ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ನಿಖರ ಕಾರಣ ಬಯಲು, ಅಧಿಕಾರಿಗಳ ತಂಡದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

|

Updated on: Dec 17, 2020 | 8:56 AM

ಬ್ರಹ್ಮಗಿರಿ ಬೆಟ್ಟದ ಸ್ವರೂಪಕ್ಕೆ ಧಕ್ಕೆಯಾಗಿದ್ದರಿಂದ ಬೆಟ್ಟ ಕುಸಿದಿದೆ ಎಂದು ಜಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ನಿಖರ ಕಾರಣ ಬಯಲು, ಅಧಿಕಾರಿಗಳ ತಂಡದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ
Follow us on

ಮಡಿಕೇರಿ: ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಕೇಸ್​ಗೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳ ತಂಡ ವರದಿಯನ್ನು ಸಲ್ಲಿಸಿದೆ. ಆ ವರದಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಕಾರಣವೇನೆಂಬುದನ್ನು ತಿಳಿಸಲಾಗಿದೆ. ಸದ್ಯ ಜಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳು ಬೆಟ್ಟ ಕುಸಿತದ ಬಗ್ಗೆ ತನಿಖೆ ನಡೆಸಿ ವರದಿ ನೀಡಿದ್ದಾರೆ.

ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಕಾರಣವೇನು:
ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದ ಬೆಟ್ಟದಲ್ಲಿ ಇಂಗು ಗುಂಡಿಯನ್ನ ನಿರ್ಮಿಸಿದ್ದರಿಂದ ಅಂತರ್ಜಲ ಹೆಚ್ಚಾಗಿದ್ದು ಮಣ್ಣು ಕುಸಿದಿದೆ. ಹಾಗೂ ಅತಿಯಾದ ಮಳೆಯಿಂದ ದುರಂತ ಸಂಭವಿಸಿದೆ. ರಸ್ತೆ ಕಾಮಗಾರಿಯಿಂದ ಬೆಟ್ಟದ ಮೇಲೆ ಒತ್ತಡ ಹೆಚ್ಚಾಗಿದೆ.

2017ರಿಂದಲೇ ಬೆಟ್ಟದಲ್ಲಿ ದುರಂತ ಸಂಭವಿಸುವ ಮುನ್ಸೂಚನೆ ಇತ್ತು. ಬ್ರಹ್ಮಗಿರಿ ಬೆಟ್ಟದ ಸ್ವರೂಪಕ್ಕೆ ಧಕ್ಕೆಯಾಗಿದ್ದರಿಂದ ಈ ಅನಾಹುತ ಸಂಭವಿಸಿದೆ ಇಂದು ವರದಿಯಲ್ಲಿ ತಿಳಿಸಿಲಾಗಿದೆ. ಹಾಗೂ ಸರ್ಕಾರಕ್ಕೆ ಸಲ್ಲಿಸಿದ ಭೂವಿಜ್ಞಾನಿಗಳ ವರದಿಯಲ್ಲಿ ತಲಕಾವೇರಿಯಲ್ಲಿ ಮತ್ತೆ ಸಮಸ್ಯೆಯಾಗುವ ಬಗ್ಗೆ ಉಲ್ಲೇಖಿಸಲಾಗಿದೆ.

ಅರ್ಚಕರ ಕುಟುಂಬದ ಐವರು ಭೂಸಮಾಧಿ:
ಆಗಸ್ಟ್ 5ರಂದು ಮಧ್ಯರಾತ್ರಿ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಈ ಅನಾಹುತದಲ್ಲಿ ಅರ್ಚಕರ ಕುಟುಂಬದ ಐವರು ಭೂಸಮಾಧಿಯಾಗಿದ್ದರು. ಆಗಸ್ಟ್ 14, 15ರಂದು ಭೇಟಿ ನೀಡಿದ್ದ ವಿಜ್ಞಾನಿಗಳ ತಂಡ ಮೆಲ್ನೋಟಕ್ಕೆ ಮಾನವನ ಹಸ್ತಕ್ಷೇಪ ಕಾರಣ ಎಂದು ಹೇಳಿತ್ತು. ಬಳಿಕ ಅಧಿಕಾರಿಗಳ ತಂಡ16 ಪುಟಗಳ ವರದಿ ಸಲ್ಲಿಸಿತ್ತು. ವರದಿ ಆಧರಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಪರಿಸರವಾದಿಗಳು ಎಚ್ಚರಿಕೆ ನೀಡಿದ್ದರು. ಸದ್ಯ ಈಗ ಜಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದು ಈ ಅನಾಹುತಕ್ಕೆ ಕಾರಣವೇನೆಂಬುವುದನ್ನು ವರದಿ ಮಾಡಿದ್ದಾರೆ.

ಬ್ರಹ್ಮಗಿರಿ ಬೆಟ್ಟ ಕುಸಿತ: ತಲಕಾವೇರಿ ದೇಗುಲದ ಅರ್ಚಕರು, ಕುಟುಂಬಸ್ಥರು ನಾಪತ್ತೆ