ಆ್ಯಡಮ್ ಪಾಷಾ.. ಪುರುಷರ ಜೈಲಿಗೋ ಅಥವಾ ಮಹಿಳಾ ಜೈಲಿಗೋ: ಎದುರಾಯ್ತು ‘ದೊಡ್ಡ ಸಮಸ್ಯೆ’!?

ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್​ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ಬಂಧನಕ್ಕೆ (ಜೆಸಿ) ಒಪ್ಪಿಸಿತು. ಅದರಂತೆ ಆ್ಯಡಮ್ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡುವಾಗ ದೊಡ್ಡ ಡ್ರಾಮಾ ನಡೆದಿದೆ. ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕು ಅಂತಾ ಆಳವಾದ ಚರ್ಚೆ ನಡೆಯಿತು. ಆ್ಯಡಮ್ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ ನಾನು […]

ಆ್ಯಡಮ್ ಪಾಷಾ.. ಪುರುಷರ ಜೈಲಿಗೋ ಅಥವಾ ಮಹಿಳಾ ಜೈಲಿಗೋ: ಎದುರಾಯ್ತು ‘ದೊಡ್ಡ ಸಮಸ್ಯೆ’!?

Updated on: Oct 22, 2020 | 2:20 PM

ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್​ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ಬಂಧನಕ್ಕೆ (ಜೆಸಿ) ಒಪ್ಪಿಸಿತು. ಅದರಂತೆ ಆ್ಯಡಮ್ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡುವಾಗ ದೊಡ್ಡ ಡ್ರಾಮಾ ನಡೆದಿದೆ. ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕು ಅಂತಾ ಆಳವಾದ ಚರ್ಚೆ ನಡೆಯಿತು.

ಆ್ಯಡಮ್ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ ನಾನು ಯುವತಿಯರ ವಸ್ತ್ರಗಳನ್ನು ಧರಿಸುತ್ತೇನೆ ಅಷ್ಟೆ..! ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಅಂತಾ ಪಾಷಾ ಜೈಲಾಧಿಕಾರಿ ತಿಳಿಸಿದ್ದಾನೆ.

ಆದ್ರೆ ಪಾಷಾನನ್ನು ಗಂಡು ಕೈದಿಗಳ ಸೆಲ್​ಗೆ ಹಾಕೋದಾ..? ಇಲ್ಲಾ ಪಾಷಾನನ್ನು ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ..? ಎಂದು ಕೆಲ ಕಾಲ ಜೈಲು ಅಧಿಕಾರಿಗಳು ಗೊಂದಕ್ಕಿಡಾದರು. ಈ ಮಧ್ಯೆ, ಸದ್ಯ ಜೈಲಿನಲ್ಲಿ ಆತನನ್ನು ಮಂಗಳಮುಖಿಯರ ಸೆಲ್​ಗೆ ಹಾಕೋದು ಕಷ್ಟ ಎಂದೂ ತರ್ಕಿಸಲಾಯಿತು.

ಅದಕ್ಕೂ ಆ್ಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಅಂತಾ ಮಾಹಿತಿ ಒದಗಿಸಿದ್ದಾನೆ. ಕೊನೆಗೆ ಆ್ಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್​ಗೆ ಹಾಕಿ, ಜೈಲು ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದುಬಂದಿದೆ.

Published On - 2:19 pm, Thu, 22 October 20