಾಸ್ ಬಳಿ ಅಧಿಕಾರಿಗಳು ಕೆಎ 27/ಎ 2049 ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಈ ಅಕ್ರಮ ಬಯಲಾಗಿದೆ. ಹುಬ್ಬಳ್ಳಿಯ ಎಪಿಎಂಸಿ ಯಿಂದ ಅಕ್ರಮವಾಗಿ ಈ ಅಕ್ಕಿಯನ್ನ ಮುಂಬಯಿಗೆ ಸಾಗಿಸುತ್ತಿರುವ ವಿಷಯ ಹೊರಬಿದ್ದಿದೆ.

ಲಾರಿ ಮತ್ತು ಚಾಲಕ ವಶಕ್ಕೆ
ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಲಾರಿಯನ್ನ ವಶಕ್ಕೆ ಪಡೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರಿಗೆ ಹಸ್ತಾಂತರಿಸಿದ್ದಾರೆ. ಅವರು ನೀಡಿದ ದೂರಿನನ್ವಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಹುಬ್ಬಳ್ಳಿಯ ಶ್ರೀ ಬಾಲಾಜಿ ಟ್ರೇಡಿಂಗ್ ಕಂಪನಿ, ಲಾರಿ ಮಾಲೀಕ ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ  -ನರಸಿಂಹಮೂರ್ತಿ ಪ್ಯಾಟಿ

 

Published On - 2:08 pm, Wed, 17 June 20