ವರ್ಷಗಳಿಂದ ಆಗದ ರಸ್ತೆ ದುರಸ್ತಿ: ಕಿತ್ತು ಹೋದ ರಸ್ತೆಯಲ್ಲಿ ಭತ್ತ ನಾಟಿ..

ಹಾವೇರಿ: ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ರಾಜ್ಯ ಹೆದ್ದಾರಿ 26 ಹಾದು ಹೋಗಿದೆ. ಆದರೆ ಈ ರಸ್ತೆಗೆ ಸುಮಾರು 30 ವರ್ಷಗಳಿಂದ ದುರಸ್ತಿ ಭಾಗ್ಯ ಸಿಕ್ಕಿಲ್ಲ. ರಸ್ತೆ ಮಾರ್ಗವಾಗಿ ಪ್ರತಿನಿತ್ಯವೂ ಹುಬ್ಬಳ್ಳಿ, ರಾಣೆಬೆನ್ನೂರು, ಹಳ್ಳೂರು, ಹೊನ್ನಾಳಿ ಮತ್ತು ಶಿವಮೊಗ್ಗಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಿತ್ತು ಹೋಗಿ ಗುಂಡಿಗಳಂತೆ ಆಗಿರುವ ರಸ್ತೆಯಲ್ಲಿ ವಾಹನಗಳು ಸರ್ಕಸ್ ಮಾಡುತ್ತಾ ಓಡಾಡುತ್ತವೆ. ಕಿತ್ತು ಹೋದ ರಸ್ತೆಯಲ್ಲಿ ಭತ್ತ ನಾಟಿ.. ಸುಮಾರು ವರ್ಷಗಳಿಂದ ರಸ್ತೆ ಕಿತ್ತು ಹೋಗಿ ಸಂಚಾರಕ್ಕೆ ಸಾಕಷ್ಟು […]

ವರ್ಷಗಳಿಂದ ಆಗದ ರಸ್ತೆ ದುರಸ್ತಿ: ಕಿತ್ತು ಹೋದ ರಸ್ತೆಯಲ್ಲಿ ಭತ್ತ ನಾಟಿ..

Updated on: Aug 12, 2020 | 11:39 AM

ಹಾವೇರಿ: ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ರಾಜ್ಯ ಹೆದ್ದಾರಿ 26 ಹಾದು ಹೋಗಿದೆ. ಆದರೆ ಈ ರಸ್ತೆಗೆ ಸುಮಾರು 30 ವರ್ಷಗಳಿಂದ ದುರಸ್ತಿ ಭಾಗ್ಯ ಸಿಕ್ಕಿಲ್ಲ. ರಸ್ತೆ ಮಾರ್ಗವಾಗಿ ಪ್ರತಿನಿತ್ಯವೂ ಹುಬ್ಬಳ್ಳಿ, ರಾಣೆಬೆನ್ನೂರು, ಹಳ್ಳೂರು, ಹೊನ್ನಾಳಿ ಮತ್ತು ಶಿವಮೊಗ್ಗಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಿತ್ತು ಹೋಗಿ ಗುಂಡಿಗಳಂತೆ ಆಗಿರುವ ರಸ್ತೆಯಲ್ಲಿ ವಾಹನಗಳು ಸರ್ಕಸ್ ಮಾಡುತ್ತಾ ಓಡಾಡುತ್ತವೆ.

ಕಿತ್ತು ಹೋದ ರಸ್ತೆಯಲ್ಲಿ ಭತ್ತ ನಾಟಿ..
ಸುಮಾರು ವರ್ಷಗಳಿಂದ ರಸ್ತೆ ಕಿತ್ತು ಹೋಗಿ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದರೆ ರಸ್ತೆ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಈ ರಸ್ತೆಯಲ್ಲಿ ಓಡಾಡೋ ವಾಹನಗಳು ಮತ್ತು ಸವಾರರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತೆ ಇರುತ್ತದೆ.

ರಸ್ತೆ ದುರಸ್ತಿ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡೆಗೆ ಬೇಸತ್ತು ಗ್ರಾಮಸ್ಥರು ಕಿತ್ತು ಹೋದ ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯ ಗಡಿ ಗ್ರಾಮ ಆಗಿರುವ ಹಳ್ಳೂರು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಗ್ರಾಮವಾಗಿದೆ. ಈ ಗ್ರಾಮದ ಮಾರ್ಗವಾಗಿ ಸಾಕಷ್ಟು ಜನರು ಮತ್ತು ವಾಹನಗಳು ಓಡಾಡುತ್ತವೆ. ಇಷ್ಟಾದರೂ ಸಹ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿಲ್ಲ.

ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿರುವ ರಸ್ತೆಯಲ್ಲಿ ಸಂಚರಿಸುವ ಜನರು ಮತ್ತು ವಾಹನಗಳು ಸ್ವಲ್ಪವೇ ಯಾಮಾರಿದರೂ ಯಮಲೋಕ ಸೇರುವುದು ಗ್ಯಾರಂಟಿ. ಇಷ್ಟಾದರೂ ಯಾರೂ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.

ಇದರಿಂದ ಬೇಸತ್ತು ಗ್ರಾಮಸ್ಥರು ಕಿತ್ತು ಹೋದ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸೋಕೆ ಮುಂದಾಗಿದ್ದಾರೆ.

ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲ್ಲಿ..
ಸುಮಾರು ವರ್ಷಗಳಿಂದ ದುರಸ್ತಿ ಭಾಗ್ಯ ಕಾಣದ ಈ ರಸ್ತೆಯಲ್ಲಿ ಜನರು ಮತ್ತು ವಾಹನಗಳಿಗೆ ಸಾಕಷ್ಟು ಹಾನಿಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಲ್ಲ ಗೊತ್ತಿದ್ದರೂ ಯಾರೂ ಸಹ ರಸ್ತೆ ದುರಸ್ತಿ ಕಾರ್ಯಕ್ಕೆ ಮನಸ್ಸು ಮಾಡುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಿ ಬಹಳ ವರ್ಷಗಳಿಂದ ದುರಸ್ತಿ ಭಾಗ್ಯ ಕಾಣದೆ ನೆನೆಗುದಿಗೆ ಬಿದ್ದಿರುವ ರಾಜ್ಯ ಹೆದ್ದಾರಿಯ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
-ಪ್ರಭುಗೌಡ ಎನ್.ಪಾಟೀಲ

 

Published On - 11:36 am, Wed, 12 August 20