‘ಅನಗತ್ಯ ಮಾತ್ನಾಡದಂತೆ ಕಾಂಗ್ರೆಸ್‌ ನಾಯಕರಿಗೆ ಸೂಚನೆ, BL ಸಂತೋಷ್​ ಏನ್​ ರಾಜಕಾರಣ ಮಾಡ್ತಾರೋ ಮಾಡ್ಲಿ’

[lazy-load-videos-and-sticky-control id=”_u3miouDNWM”] ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಕೇಸ್ ಕುರಿತು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಶಾಸಕರಾಗಲಿ, ಯಾರೇ ಆಗಲಿ ದಾಳಿ ಮಾಡಬಾರದು. ನಾನು ಘಟನೆಯನ್ನ ಖಂಡಿಸುತ್ತೇನೆ. ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಯಾರೂ ಮಾಡಬಾರದು. ಪ್ರಚೋದನಕಾರಿ ಪೋಸ್ಟ್ ಹಾಕುವುದು ಕೂಡ ಸರಿಯಲ್ಲ. ಅದು ತಪ್ಪು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜೊತೆಗೆ, ಬೆಂಗಳೂರು‌ ಶಾಸಕರ ಸಭೆ ಕರೆದಿದ್ದೇನೆ. ಈ ಕುರಿತು ಚರ್ಚೆ ಮಾಡ್ತೇವೆ. ಗಲಾಟೆ ಪ್ರಕರಣದ ಹಿಂದೆ ವ್ಯವಸ್ಥಿತವಾದ ಸಂಚು […]

‘ಅನಗತ್ಯ ಮಾತ್ನಾಡದಂತೆ ಕಾಂಗ್ರೆಸ್‌ ನಾಯಕರಿಗೆ ಸೂಚನೆ, BL ಸಂತೋಷ್​ ಏನ್​ ರಾಜಕಾರಣ ಮಾಡ್ತಾರೋ ಮಾಡ್ಲಿ’
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 12, 2020 | 12:32 PM

[lazy-load-videos-and-sticky-control id=”_u3miouDNWM”]

ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಕೇಸ್ ಕುರಿತು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಶಾಸಕರಾಗಲಿ, ಯಾರೇ ಆಗಲಿ ದಾಳಿ ಮಾಡಬಾರದು. ನಾನು ಘಟನೆಯನ್ನ ಖಂಡಿಸುತ್ತೇನೆ. ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಯಾರೂ ಮಾಡಬಾರದು. ಪ್ರಚೋದನಕಾರಿ ಪೋಸ್ಟ್ ಹಾಕುವುದು ಕೂಡ ಸರಿಯಲ್ಲ. ಅದು ತಪ್ಪು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಜೊತೆಗೆ, ಬೆಂಗಳೂರು‌ ಶಾಸಕರ ಸಭೆ ಕರೆದಿದ್ದೇನೆ. ಈ ಕುರಿತು ಚರ್ಚೆ ಮಾಡ್ತೇವೆ. ಗಲಾಟೆ ಪ್ರಕರಣದ ಹಿಂದೆ ವ್ಯವಸ್ಥಿತವಾದ ಸಂಚು ಇದೆ. ಬಿಜೆಪಿ ನಾಯಕ BL ಸಂತೋಷ್​ ಏನು ರಾಜಕಾರಣ ಮಾಡ್ತಾರೋ ಮಾಡಲಿ. ರಾತ್ರಿಯಿಂದ ನಾನು ಎಲ್ಲ ರೀತಿ ಮಾಹಿತಿ ಪಡೆದಿದ್ದೇನೆ. ನಮ್ಮ ಶಾಸಕರೂ ಸ್ಥಳಕ್ಕೆ ಹೋಗಿ ಶಾಂತಿ ನೆಲೆಸುವಂತೆ ಪ್ರಯತ್ನ ಮಾಡಿದ್ದಾರೆ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜೊತೆಗೆ, ಸಿ.ಟಿ ರವಿ ಅಥವಾ ಇನ್ಯಾರದ್ದೋ ಹೇಳಿಕೆ ಬಗ್ಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ಹೇಳಿದ್ದಾರೆ.

ಇದಲ್ಲದೆ, ಡಿ.ಕೆ.ಶಿವಕುಮಾರ್ ತಮ್ಮ ಕಾಂಗ್ರೆಸ್‌ ನಾಯಕರಿಗೆ ಅನಗತ್ಯವಾಗಿ ಮಾತನಾಡದಂತೆ ಸೂಚಿಸಿದ್ದಾರೆ. ಹಿರಿಯ ನಾಯಕರಷ್ಟೆ ಮಾತನಾಡಬೇಕು. ಜೊತೆಗೆ, ಬಿಜೆಪಿ ನಾಯಕರ ಪ್ರತಿ ಹೇಳಿಕೆಗೂ ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಿದ್ದಾರೆ. ಗಲಭೆಗೆ ಯಾರನ್ನೂ ಸಮರ್ಥಿಸಿವುದು ಬೇಡ. ತಪ್ಪನ್ನ ತಪ್ಪು ಎಂದು ನೇರವಾಗಿ ಹೇಳಿ ಎಂದು ಹಿರಿಯ ನಾಯಕರಿಗೆ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದಾರೆ.

Published On - 10:53 am, Wed, 12 August 20