ಎದುರು ಮನೆಯವನನ್ನು ನಂಬಿ ಮೋಸ ಹೋದ ವೃದ್ಧೆಗೀಗ ಆಸ್ಪತ್ರೆಗೆ ಹೋಗಲೂ ಹಣವಿಲ್ಲ

ನವೀದಾ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪರದಾಡುತ್ತಿದ್ದಾರೆ.

ಎದುರು ಮನೆಯವನನ್ನು ನಂಬಿ ಮೋಸ ಹೋದ ವೃದ್ಧೆಗೀಗ ಆಸ್ಪತ್ರೆಗೆ ಹೋಗಲೂ ಹಣವಿಲ್ಲ
ವೃದ್ಧೆ ನವೀದಾ ಬೇಗಂ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2020 | 5:02 PM

ದಾವಣಗೆರೆ: ಇಲ್ಲೊಬ್ಬರು ವೃದ್ಧೆ ಎದುರು ಮನೆಯವನನ್ನು ನಂಬಿ ಮೋಸ ಹೋಗಿದ್ದಾರೆ. ಬರೋಬ್ಬರಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬಾಷಾನಗರದ ಮಿಲತ್​ ಕಾಲನಿಯಲ್ಲಿ ಘಟನೆ ನಡೆದಿದ್ದು, ವೃದ್ಧೆ ನವಿದಾ ಬೇಗಂ ಮೋಸ ಹೋದವರು. ತಮ್ಮನ್ನು ಫಯಾಜ್​ ಪಾಷಾ ವಂಚಿಸಿದ್ದಾನೆಂದು ಆರೋಪ ಮಾಡಿದ್ದಾರೆ.

ಪಾಷಾ ಮೊದಲು ಚಿಕ್ಕಪುಟ್ಟ ಸಹಾಯ ಮಾಡಿ ವೃದ್ಧೆಯ ನಂಬಿಕೆ ಗಳಿಸಿದ್ದ. ಆತನನ್ನು ನಂಬಿದ್ದ ನವಿದಾ ಬೇಗಂ ಚೆಕ್​ ಕೊಟ್ಟು ಹಣ ಡ್ರಾ ಮಾಡಿಕೊಡಲು ಹೇಳಿದ್ದರು. ಅದರಂತೆ ಪಾಷಾ 20,000 ರೂಪಾಯಿ ಬ್ಯಾಂಕ್​ನಿಂದ ತಂದುಕೊಟ್ಟಿದ್ದ. ಆದರೆ ನಂತರ ವೃದ್ಧೆಯ ಬಳಿ ಹೋಗಿ, ಚೆಕ್​ನಲ್ಲಿ ಏನೋ ತಪ್ಪಾಗಿದೆ ಎಂದು ಹೇಳಿ ಇನ್ನೊಂದು ಚೆಕ್​ ಪಡೆದುಕೊಂಡಿದ್ದ. ಆ ಚೆಕ್​​ ಮೂಲಕ 12 ಲಕ್ಷ ರೂಪಾಯಿ ಎಗರಿಸಿದ್ದಾನೆ ಎಂದು ನವೀದಾ ಆರೋಪ ಮಾಡಿದ್ದಾರೆ.

ನವೀದಾ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಸು-ಎಮ್ಮೆಗಳ ಕಳ್ಳತನಕ್ಕೆ ಕಂಗೆಟ್ಟ ಕಲಬುರಗಿ ರೈತರು