H.ವಿಶ್ವನಾಥ್‌ ಬಳಿ ಹೋರಾಟ ಮಾಡೋದು ಹೇಗೆಂದು ಕರೆಸಿಕೊಂಡು ಪಾಠ ಹೇಳಿಸಿಕೊಳ್ಳುವೆ -ಸಿದ್ದು ಟಾಂಗ್​

ಹೆಚ್‌.ವಿಶ್ವನಾಥ್‌ರನ್ನು ಕರೆಸಿಕೊಂಡು ಪಾಠ ಹೇಳಿಸಿಕೊಳ್ಳುವೆ. ಹೋರಾಟ ಮಾಡೋದು ಹೇಗೆಂದು ಪಾಠ ಹೇಳಿಸಿಕೊಳ್ಳುವೆ ಎಂದು ವಿಶ್ವನಾಥ್‌ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಯವಾಗಿ ತಿರುಗೇಟು ಕೊಟ್ಟಿದ್ದಾರೆ.

H.ವಿಶ್ವನಾಥ್‌ ಬಳಿ ಹೋರಾಟ ಮಾಡೋದು ಹೇಗೆಂದು ಕರೆಸಿಕೊಂಡು ಪಾಠ ಹೇಳಿಸಿಕೊಳ್ಳುವೆ -ಸಿದ್ದು ಟಾಂಗ್​
ಹೆಚ್‌.ವಿಶ್ವನಾಥ್‌ (ಎಡ); ಸಿದ್ದರಾಮಯ್ಯ (ಬಲ)

Updated on: Jan 05, 2021 | 7:33 PM

ಬೆಂಗಳೂರು: ಹೆಚ್‌.ವಿಶ್ವನಾಥ್‌ರನ್ನು ಕರೆಸಿಕೊಂಡು ಪಾಠ ಹೇಳಿಸಿಕೊಳ್ಳುವೆ. ಹೋರಾಟ ಮಾಡೋದು ಹೇಗೆಂದು ಪಾಠ ಹೇಳಿಸಿಕೊಳ್ಳುವೆ ಎಂದು ವಿಶ್ವನಾಥ್‌ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಯವಾಗಿ ತಿರುಗೇಟು ಕೊಟ್ಟಿದ್ದಾರೆ.

ನಾವು ಯಾವುದೇ ರೀತಿಯ ಹೋರಾಟವನ್ನೂ ಮಾಡಿಲ್ಲ. ಹೆಚ್‌.ವಿಶ್ವನಾಥ್ ಬಹಳ ಹೋರಾಟ ಮಾಡಿದ್ದಾರಲ್ಲಾ? ಹಾಗಾಗಿ, ಏನು ಹೋರಾಟ ಮಾಡಿದ್ದಾರೆಂದು ಪಾಠ ಹೇಳಿಸಿಕೊಳ್ಳುವೆ ಎಂದು ಸಿದ್ದರಾಮಯ್ಯ ಟಾಂಗ್​ ಕೊಟ್ಟರು. ಜನ ಸಿಎಂರನ್ನಾಗಿ ಮಾಡಿದ್ರು, ಆಗಿದ್ದೆ ಅಷ್ಟೇ ಎಂದು ಹೇಳಿದರು.

ಸಿಎಂ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣ ವಿಚಾರವಾಗಿ ನಾನು ಇನ್ನೂ ಕೋರ್ಟ್​ ಆದೇಶದ ಪ್ರತಿ ನೋಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕೋರ್ಟ್​ ಆದೇಶದ ಪ್ರತಿ‌ ನೋಡಿದ ಬಳಿಕ ಮಾತಾಡುವೆ. ದೇವರಜೀವನಹಳ್ಳಿ ಪ್ರಕರಣದಲ್ಲಿ ರಾಜೀನಾಮೆ ಕೇಳಿದ್ದೆವು. ಆದರೆ, ಸಿಎಂ ಯಡಿಯೂರಪ್ಪ ಭಂಡತನ ತೋರಿಸಿದ್ದರು. ಈಗಲೂ ಕೂಡ ಹಾಗೆಯೇ ಮಾಡುತ್ತಾರೆ ಅನಿಸುತ್ತೆ ಎಂದು ಹೇಳಿದರು.

ಗ್ರಾ.ಪಂ.ಗಳಲ್ಲಿ ಜೆಡಿಎಸ್​ ಸದಸ್ಯರನ್ನ ಕಾಂಗ್ರೆಸ್​ ಸೆಳೆಯುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ನಾವು ಯಾವ ಪಕ್ಷದ ಸದಸ್ಯರನ್ನೂ ಸೆಳೆಯುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ, ಅವರೇ ಪಕ್ಷಕ್ಕೆ ಸೇರಲು ಬಯಸಿದರೆ ಬೇಡ ಎನ್ನಲಾಗಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನ ಸ್ವಾಗತಿಸ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟರು.

ಅಪ್ಪನ ಜೊತೆಯಲ್ಲಿ ಮಗ ಇದ್ದರೇ ತಪ್ಪೇನು? -ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್​

Published On - 7:31 pm, Tue, 5 January 21