ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನಿಂದ ಐಸೋಲೇಷನ್ ವಾರ್ಡ್ ಸೇರಿದ್ದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವೈರಸ್ ಅಟ್ಯಾಕ್ ಆಗಿದ್ದ ಕಾರಣ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ದಾಖಲಾಗಿದ್ದರು.
ಕೊರೊನಾ ಸೋಂಕು ತಗುಲಿದ ಕಾರಣ 7 ದಿನದ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಕಾರ್ಪೊರೇಟರ್ ಇಮ್ರಾನ್ ಪಾಷಾ ದಾಖಲಾಗಿದ್ದರು. ಇದೀಗ ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿದ್ದು, ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಮ್ರಾನ್ ಪಾಷಾ ಅದ್ಧೂರಿ ಸ್ವಾಗತಕ್ಕೆ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆಸ್ಪತ್ರೆ ಬಳಿ ಇಮ್ರಾನ್ ಪಾಷಾ ಬೆಂಬಲಿಗರು ಜಮಾಯಿಸಿದ್ದಾರೆ.
ರೋಡ್ ಶೋ ಮೂಲಕ ತೆರಳಿದ ಕಾರ್ಪೊರೇಟರ್:
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಇಮ್ರಾನ್ ಪಾಷಾ ರೋಡ್ ಶೋ ನಡೆಸುತ್ತಿದ್ದಾರೆ. ಇಮ್ರಾನ್ ಕಾರಿನ ಹಿಂದೆ ಮುಂದೆ ಬೆಂಬಲಿಗರ ವಾಹನಗಳಿವೆ. ಇನ್ನೂ 7 ದಿನಗಳ ಕಾಲ ಇಮ್ರಾನ್ ಪಾಷಾ ಹೋಮ್ ಕ್ವಾರಂಟೈನ್ನಲ್ಲಿರಬೇಕಿದ್ರೆ. ಆದರೂ ಸಾಮಾಜಿಕ ಅಂತರವಿಲ್ಲದೆ ಸಾರ್ವಜನಿಕರ ಮಧ್ಯೆ ರೋಡ್ ಶೋ ಮೂಲಕ ಇಮ್ರಾನ್ ಪಾಷಾ ತೆರಳುತ್ತಿದ್ದಾರೆ.
Published On - 2:40 pm, Sun, 7 June 20