ಗ್ರಾ.ಪಂ. ಚುನಾವಣೆ ವೈಷಮ್ಯ? ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ..

| Updated By: ಸಾಧು ಶ್ರೀನಾಥ್​

Updated on: Dec 17, 2020 | 1:21 PM

ಗ್ರಾ.ಪಂ. ಚುನಾವಣೆ ವೈಷಮ್ಯ ಹಿನ್ನೆಲೆಯಲ್ಲಿ ಕೈ ನಾಯಕ ಕಿರಣ್ ರಜಪೂತ, ಭರಮಾ ಧೂಪದಾಳೆ ಮೇಲೆ ಫೈರಿಂಗ್ ನಡೆದಿದೆ.

ಗ್ರಾ.ಪಂ. ಚುನಾವಣೆ ವೈಷಮ್ಯ? ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ..
Follow us on

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಇಬ್ಬರು ‘ಕೈ’ ಕಾರ್ಯಕರ್ತ‌ರ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದೆ. ಗ್ರಾ.ಪಂ. ಚುನಾವಣೆ ವೈಷಮ್ಯ ಹಿನ್ನೆಲೆಯಲ್ಲಿ ಈ ಫೈರಿಂಗ್​ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಅಪರಿಚಿತರು ಮಾಸ್ಕ್​ ಧರಿಸಿ 7 ಅಡಿ ದೂರದಿಂದ ಕಿರಣ್ ರಜಪೂತ, ಭರಮಾ ಧೂಪದಾಳೆ ಮೇಲೆ ಫೈರಿಂಗ್ ನಡೆಸಿದ್ದಾರೆ. ಈ ಘಟನೆಯಲ್ಲಿ ಭರಮಾ ಧೂಪದಾಳೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಂಗ್ರೆಸ್​ ಕಾರ್ಯಕರ್ತ ಕಿರಣ್ ರಜಪೂತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪತ್​ ರಾಜ್​ ವಿರುದ್ಧ ಕೊನೆಗೂ ಬಾಯ್ಬಿಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​! ಏನು ಕ್ರಮ?

Published On - 12:53 pm, Thu, 17 December 20